Janardhan Kodavoor/ Team KaravaliXpress
24.6 C
Udupi
Tuesday, July 5, 2022
Sathyanatha Stores Brahmavara

ಮಾಳ-ಕುದುರೆಮುಖ ರಾ.ಹೆ. 169 ರಲ್ಲಿ ವಾಹನ ಸಂಚಾರ ನಿಷೇಧ

ಕಳೆದ ಎರಡು ದಿನಗಳಿಂದ ವಿಪರೀತ ಮಳೆ ಸುರಿದ ಕಾರಣ ಕಾರ್ಕಳ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಳ-ಕುದುರೆಮುಖ ರಾ.ಹೆ. 169 ರಸ್ತೆಯಲ್ಲಿ ಗುಡ್ಡ ಕುಸಿತ ಉಂಟಾಗಿ ಮಣ್ಣು ರಸ್ತೆಗೆ ಬೀಳುತ್ತಿದ್ದು ಅಲ್ಲಲ್ಲಿ ಮರಗಳು ರಸ್ತೆಗೆ ಬೀಳುತ್ತಿವೆ. ಆಗಾಗ್ಗೆ ಸುರಿಯುತ್ತಿರುವ ಮಳೆಯಿಂದ ತೆರವು ಕಾರ್ಯಾಚರಣೆ ಕಷ್ಟಕರವಾಗಿದೆ. ಮುಂಜಾಗೃತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮಾಳ ಕುದುರೆಮುಖ ರಾ.ಹೆ. 169ನ್ನು ಎರಡು ದಿನಗಳವರೆಗೆ ಬಂದ್ ಮಾಡಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ರವರು ಇಂದು ಆದೇಶಿಸಿದ್ದಾರೆ. ಈ ಅವಧಿಯಲ್ಲಿ ಮಾಳ-ಕುದುರೆಮುಖ ರಾ.ಹೆ. 169 ರಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.  
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!