ಕರುನಾಡಲ್ಲಿ 50 ಸಾವಿರ‌ ಮಂದಿಗೆ ಸೋಂಕು

ಬೆಂಗಳೂರು : ಕೊರೊನಾ ಮಹಾಮಾರಿ ರಾಜ್ಯದಲ್ಲಿ ಸ್ಪೋಟಗೊಂಡಿ ದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 50 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ‌ ಸೋಂಕು ದೃಢಪಟ್ಟಿದೆ. ಸಾವನ್ನಪ್ಪಿದವರ ಸಂಖ್ಯೆ ಮುನ್ನೂರರ ಗಡಿ ದಾಟಿರುವುದು ಆತಂಕ ಮೂಡಿಸಿದೆ.

ಸಿಲಿಕಾನ್ ಸಿಟಿಯಲ್ಲಿಯೂ ಸೋಂಕಿತರ ಪ್ರಮಾಣ ಹೆಚ್ಚಳವಾಗುವು ದರ ಜೊತೆಗೆ ರಾಜ್ಯದ ಇತರ‌ ಜಿಲ್ಲೆಗಳಲ್ಲಿಯೂ ಮಹಾ ಸ್ಪೋಟ ಸಂಭವಿಸಿದೆ. ರಾಜ್ಯದಲ್ಲಿ  50,122 ಮಂದಿಗೆ ಸೋಂಕು ತಗುಲಿದ್ದು, 346 ಸೋಂಕಿತರು ಬಲಿಯಾಗಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿ ನಲ್ಲಿ  23,106 ಹೊಸ ಸೋಂಕು ದೃಢಪಟ್ಟಿದ್ದು 161 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಬೆಂಗಳೂರು ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ 27 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಿದೆ. ಬಾಗಲಕೋಟೆ 719, ಬಳ್ಳಾರಿ 927, ಬೆಳಗಾವಿ 920, ಬೆಂಗಳೂರು ಗ್ರಾಮಾಂತರ 1,033, ಬೆಂಗಳೂರು ನಗರ 23,106, ಬೀದರ್ 482, ಚಾಮರಾಜನಗರ 542, ಚಿಕ್ಕಬಳ್ಳಾಪುರ 830, ಚಿಕ್ಕಮಗಳೂರು 1009, ಚಿತ್ರದುರ್ಗ 152, ದಕ್ಷಿಣ ಕನ್ನಡ 1,529, ದಾವಣಗೆರೆ 548, ಧಾರವಾಡ 1030, ಗದಗ 189, ಹಾಸನ 1,604,

ಹಾವೇರಿ 224, ಕಲಬುರಗಿ 1,097, ಕೊಡಗು 768, ಕೋಲಾರ 1,115, ಕೊಪ್ಪಳ 182, ಮಂಡ್ಯ 1,621, ಮೈಸೂರು 2,790, ರಾಯಚೂರು 427, ರಾಮನಗರ 475, ಶಿವಮೊಗ್ಗ 702, ತುಮಕೂರು 2,335, ಉಡುಪಿ 1,655, ಉತ್ತರ ಕನ್ನಡ 849, ವಿಜಯಪುರ 513 ಮತ್ತು ಯಾದಗಿರಿಯಲ್ಲಿ 739 ಮಂದಿಗೆ ಸೋಂಕು ದೃಢಪಟ್ಟಿದೆ.

 
 
 
 
 
 
 
 
 

Leave a Reply