ಅಂಬಲಪಾಡಿಯಲ್ಲಿ ಹಡಿಲು ಭೂಮಿ ಕೃಷಿಗೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಚಾಲನೆ

ಉಡುಪಿ ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ಕೇದಾರೋತ್ಥಾನ ಟ್ರಸ್ಟ್(ರಿ.) ಉಡುಪಿ ಇದರ ಆಶ್ರಯದಲ್ಲಿ ಸಾವಯುವ ಕೃಷಿ ಉತ್ಪನ್ನ ಬೆಳೆಸುವ ನಿಟ್ಟಿನಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್ ಮತ್ತು ಗ್ರಾಮೋತ್ಥಾನ ಸಮಿತಿ ಅಂಬಲಪಾಡಿ ಇದರ ಸಹಯೋಗದೊಂದಿಗೆ ಅಂಬಲಪಾಡಿ ವಾರ್ಡಿನ ಸುಮಾರು 25 ಎಕ್ರೆ ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆಗೆ ಕೇದಾರೋತ್ಥಾನ ಟ್ರಸ್ಟಿನ ಕೋಶಾಧಿಕಾರಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ ಅಂಬಲಪಾಡಿ ಬಂಕೇರ್ಕಟ್ಟ ಅಂಗನವಾಡಿ ಕೇಂದ್ರದ ಬಳಿ ಸುರೇಶ್ ಶೆಟ್ಟಿಯವರ ಗದ್ದೆಗೆ ಹಾಲೆರೆಯುವ ಮೂಲಕ ಚಾಲನೆ ನೀಡಿದರು.

ಅಂಬಲಪಾಡಿ ಬಂಕೇರ್ಕಟ್ಟ ಪ್ರದೇಶದಲ್ಲಿ ಸುಮಾರು 10 ಎಕ್ರೆ ಹಡಿಲು ಗದ್ದೆಯಲ್ಲಿ ಟ್ರಾಕ್ಟರ್ ಮೂಲಕ ಉಳುಮೆಯನ್ನು ಪ್ರಾರಂಭಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಅಂಬಲಪಾಡಿ ಗ್ರಾ.ಪಂ. ಅಧ್ಯಕ್ಷೆ ರೋಹಿಣಿ ಎಸ್. ಪೂಜಾರಿ ಕಪ್ಪೆಟ್ಟು, ಗ್ರಾ.ಪಂ. ಉಪಾಧ್ಯಕ್ಷ, ಗ್ರಾಮೋತ್ಥಾನ ಸಮಿತಿಯ ಗೌರವ ಸಲಹೆಗಾರ ಸೋಮನಾಥ್ ಬಿ.ಕೆ., ಗ್ರಾ.ಪಂ. ಪಿ.ಡಿ.ಒ. ವಸಂತಿ, ಗ್ರಾಮೋತ್ಥಾನ ಸಮಿತಿಯ ಗೌರವ ಸಂಚಾಲಕ ಯೋಗೀಶ್ ಶೆಟ್ಟಿ, ಪ್ರಧಾನ ಸಂಚಾಲಕ ಶಿವಕುಮಾರ್ ಅಂಬಲಪಾಡಿ,

ಗೌರವ ಸಲಹೆಗಾರರಾದ ರಾಜೇಂದ್ರ ಪಂದುಬೆಟ್ಟು, ಕೇಳು ನಾರಾಯಣ, ಸಹ ಸಂಚಾಲಕರಾದ ರಾಜೇಶ್ ಸುವರ್ಣ, ಮಹೇಂದ್ರ ಕೋಟ್ಯಾನ್, ಸುನಿಲ್ ಕುಮಾರ್, ಹರೀಶ್ ಆಚಾರ್ಯ, ದಯಾಶಿನಿ ಪಂದುಬೆಟ್ಟು, ಬಿಲ್ಲವ ಸೇವಾ ಸಂಘ, ಶ್ರೀ ವಿಠೋಬ ಭಜನಾ ಮಂದಿರದ ಭಜನಾ ಸಂಚಾಲಕ ಕೆ.ಮಂಜಪ್ಪ ಸುವರ್ಣ, ಶ್ರೀ ಉಮಾಮಹೇಶ್ವರ ಭಜನಾ ಮಂದಿರದ ಕಾರ್ಯದರ್ಶಿ ಭಾರತ್ ರಾಜ್ ಕೆ.ಎನ್., ಹಡಿಲು ಗದ್ದೆಗಳ ಮಾಲೀಕರು ಹಾಗೂ ಕೃಷಿಕರಾದ ಸುರೇಶ್ ಶೆಟ್ಟಿ,

ಶರತ್ ಶೆಟ್ಟಿ, ನಾರಾಯಣ ಪೂಜಾರಿ, ಓಬು ಪೂಜಾರಿ, ಸುಧಾಕರ ಪೂಜಾರಿ, ಡೇನಿಸ್ ಕ್ವಾಡ್ರಸ್, ಕೀರ್ತನ್ ಶೆಟ್ಟಿ, ಗಣೀಶ್ ಶೆಟ್ಟಿ, ಸುನೀತಾ ಶೆಟ್ಟಿ, ವಿಠ್ಠಲ ಹಾಗೂ ಸ್ಥಳೀಯರಾದ ರಾಧಾಕೃಷ್ಣ, ಕೇಶವ ಶ್ರೀಯಾನ್, ವಿನೋದ್ ಪೂಜಾರಿ, ನಾಗರಾಜ್ ಕರ್ಕೇರ, ಗಣೀಶ್ ಪೂಜಾರಿ, ಕೀರ್ತನಾ, ರಂಜಿತಾ, ನಂದ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply