ಕರಾವಳಿಯಲ್ಲಿ ನಾಳೆ ರೆಡ್ ಅಲರ್ಟ್

ಬೆಂಗಳೂರು: ಕರಾವಳಿಯಲ್ಲಿ ವರುರ್ಣಾಭಟ ನಾಳೆಯು ನಿಲ್ಲುವ ಸೂಚನೆಯಿಲ್ಲ.ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ರಾಜ್ಯದಲ್ಲಿ ಈಗಾಗಲೇ ಹಲವೆಡೆ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಮುಂದಿನ 3 ದಿನ ಇದೇ ರೀತಿ ಮುಂದುವರಿಯಲಿದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಮುಂದಿನ 24 ಗಂಟೆ ಬಿರುಸಾಗಿ ಮಳೆಯಾಗಲಿರುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಹೀಗೆಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.
ಮಲೆನಾಡು ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ರೆಡ್ ಅಲರ್ಟ್​ ಘೋಷಿಸಲಾಗಿದ್ದು ಅದರಂತೆ ಈ ಅವಧಿಯಲ್ಲಿ ಮಳೆ ಬಿರುಸಾಗಿತ್ತು. ಸೆ.22ರಂದು ಮಲೆನಾಡು ಭಾಗದಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು,ಸದ್ಯ ಮುಂದಿನ 2 ದಿನಗಳಲ್ಲಿ ಮಳೆಯ ಪ್ರಮಾಣ ಕಮ್ಮಿಯಾಗಲಿದೆ ಎಂದು ಈ ಆದೇಶ ನೀಡಲಾಗಿದೆ.

ಉತ್ತರ ಒಳನಾಡಿನಲ್ಲಿ ಅಂದರೆ, ಬೆಳಗಾವಿಯಲ್ಲಿ ಸೆ.22ರಂದು ಆರೆಂಜ್ ಅಲರ್ಟ್ ಇದೆ. ಇನ್ನು ಧಾರವಾಡ, ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಹಾಗೂ ಹಾವೇರಿಯಲ್ಲಿ ಮುಂದಿನ 24 ಗಂಟೆ ಯೆಲ್ಲೋ ಅಲರ್ಟ್ ಇರಲಿದೆ ಎಂಬ ಮಾಹಿತಿಯನ್ನು ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ನೀಡಿದ್ದಾರೆ.

 
 
 
 
 
 
 
 
 
 
 

Leave a Reply