ಕಿದಿಯೂರು ಚಕ್‌ಪಾದೆ ನದಿ ಮಧ್ಯದಲ್ಲಿ ಕಾಣಿಸಿಕೊಂಡ ಸುಳಿಗಾಳಿ!

ನದಿ ಮಧ್ಯದಲ್ಲಿ ಸುಳಿಗಾಳಿ ಕಾಣಿಸಿಕೊಂಡ ಘಟನೆ ಅಂಬಲಪಾಡಿ, ಕಿದಿಯೂರು ಚಕ್‌ಪಾದೆಯಲ್ಲಿ ತೀರದಲ್ಲಿ ನಡೆದಿದೆ.

ಉಡುಪಿಯ ಪಾಪನಾಶಿನಿ ನದಿಯಲ್ಲಿ ಈ ದೃಶ್ಯ ಕಂಡು ಬಂದಿದ್ದು, ಸುಳಿಗಾಳಿ ಉಂಟಾಗಿದ್ದರಿಂದ ಆಕಾಶದೆಡೆಗೆ ನದಿ ನೀರು ಚಿಮ್ಮಿದೆ.

ಗಾಳಿಯ ರಭಸಕ್ಕೆ ಆಕಾಶಕ್ಕೆ ನೀರು ಚಿಮ್ಮುತ್ತಿರುವುದನ್ನು ಮೊಬೈಲ್‌ನಲ್ಲಿ ಸ್ಥಳೀಯರು ಸೆರೆ ಹಿಡಿದಿದ್ದು, ಅಪರೂಪದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

 
 
 
 
 
 
 
 
 
 
 

Leave a Reply