ಹೋಂ ಡಾಕ್ಟರ್ ಫೌಂಡೇಶನ್ ಬೆಳಕು ಕಾನ್ಸೆಪ್ಟ್ ಯೋಜನೆಯಡಿ ಸಹಾಯಧನ ವಿತರಣಿ

ಉಡುಪಿ :-  ಹೋಂ ಡಾಕ್ಟರ್ ಫೌಂಡೇಶನ್ ಇದರ ಬೆಳಕು ಕಾನ್ಸೆಪ್ಟ್ ಯೋಜನೆಯಡಿ ನಿಟ್ಟೂರಿನ ಅಂತಿಮ ಬಿ.ಎಸ್.ಸಿ ವಿದ್ಯಾರ್ಥಿ ಕಾರ್ತಿಕ್ ಗೆ ಕಾಲೇಜು ಶುಲ್ಕ ರೂ.10 ಸಾವಿರ ಹಾಗು ಆನ್ಲೈನ್ ಕ್ಲಾಸ್ ಗಾಗಿ ಒಂದು ಆಂಡ್ರಾಯ್ಡ್ ಮೊಬೈಲ್ ಕೊಡಲಾಯಿತು ಅದೇ ರೀತಿ ಇಂದಿರಾ ನಗರದ ಬಡ ಪ್ಯಾರಾಲಿಸಿಸ್ ರೋಗಿ ಗೆ ಅವರ ಪತ್ನಿ ಸುನಂದಾ ರವರಿಗೆ ರೂ. 10 ಸಾವಿರ ಚೆಕ್ ವಿತರಿಸಲಾಯಿತು.

ಮಣಿಪಾಲದ ಹೊಸಬೆಳಕು ಆಶ್ರಮದಲ್ಲಿ ಆಶ್ರಯ ಕಲ್ಪಿಸಲಾದ ಸದಾಶಿವ್ ಶೆಟ್ಟಿ ಕುಕ್ಕಿಹಳ್ಳಿ ಇವರ ಯೋಗಕ್ಷೇಮ ವಿಚಾರಿಸಿ ಮುಂದಿನ ದಿನದಲ್ಲಿ ರೂ 10 ಸಾವಿರ ನೀಡಲಾಗುವುದು. ಗುಂಪಿನ ಸದಸ್ಯೆ ನಯನಾ ಅವರ ಕೋರಿಕೆ ಮೇಲೆ ರಕ್ತದ ಕ್ಯಾನ್ಸರ್ ನಿಂದ ಬಳಳುತ್ತಿರುವ ಕುಟುಂಬದ ವ್ಯಕ್ತಿಯ ಯೋಗಕ್ಷೇಮ ವಿಚಾರಿಸಿ ಬಂದು ಮುಂದಿನ ದಿನಗಳಲ್ಲಿ ಅವರ ಮಕ್ಕಳ ವಿದ್ಯಾಭ್ಯಾಸದಲ್ಲಿ ನೆರವಾಗುವ ನಿರ್ಣಯಕ್ಕೆ ಬರಲಾಯಿತು . ಕಾಯ೯ಕ್ರಮದಲ್ಲಿ ಸದಸ್ಯರಾದ ಡಾ.ಶಶಿ  ಕಿರಣ್ ಶೆಟ್ಟಿ, ಡಾ.ಸುಮಾ ಎಸ್ ಶೆಟ್ಟಿ, ರಾಘವೇಂದ್ರ ಪೂಜಾರಿ, ಬಂಗಾರಪ್ಪ, ನಯನ ಕೃಷ್ಣ ಮಾಸ್ಟರ್ ಭಾಗವಹಿಸಿದ್ದರು.

 
 
 
 
 
 
 

Leave a Reply