ಮೀನುಗಾರರಿಂದಲೇ ಮೀನುಗಾರರ ರಕ್ಷಣೆ 

ಮಲ್ಪೆ: ಒಂದಡೆ 2-3 ದಿನಂದಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಲ್ಲಿ ಉಡುಪಿ ಜನಜೀವನ ಅಸ್ತವ್ಯಸ್ಥೆಯಾದರೆ, ಇನ್ನೊಂದಡೆ ಮಲ್ಪೆ ಸಮದ್ರದಲ್ಲಿ ಕಡಲಮಕ್ಕಳ ಜೀವನ್ಮರಣ ಹೋರಾಟ 
ಬೆಳಿಗ್ಗೆಯ ಕಥೆ/ವ್ಯಥೆ 
ಮೀನುಗಾರರ ರಕ್ಷಣೆ ಮೀನುಗಾರರೇ ಮಾಡುವುದೆಂದು ಮತ್ತೊಮ್ಮೆ ಸಾಬೀತು ಪಡಿಸಿದ ಮಲ್ಪೆಯ ಮೀನುಗಾರರು. ಒಂದಡೆ 2-3 ದಿನಂದಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಲ್ಲಿ ಉಡುಪಿ ಜನಜೀವನ ಅಸ್ತವ್ಯಸ್ತೆಯಾಗಿದೆ. ಇನ್ನೊಂದಡೆ ಭಾನುವಾರ ಬೆಳಿಗ್ಗೆ ಗಂಟೆ 5.30ಕ್ಕೆ  ಕಡಲ ಮಧ್ಯದಲ್ಲಿ ಶೈಲಜಾ ಹೆಸರಿನ 370 ಬೋಟ್ ಸಮುದ್ರದಲ್ಲಿ ತುಫಾನ್ ಗೆ ಸಿಲುಕಿ ಕಂಗಾಲಾಗಿದ್ದ ಸಂದರ್ಭ.
ಸಹಾಯಕ್ಕಾಗಿ ಪಕ್ಕದಲ್ಲಿ ಯಾರೂ ಇಲ್ಲದಿದ್ದರೂ ದ್ರಿತಿಗೆಡದೆ ಸಮುದ್ರ ಮಧ್ಯೆ ಮುಳುಗುತ್ತಿರುವ ಬೋಟ್ ನಲ್ಲಿ ಜೀವ ಕೈಯಲ್ಲಿ ಹಿಡಿದು ಪರದಾಡುತ್ತಿದ್ದು ವಯರ್ ಲೆಸ್ ಮೂಲಕ  ಹೇಗೋ ಮಲ್ಪೆ ದಡದಲ್ಲಿರುವ ಮೀನುಗಾರರಿಗೆ ವಿಷಯ ತಿಳಿಸಿದರು. ಕೂಡಲೇ ಸ್ಥಳೀಯ ಮೀನುಗಾರರು ಜಾಗ್ರತರಾಗಿ  ಕರಾವಳಿ ಕಾವಲು ಪಡೆಗೆ ವಿಷಯ ಮುಟ್ಟಿಸಿದರು.
ಆದರೆ ಮುಳುಗುತ್ತಿರುವ ಬೋಟ್ ಇರುವ ಸ್ಥಳಕ್ಕೆ ಮೀನುಗಾರರನ್ನು ರಕ್ಷಣೆ ಮಾಡಲು, ಹೋಗಲು ಯಾವುದೇ ಬೋಟ್ ಕಾವಲು ಪಡೆಯ ಬಳಿ ಇಲ್ಲವೆಂದು ಗೊತ್ತಾದಾಗ, ಕೊನೆ ಘಳಿಗೆ ಯಲ್ಲಿ ಸ್ಥಳೀಯ ಮೀನುಗಾರರಾದ ಶಶಿಧರ್ ಮಟ್ಟು, ಗಣೇಶ್ ಸುವರ್ಣ ಕಲ್ಮಾಡಿ, ಕಿಶೋರ್ ಬೈಲಕೆರೆ  ಹಾಗು ಗಣೇಶ್ ರವರು ತಮ್ಮ ಜೀವದ ಹಂಗು ತೊರೆದು ಟ್ರಾಲ್ ದೋಣಿ ಮೂಲಕ ಮುಳುಗುತ್ತಿರುವ ಬೋಟ್ ನಲ್ಲಿಗೆ ಧಾವಿಸಿ  ಐದು ಜನ ಮೀನುಗಾರರ ಪ್ರಾಣ ರಕ್ಷಣೆ ಮಾಡಿ ಸಾಹಸ ಮೆರೆದರು.
ಸಂಜೆಯ ಕಥೆ/ವ್ಯಥೆ   
ಇದೇ ರೀತಿ  ಜಲಸಂಪತ್ತು ಹೆಸರಿನ ಬಾರ್9 ಎಂಬ ಬೋಟ್ ಸಂಜೆ ಗಂಟೆ 4.30ಕ್ಕೆ ಸಮುದ್ರದಲ್ಲಿ ಗಾಳಿಗೆ ಸಿಲುಕಿ ಮುಳುಗುತ್ತಿರುವ ಸಂದರ್ಭ ಶೈಲಜಾ ಬೋಟ್ ನಂತೆ ಸಹಾಯಕ್ಕೆ ಯಾರು ಇರಲಿಲ್ಲ. ಇಲ್ಲಿ ಕೂಡಾ ಸ್ಥಳೀಯ ಮೀನು ಗಾರರೇ ಸಹಾಸದಿಂದ ರಕ್ಷಣೆ ಮಾಡಿದ ಘಟನೆ ಮಲ್ಪೆಯಲ್ಲಿ ನಡೆದಿದೆ.
ಶಶಿಧರ ಬೆಂಗ್ರೆ, ಅಶೋಕ್, ಮೋಹನ್ ಕುಂದರ್, ಗಣೇಶ್ ಸುವರ್ಣ ಹಾಗು ಕರಾವಳಿ ಕಾವಲು ಪಡೆಯ ಎರಡು ಸಿಬ್ಬಂದಿಯೊಂದಿಗೆ ಮೀನುಗಾರರ ಬೊಟ್ ನಲ್ಲಿ  ಮುಳುಗುತ್ತಿರುವ ಬೋಟ್ ಇದ್ದ ಸ್ಥಳಕ್ಕೆ ಧಾವಿಸಿದರು. ಸಮುದ್ರ  ಬಹಳ ರಫ್ ಇದ್ದ ಕಾರಣ ಕಾರ್ಯಾಚರಣೆ ವಿಳಂಬವಾಯಿತು. ತುಂಬಾ ಶ್ರಮ ಪಟ್ಟು ಬೋಟ್ ನಲ್ಲಿದ್ದ ಆರು ಜನರನ್ನು ರಕ್ಷಣೆ ಮಾಡಿದರು. ಅಂತೂ ಸಂಜೆಯ ವೇಳೆಗೆ ಮೀನುಗಾರರೆಲ್ಲರೂ ದೂಡ್ಡ ನಿಟ್ಟುಸಿರು ಬಿಟ್ಟರು.
ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ಸ್ಥಳೀಯ ಮೀನುಗಾರರೊಂದಿಗೆ ಸೇರಿಕೊಂಡು ಸೈನ್ಟ್ ಮೇರಿಸ್ ದ್ವೀಪದ ಪಕ್ಕ ಬೋಟ್ನಲ್ಲಿ ಸಿಲುಕಿ ಹಾಕಿಕೊಂಡವರನ್ನು ರಕ್ಷಣೆ ಮಾಡುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದೆವು. ಬಳಿಕ ಬೊಟ್ ನಲ್ಲಿ ಸಿಲುಕಿ ಕೊಂಡವರನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಡಲಾಗಿದೆ.
ಚೇತನ್ ಕುಮಾರ್ , ಅಧೀಕ್ಷಕರು, ಕರಾವಳಿ ಕಾವಲು ಪಡೆ  
ಸಮುದ್ರದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸಿದ ಸಾಹಸವಂತ ಮೀನುಗಾರರಿಗೆ ನಾಳೆ ಅಭಿನಂದನೆ ಸಲ್ಲಿಸಲಾಗುವುದು. ಈ ಹಿಂದೆಯೂ ಕರಾವಳಿ ಕಾವಲು ಪಡೆಯವರು ಕ್ಷುಲ್ಲಕ ಕಾರಣ ನೀಡಿ ಮೀನುಗಾರರ ಸಂಕಷ್ಟದಲ್ಲಿ ಭಾಗಿಯಾಗಿಲ್ಲ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಮೀನುಗಾರರ ರಕ್ಷಣೆಯಲ್ಲಿ ಕರಾವಳಿ ಕಾವಲು ಪಡೆಯ ಪಾತ್ರದ ಬಗ್ಗೆ  ಮಂಗಳವಾರ ಸಭೆ ಕರೆಯಾಲಾಗಿದೆ. ಕರಾವಳಿ​ ಕಾವಲು ಪಡೆಯವರೊಂದಿಗೆ ​ಸ್ಥಳೀಯ ನುರಿತ 20ಮಂದಿ ಯುವಕರ ತಂಡವೊಂದನ್ನು ರಚಿಸಿ ಮೀನುಗಾರರ ರಕ್ಷಣೆ ಕಾರ್ಯಾಚರಣೆಗೆ ಬಳಸಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು.
ಗಣೇಶ್ ಸುವರ್ಣ, ಕಲ್ಮಾಡಿ 
ಅಧ್ಯಕ್ಷರು,  370 ಬೊಟ್ ತಂಡೇಲರ ಸಂಘ, ಮಲ್ಪೆ
 
 
 
 
 
 
 
 
 
 
 

Leave a Reply