ಗದ್ದೆಯಲ್ಲಿ ನಿರಂತರ 3 ತಾಸು ಕಳೆ ಕಿತ್ತ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು

ಕಲ್ಯಾಣಪುರ: ಮಿಲಾಗ್ರಿಸ್ ಕಾಲೇಜಿನ ಐವತ್ತು ಎನ್ ಎಸ್ ಎಸ್ ವಿದ್ಯಾರ್ಥಿಗಳು ಪುತ್ತೂರಿನ ಗದ್ದೆಯಲ್ಲಿ ನಿರಂತರ 3 ತಾಸು ಕಳೆಯನ್ನು ಕಿತ್ತು ಸಮಾಜ ಸೇವೆ ಮಾಡಿದರು. ಕಾಲೇಜಿನ ಉಪನ್ಯಾಸಕಿ ಅನುಪಮಾ ಈ ಮಕ್ಕಳೊಂದಿಗೆ ಇದ್ದು ಮಾರ್ಗದರ್ಶನ ನೀಡಿದರು.

ಮೂರನೇ ಬಾರಿಗೆ ಕಳೆ ಕೀಳಲು ತಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ಕಳುಹಿಸಿ ಟ್ರಸ್ಟಿಗೆ ಪ್ರೋತ್ಸಾಹ ನೀಡಿದ ಕಾಲೇಜಿನ ಪ್ರಾಂಶುಪಾಲರನ್ನು ಟ್ರಸ್ಟಿನ ಕಾರ್ಯದರ್ಶಿ ಮುರಳಿ ಕಡೆಕಾರ್ ಹಾಗೂ ಕೋಶಾಧಿಕಾರಿ ಕೆ. ರಾಘವೇಂದ್ರ ಕಿಣಿ ವಿಶೇಷವಾಗಿ ಅಭಿನಂದಿಸಿದರು. ಸುಬ್ರಹ್ಮಣ್ಯ ನಗರ ವಾರ್ಡಿನ ನಗರಸಭಾ ಸದಸ್ಯೆ ಜಯಂತಿ ಪೂಜಾರಿ ಹಾಗೂ ಕೃಷ್ಣಪ್ಪ ಪೂಜಾರಿ ಉಪಸ್ಥಿತರಿದ್ದರು.

ಪುತ್ತೂರಿನ ಸುಮಾರು ಹನ್ನೊಂದು ಎಕರೆ ಗದ್ದೆಯ ಉಸ್ತುವಾರಿಯನ್ನು ಉದ್ಯಮಿ ಪಿ.ದಿನೇಶ್ ಪೂಜಾರಿ  ಶ್ರದ್ಧೆಯಿಂದ ನಿರ್ವಹಿಸುತ್ತಿದ್ದಾರೆ.ಪುತ್ತೂರು ದೇವಾಲಯದ ಧರ್ಮದರ್ಶಿ ಪಿ.ಕೃಷ್ಣಮೂರ್ತಿ ಭಟ್ ವಿದ್ಯಾರ್ಥಿಗಳಿಗೆ ಉಪಾಹಾರ ಹಾಗೂ ಭೋಜನದ ವ್ಯವಸ್ಥೆ ಮಾಡಿದ್ದರು.

 
 
 
 
 
 
 
 
 
 
 

Leave a Reply