ಶ್ರೀಮಧ್ವಾಚಾರ್ಯರ ಸರ್ವಮೂಲ ಗ್ರಂಥಗಳ ಸಮಗ್ರ ಪಾರಾಯಣದ ಮಂಗಲೋತ್ಸವ

ಆಚಾರ್ಯ ಮಧ್ವರ ಅವತಾರ ಭೂಮಿಯಾದ ಪಾಜಕಕ್ಷೇತ್ರದಲ್ಲಿ, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ ಸಂಕಲ್ಪದಂತೆ ವಿಜಯದಶಮಿಯ ಪ್ರಯುಕ್ತ ಸಮಾಜದ ಲೋಕ ಕಲ್ಯಾಣಕ್ಕಾಗಿ ನಾಡಿನ ಅನೇಕ ವಿದ್ವಾಂಸರಿಂದ ಶ್ರೀಮಧ್ವಾಚಾರ್ಯರ ಸರ್ವಮೂಲ ಗ್ರಂಥಗಳ ಸಮಗ್ರ ಪಾರಾಯಣವು ನಡೆಯುತ್ತಿದ್ದು ಅದರ ಮಂಗಲೋತ್ಸವವು ನಡೆಯಿತು. ಈ ಸಂದರ್ಭದಲ್ಲಿ, ವಿಷ್ಣು ಸರ್ವೋತ್ತಮತತ್ವದೊಂದಿಗೆ, ಪ್ರಪಂಚದ ಸರ್ವ ಜೀವಿಗಳು ಸಕಲ ವೇದ ಪ್ರತಿಪಾದ್ಯನಾಗಿ ಸ್ವಾತಂತ್ರ್ಯನಾದ ಸಕಲಗುಣಪರಿಪೂರ್ಣನಾದ ದೋಷರಹಿತನಾದ ಶ್ರೀ ಹರಿಯ ದಾಸರು ನಿರ್ಮಲವಾದ ಭಕ್ತಿಯೇ ಮುಕ್ತಿಯ ಸಾಧನ ಎಂಬುದನ್ನು ತ್ರೈಲೋಕಾಚಾರ್ಯರಾದ ವಾಯುದೇವರ ತೃತೀಯಾವತಾರದಲ್ಲಿ ಆಚಾರ್ಯ ಮಧ್ವರು ತಮ್ಮ ಸರ್ವಮೂಲ ಗ್ರಂಥದಲ್ಲಿ ತಿಳಿಸಿದ್ದಾರೆ. ಸುಮಾರು 5 ವರ್ಷಗಳಿಂದ ನಡೆಯುತ್ತಿರುವ ಈ ಸೇವೆಯು ಹರಿಗುರುಗಳ ಚಿತ್ತಕ್ಕೆ ಬರುವುದರ ಮೂಲಕ ಸಮಾಜದ ಸಮಸ್ತ ಜನತೆಗೆ ಸನ್ಮಾ0ಗಲವಾಗಲಿ ಎಂದು ಕಾಣಿಯೂರು ಶ್ರೀ ಪಾದರು ಅನುಗ್ರಹ ಸಂದೇಶ ನೀಡಿದರು. ಪಾರಾಯಣ ಮಾಡಿದ ವಿದ್ವಾಂಸರಿಗೆ ಅನುಗ್ರಹ ಮಂತ್ರಾಕ್ಷತೆಯೊಂದಿಗೆ ಸರ್ವಮೂಲ ಪ್ರಸಾದ ಎನ್ನುವ ಫಲಕವನ್ನು ನೀಡಿ ಹರಸಿದರು.

 
 
 
 
 
 
 
 
 
 
 

Leave a Reply