ಕೊಡವೂರಿನಲ್ಲೊಂದು ವಿಶಿಷ್ಟ ಪ್ರಯತ್ನ: ಮಕ್ಕಳ ಗ್ರಾಮ ಸಭೆ

ಉಡುಪಿ: ಕೊಡವೂರು ವಾರ್ಡ್ ಸಮಗ್ರ ಅಭಿವೃದ್ಧಿ ಆಗಬೇಕಾದರೆ ಎಲ್ಲಾ ವೃತ್ತಿ, ಎಲ್ಲಾ ಜಾತಿ,ಎಲ್ಲಾ ವಯಸ್ಸಿನ ಜನರೊಂದಿಗೆ ಸಭೆಗಳನ್ನು ನಡೆಸಿ ಅವರ ಕುಂದು-ಕೊರತೆಗಳನ್ನು ಆಲಿಸಿ ಅದಕ್ಕೆ ಉತ್ತರ ನೀಡಿದರೆ ಮಾತ್ರ ಸಾಧ್ಯ ಎನ್ನುವ ದೃಢ ಸಂಕಲ್ಪದೊಂದಿಗೆ ವಾರ್ಡಿನಲ್ಲಿ ಕೊಡವೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5-6-7ನೇ ತರಗತಿ ವಿದ್ಯಾರ್ಥಿಗಳೊಂದಿಗೆ ನಗರಸಭೆ ಸದಸ್ಯ ಕೆ ವಿಜಯ್ ಕೊಡವೂರು ಜೊತೆಗೆ ಶಿಕ್ಷಣ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು.

ಮಕ್ಕಳಿಗೆ ಸಿಗಬೇಕಾದ ಶಿಕ್ಷಣ ಮತ್ತು ಮೂಲಭೂತ ಸೌಕರ್ಯ,ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳು ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಶೌಚಾಲಯ,ಕುಡಿಯುವ ನೀರು, ವಿದ್ಯುತ್ ಮತ್ತು ಶಾಲೆಯ ಬಗ್ಗೆ ಚರ್ಚೆ ನಡೆಯಿತು ಮನೆಯಲ್ಲಿರುವ ಅನೇಕ ಸಮಸ್ಯೆಗಳನ್ನು ವ್ಯಕ್ತಪಡಿಸಿ ತಾವು ಸರಿಪಡಿಸುತ್ತೇವೆ ಎಂದು ನಗುಮುಖದಲ್ಲಿ ಉತ್ತರ ನೀಡಿದರು.

ಇಂದ್ರಾಣಿ ನದಿಯ ಪವಿತ್ರತೆ ಹಾಳಾಗಿ ಅದರಿಂದ ಬರುವ ದುರ್ನಾತ ಚರ್ಮರೋಗ ಟಿಬಿ ಇನ್ನಿತರ ಸಮಸ್ಯೆಗಳ ಬಗ್ಗೆ ಪಾಳೆಕಟ್ಟೆಯ ಶಾಲೆಯ ವಿದ್ಯಾರ್ಥಿ ಮೆಲುಕು ಹಾಕುತ್ತಾ ಪ್ರಧಾನಮಂತ್ರಿಗೆ ಪತ್ರ ಬರೆಯಬೇಕು ಎಂಬ ವಿಷಯವನ್ನು ಹೇಳಿದ್ದು, ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿತು.

4 ತಿಂಗಳಿಗೊಮ್ಮೆ ಇದೇ ರೀತಿ ಸೇರುವುದೆಂದು ನಿಶ್ಚಯಿಸಿದರು ಹಾಗೂ ಮುಂದಿನ ಸಭೆಯಲ್ಲಿ ಪ್ರಧಾನಮಂತ್ರಿಗೆ ಪತ್ರ ಬರೆಯುವ ಮುಖಾಂತರ ಸಭೆ ನಡೆಸಬೇಕೆಂದು ಅಭಿಪ್ರಾಯಪಟ್ಟರು.

 

 
 
 
 
 
 
 
 
 
 
 

Leave a Reply