ತೆಂಕನಿಡಿಯೂರು ಕಾಲೇಜಿನಲ್ಲಿ ನೆಟ್/ಕೆ.ಸೆಟ್ ಪರೀಕ್ಷಾ ಕಾರ್ಯಾಗಾರ

ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ
ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು
ಇಲ್ಲಿನ ಐ.ಕ್ಯೂ.ಎ.ಸಿ. ಹಾಗೂ ಉದ್ಯೋಗ ಮಾಹಿತಿ ಘಟಕಗಳ
ಸಂಯುಕ್ತ ಆಶ್ರಯದಲ್ಲಿ ಉಪನ್ಯಾಸಕ ಅರ್ಹತಾ
ಪರೀಕ್ಷೆಗಳಾದ ಯು.ಜಿ.ಸಿ. ನೆಟ್ ಹಾಗೂ ಕೆ.ಸೆಟ್ ಪರೀಕ್ಷಾ
ಪೇಪರ್-೧ರ ಒಂದು ದಿನದ ತರಬೇತಿ ಕಾರ್ಯಾಗಾರ
ಆಯೋಜಿಸಲಾಯಿತು. ಕಾರ್ಯಾಗಾರಕ್ಕೆ ಚಾಲನೆಯಿತ್ತ
ಪ್ರಾಂಶುಪಾಲರಾದ ಡಾ. ಸುರೇಶ್ ರೈ ಕೆ. ಉಪನ್ಯಾಸಕ
ವೃತ್ತಿಯಲ್ಲಿ ತೊಡಗಿಸಿಕೊಳ್ಳ ಬಯಸುವ ಸ್ನಾತಕೋತ್ತರ
ವಿದ್ಯಾರ್ಥಿಗಳಿಗೆ ಕೆ.ಸೆಟ್ ಮತ್ತು ಯು.ಜಿ.ಸಿ. ನೆಟ್ ಪರೀಕ್ಷೆಗಳು
ಅನಿವಾರ್ಯವಾಗಿದ್ದು ಇದರ ಸಮರ್ಪಕ ತಯಾರಿಯ ಮತ್ತು
ಸಿಗುವ ಮಾರ್ಗದರ್ಶನದ ಪ್ರಯೋಜನ ಪಡೆದುಕೊಂಡು
ಯಶಸ್ವಿಯಾಗುವoತೆ ಸೂಚಿಸಿದರು. ಕಾಲೇಜಿನ ಐ.ಕ್ಯೂ.ಎ.ಸಿ.
ಸಂಚಾಲಕಿ ಡಾ. ಮೇವಿ ಮಿರಾಂದ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.
ದುಗ್ಗಪ್ಪ ಕಜೆಕಾರ್, ಗ್ರಂಥಪಾಲಕ ಶ್ರೀ ಕೃಷ್ಣ, ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ರಾಘವ ನಾಯ್ಕ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ರಾಜ್ಯಶಾಸ್ತç ಸಹಾಯಕ
ಪ್ರಾಧ್ಯಾಪಕ ಪ್ರಶಾಂತ್ ಎನ್. ಉನ್ನತ ಶಿಕ್ಷಣ, ಶಿಕ್ಷಣ ನೀತಿ ಕುರಿತಾಗಿ,
ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ
ಸಹಾಯಕ ಶ್ರೀ ಕೇಶವಮೂರ್ತಿ ಪರಿಸರ ಅಧ್ಯಯನ,
ಲಕ್ಷ್ಮೀಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ
ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಶ್ರೀ ಮನೋಹರ್ ಬಿ.
ಲಾಜಿಕಲ್ ರೀಸನಿಂಗ್, ಪೂರ್ಣ ಪ್ರಜ್ಞಾ ಕಾಲೇಜಿನ ವಾಣಿಜ್ಯಶಾಸ್ತç
ಸಹಾಯಕ ಪ್ರಾಧ್ಯಾಪಕ ಗಣಿತಸಾಮರ್ಥ್ಯ ಹಾಗೂ ಹೆಬ್ರಿ
ಸರಕಾರಿ ಪದವಿ ಕಾಲೇಜಿನ ವಾಣಿಜ್ಯಶಾಸ್ತ್ರ ಸಹಾಯಕ
ಪ್ರಾಧ್ಯಾಪಕ ಪ್ರದೀಪ್ ಆನಂದ್ ಶೆಟ್ಟಿ ಡೇಟಾ ಇಂಟರ್‌ಪ್ರಿಟೇಶನ್
ಕುರಿತಾಗಿ ತರಬೇತಿ ನೀಡಿದರು. ಕಾಲೇಜಿನ ಎಲ್ಲಾ ವಿಭಾಗಗಳ
ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕಾರ್ಯಾಗಾರದ
ಪ್ರಯೋಜನ ಪಡೆದರು. ಪ್ಲೇಸ್‌ಮೆಂಟ್ ಸೆಲ್ ಸಂಚಾಲಕ ಶ್ರೀ
ಉಮೇಶ್ ಪೈ ಕಾರ್ಯಾಗಾರ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply