ಪಿಪಿ ಕಿಟ್ ಧರಿಸಿದ ಕರೋನಾ ವಾರಿಯರ್ಸ್ ರವರಿಂದಲೇ ಗಾಂಧಿ ಆಸ್ಪತ್ರೆಯ ರಕ್ತದಾನ ಶಿಬಿರ ಉದ್ಘಾಟನೆ  

05.05.2021: ಗಾಂಧಿ ಆಸ್ಪತ್ರೆಯು ಇಪ್ಪತ್ತೇಳನೇ ವರುಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಸುಸಂದರ್ಭದಲ್ಲಿ ಆರೋಗ್ಯ ಸೇವೆ ಯೊಂದಿಗೆ ಹತ್ತು ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು ವರುಷಕ್ಕೆ ಎರಡು ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ‌.ಕಳೆದ ಹದಿನೇಳು ವರುಷಗಳಿಂದ ಮೂವತ್ತೈದಕ್ಕೂ ಅಧಿಕ ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದು ಇತ್ತೀಚೆಗೆ ಕೋವಿಡ್ 19 ನಮ್ಮನ್ನೆಲ್ಲ ಕಂಗೆಡಿಸಿದ ಈ ಸಂದರ್ಭದಲ್ಲಿ ಅಗತ್ಯವಾದ ರಕ್ತದ ಕೊರತೆ ನೀಗಿಸುವಲ್ಲಿ ಈ ಶಿಬಿರ ಬಲು ಮುಖ್ಯ ಪಾತ್ರವಹಿಸಿದ್ದು ಹಲವಾರು ಜನರ ಪ್ರಾಣ ಉಳಿಸಲು ಸಹಾಯಕವಾಗಿದೆ.ಆರೋಗ್ಯ ಸೇವೆಯೊಂದಿಗೆ ಸಮಾಜ ಮುಖಿಯಾಗಿಯೂ ಕಾರ್ಯ ನಿರ್ವಹಿಸಿಕೊಂಡು ಬರುತ್ತಿರುವ ಗಾಂಧಿ ಆಸ್ಪತ್ರೆಯ ಈ ಕಾರ್ಯ ಶ್ಲಾಘನೀಯ ಎಂದು ರಕ್ತದಾನ ಶಿಬಿರಕ್ಕೆ ಅತಿಥಿ ಗಳಾಗಿ ಆಗಮಿಸಿದ್ದ ಉಡುಪಿ ಐಎಂಎ ಅಧ್ಯಕ್ಷ ಡಾ.ಉಮೇಶ್ ಪ್ರಭು ಅಭಿಪ್ರಾಯ ಪಟ್ಟರು.

ಉಡುಪಿಯ ಗಾಂಧಿ ಆಸ್ಪತ್ರೆಯ ಸ್ಥಾಪನಾ ದಿನವಾದ‌ ಮೇ ಐದರಂದು ಪ್ರತೀ ವರ್ಷ ನಡೆಯುವ  ರಕ್ತದಾನ ಶಿಬಿರವನ್ನು ಈ ವರುಷ  ಕೋವಿಡ್ ಮುಂಜಾಗ್ರತಾ ಕ್ರಮದೊಂದಿಗೆ ಸರಳವಾಗಿ ಆಚರಿಸಲಾಯಿತು. ಯಾವುದೇ ಸಭಾ ಕಾರ್ಯಕ್ರಮ ಇಲ್ಲದೆ ಕೊರೋನಾ ರೋಗದ ವಿರುದ್ಧ  ಹೋರಾಡುತ್ತಿರು ವವೈದ್ಯರು ಹಾಗು ಆಸ್ಪತ್ರೆಯ ಸಿಬ್ಬಂದಿಗಳು ದೀಪ ಬೆಳಗಿಸುವು ದರ ಮೂಲಕ ಶಿಬಿರವನ್ನು‌ ಉದ್ಘಾಟಿಸಿದರು.ಜಿಲ್ಲಾಸ್ಪತ್ರೆಯ ರಕ್ತ ನಿಧಿ ಕೇಂದ್ರದ ಡಾ.ವೀಣಾ ಕುಮಾರಿ ಉಪಸ್ಥಿತರಿದ್ದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ ವ್ಯಾಸರಾಜ ತಂತ್ರಿ ಪ್ರಾಸ್ತಾವಿಕವಾಗಿ‌ ಮಾತನಾಡಿ ಇಂದಿನ ಆರೋಗ್ಯ ಸೇವೆಯಲ್ಲಿ ಆರೋಗ್ಯ ಸಿಬ್ಬಂದಿಗಳಿಗೆ ಹೆಚ್ಚಿನ ಒತ್ತಡವಿದ್ದು ಸಾರ್ವಜನಿಕರ ಸಹಕಾರ ಮತ್ತು ಕೋವಿಡ್ ಮಾರ್ಗಸೂಚಿಯ ಪಾಲನೆ ಅತ್ಯಗತ್ಯ ಎಂದು ಎಚ್ಚರಿಸಿದರು.

ಇಂದು ವೈದ್ಯರಿಂದ ಹಿಡಿದು ಎಲ್ಲಾ ವರ್ಗದ ವಿವಿಧ ವಿಭಾಗಗಳ ಸಿಬ್ಬಂದಿಗಳು ಅವಿರತ ಕೊರೋನಾ  ರೋಗಿಗಳ ಸೇವೆಯಲ್ಲಿದ್ದು ಅವರ ಸೇವೆಯನ್ನು ಗೌರವಿಸುವ ಸಲುವಾಗಿ ಸಿಬ್ಬಂದಿ ವರ್ಗದಿಂದಲೇ ದೀಪ ಬೆಳಗಿಸಿದ್ದು ಆಸ್ಪತ್ರೆಯ ನಿರ್ದೇಶಕರ ಪ್ರೇರಣಾ ಹೆಜ್ಜೆ ಇದಾಗಿರುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

ಆಸ್ಪತ್ರೆಯ ಆಡಳಿತ ನಿರ್ದೇಶಕ ಹರಿಶ್ಚಂದ್ರ ಧನ್ಯವಾದವಿತ್ತರು. ಪಂಚಮಿ ಟ್ರಸ್ಟ್ ನ ಲಕ್ಷ್ಮಿ ಹರಿಶ್ಚಂದ್ರ, ಡಾ.ವಿದ್ಯಾ ತಂತ್ರಿ ಮತ್ತು ಆಸ್ಪತ್ರೆಯ ಫ್ರಂಟ್ ಲೈನ್ ವಾರಿಯರ್ಸ್ ಉಪಸ್ಥಿತರಿದ್ದರು. ಯೂಸುಫ್ ಖಾದರ್ ಕಾರ್ಯಕ್ರಮ ಸಂಯೋಜಿಸಿದರು.

 
 
 
 
 
 
 
 
 
 
 

Leave a Reply