ಮಲ್ಪೆ ಮೀನುಗಾರಿಕೆ ಬಂದರಿನ ಸಮಗ್ರ ನಿರ್ವಹಣೆ ಬಗ್ಗೆ ಶಾಸಕ ರಘುಪತಿ ಭಟ್ ಸಭೆ

ಮಲ್ಪೆ : ಮೀನುಗಾರರ ಸಂಘದಲ್ಲಿ ಸೋಮವಾರದಂದು ಶಾಸಕ ಕೆ. ರಘುಪತಿ ಭಟ್ “ಮಲ್ಪೆ ಮೀನುಗಾರಿಕೆ ಬಂದರಿನ ಸಮಗ್ರ ನಿರ್ವಹಣೆ” ಕುರಿತಾಗಿ ಮೀನುಗಾರರ ಸಂಘದವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು.

ಸಭೆಯಲ್ಲಿ ಮೀನುಗಾರರಿಗೆ ವ್ಯಾಕ್ಸಿನೇಷನ್ ಮಾಡುವ ಬಗ್ಗೆ ಹಾಗೂ ಬಂದರಿನ ಬಳಿ ವಾಹನಗಳ ಸಂಚಾರಕ್ಕೆ ಮತ್ತು ನಿಲುಗಡೆಗೆ ಸುಸಜ್ಜಿತವಾದ ವ್ಯವಸ್ಥೆ ಕಲ್ಪಿಸುವುದು ಹಾಗೂ ಎಲ್ಲಾ ಗೇಟ್ ಗಳಲ್ಲಿ ಸೆಕ್ಯೂರಿಟಿ ನೇಮಿಸುವಂತೆ ಸೂಚಿಸಿದರು.

ದಯಾನಂದ ಸುವರ್ಣ, ಮೀನುಗಾರಿಕೆ ಇಲಾಖೆಯ ಅಪರ ನಿರ್ದೇಶಕ ಡಿ. ತಿಪ್ಪೇಸ್ವಾಮಿ, ಕರಾವಳಿ ಕಾವಲು ಪಡೆ ಅಧೀಕ್ಷಕ ನಿಖಿಲ್, ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕೆ. ಗಣೇಶ್, ಉಪನಿರ್ದೇಶಕ ಜಿ. ಎಂ ಶಿವಕುಮಾರ್, ಹಿರಿಯ ಸಹಾಯಕ ನಿರ್ದೇಶಕಿ ಸುಷ್ಮಾ, ತಾಲೂಕು ಆರೋಗ್ಯಾಧಿಕಾರಿ ವಾಸುದೇವ ಉಪಾಧ್ಯಾಯ, ಮಲ್ಪೆ ಪೋರ್ಟ್ ಅಂಡ್ ಫಿಶರೀಸ್ ಕಾರ್ಯಪಾಲಕ ಅಭಿಯಂತರ ಪಾಯದೇ, ಕರಾವಳಿ ಕಾವಲು ಪಡೆಯ ಪೊಲೀಸ್ ಉಪಾಧೀಕ್ಷಕ ಸುಲ್ಫಿ, ಮಲ್ಪೆ ಪೊಲೀಸ್ ಉಪನಿರೀಕ್ಷಕ ಶಕ್ತಿವೇಲು ಹಾಗೂ ಮಲ್ಪೆ ಮೀನುಗಾರರ ಸಂಘದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply