ಮನೆಯ ಮೇಲೆ ಗುಡ್ಡ ಕುಸಿದು ಮಹಿಳೆ ಮೃತ್ಯು!

ಭಾರೀ ಮಳೆಗೆ ಮನೆಯೊಂದರ ಮೇಲೆ ಗುಡ್ಡ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿದ ಘಟನೆ ಬಂಟ್ವಾಳದ ಸಜೀಪಮುನ್ನೂರು ಗ್ರಾಮದ ನಂದಾವರದಲ್ಲಿ ನಡೆದಿದೆ. 

ಗುಡ್ಡ ಕುಸಿದು ಮನೆಯಲ್ಲಿ ಸಿಲುಕಿದ್ದ ಝರೀನಾ(46) ಎಂಬವರು ಸಾವು ಕಂಡಿದ್ದಾರೆ. ಬೆಳಗ್ಗಿನ ಹೊತ್ತಿಗೆ ನೋಡ ನೋಡುತ್ತಲೇ ಗುಡ್ಡ ಕುಸಿದಿದ್ದು ಮನೆಯಲ್ಲಿದ್ದ ತಾಯಿ, ಮಗಳು ಮಣ್ಣಿನಡಿ ಸಿಲುಕಿದ್ದಾರೆ. ಕೂಡಲೇ ಸ್ಥಳೀಯರು ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಅಷ್ಟರಲ್ಲಿ ತಾಯಿ ಝರೀನಾ ಮೃತಪಟ್ಟಿದ್ದಾರೆ. ಝರೀನಾ ಅವರ ಪುತ್ರಿ ಶಫಾ(20) ಳನ್ನು ರಕ್ಷಣೆ ಮಾಡಿದ್ದಾರೆ. 

ಬಂಟ್ವಾಳ ಅಗ್ನಿಶಾಮಕ ಸಿಬಂದಿ, ಪೊಲೀಸರು ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿದ್ದಾರೆ. ಬಂಟ್ವಾಳ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ಕು ದಿನದ ಮಳೆಗೆ ಐದನೇ ಬಲಿಯಾದಂತಾಗಿದೆ. ಶುಕ್ರವಾರದ ಹೊತ್ತಿಗೆ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಮುಂಜಾಗ್ರತಾ ಕ್ರಮವಾಗಿ ಶಾಲೆ, ಕಾಲೇಜಿಗೆ ರಜೆ ನೀಡಲಾಗಿದೆ.

 
 
 
 
 
 
 
 
 
 
 

Leave a Reply