ಬ್ರಹ್ಮಾವರ : ಸಾವ೯ಜನಿಕರಿಗೆ ಸಸಿ ವಿತರಣಾ ಕಾಯ೯ಕ್ರಮ

ಬ್ರಹ್ಮಾವರ: – ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ, ಸುವಣ೯ ಎಂಟರ್ಪ್ರೈಸಸ್ ಮತ್ತು ಸಮುದಾಯ ಆರೋಗ್ಯ ಕೇಂದ್ರ ಇವರ ವತಿಯಿಂದ ಜನೌಷಧಿ ಕೇಂದ್ರದಲ್ಲಿ ವನಮಹೋತ್ಸವ ಪ್ರಯುಕ್ತ ಸಾವ೯ಜನಿಕರಿಗೆ ಸಸಿ ವಿತರಣಾ ಕಾಯ೯ಕ್ರಮ ಜುಲೈ 1 ಶನಿವಾರ ನಡೆಯಿತು.

ಕಾಯ೯ಕ್ರಮಕ್ಕೆ ಚಾಲನೆ ನೀಡಿದ ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂತಿ೯ ಮಾತನಾಡಿ, ಪರಿಸರ ರಕ್ಷಣೆ ನಮ್ಮ ಆಧ್ಯ ಕತ೯ವ್ಯವಾಗಬೇಕು ಎಲ್ಲರೂ ಕನಿಷ್ಠ ಒಂದು ಗಿಡವನ್ನಾದರೂ ಬೆಳೆಸುವ ಕಾಯ೯ ಮಾಡಬೇಕು ಎಂದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|| ಮಹೇಶ್ ಐತಾಳ ಶುಭ ಹಾರೈಸಿದರು.

ಅರಣ್ಯಧಿಕಾರಿ ಹರೀಶ್ ಕೆ, ಜಯಂಟ್ಸ್ ಅಧ್ಯಕ್ಷ ವಿವೇಕಾನಂದ ಕಾಮತ್, ಕಾಯ೯ದಶಿ೯ ಮಿಲ್ಟನ್ ಒಲಿವೆರಾ, ಸುಂದರ ಪೂಜಾರಿ ಮೂಡುಕುಕ್ಕುಡೆ, ಸುವಣ೯ ಎಂಟರ್ಪ್ರೈಸಸ್ ಪ್ರಮುಖರಾದ ಸುನೀತಾ ಮಧುಸೂಧನ್, ಶ್ರೀನಾಥ್ ಕೋಟ. ಡೋರಿಸ್ ; ವಿಲ್ಸನ್; ಮಮತಾ ಪ್ರಕಾಶ್ಚಂದ್ರ ಸಹಕರಿಸಿದರು. ಕಾಯ೯ಕ್ರಮದ ಅಯೋಜಕ ಮತ್ತು ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು ಪ್ರಸ್ತಾವನೆಗೈದರು.ರಾಘವೇಂದ್ರ ಕವಾ೯ಲು ನಿರೂಪಿಸಿದರು.
ಈ ಸಂದಭ೯ದಲ್ಲಿ 20 ಕ್ಕೂ ಮಿಕ್ಕಿ ವಿವಿಧ ತಳಿಯ 2500ಕ್ಕೂ ಅಧಿಕ ಗಿಡಗಳನ್ನು ವಿತರಿಸಲಾಯಿತು.

 
 
 
 
 
 
 
 
 
 
 

Leave a Reply