ಬೈಂದೂರು : ವಾಹನ ಕಳ್ಳನ ಬಂಧನ

ದಿನಾಂಕ 02/01/204ರಂದು ಬೈಂದೂರು ತಾಲೂಕು ಯಡ್ತರೆ ಗ್ರಾಮದ ಶಿವಸಾಗರ ಹೋಟೆಲ್ ಎದುರು ಪಿರ್ಯಾದಿ ಆನಂದ ರವರು ನಿಲ್ಲಿಸಿದ HONDA DEO ಸ್ಕೂಟಿಯನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ : 03/2024 ಕಲಂ:379 IPC ಪ್ರಕರಣ ದಾಖಲಾಗಿರುತ್ತದೆ.  

ಪ್ರಕರಣದ ತನಿಖೆಯನ್ನು ತಿಮ್ಮೇಶ್ ಬಿ.ಎನ್, ಪಿ ಎಸ್ಸ್. ಐ, ಬೈಂದೂರು ಪೊಲೀಸ್ ಠಾಣೆ, ಸಿಬ್ಬಂದಿಗಳಾದ ಸುಜಿತ್ ಕುಮಾರ್, ಮಾಳಪ್ಪ ದೇಸಾಯಿ ಮತ್ತು ಸಂತೋಷ್ ರವರು ದಿನಾಂಕ 25/01/2024 ರಂದು ಆರೋಪಿತನಾದ ಲಕ್ಷ್ಮಣ್ ಅಂಬಾಜಿ (26) ಗುಳೇದಗುಡ್ಡ, ಎಂಬಾತನನ್ನು ಹಾವೇರಿ ಜಿಲ್ಲೆಯ ಬಂಕಾಪುರ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆದು ಆತನಿಂದ ಕಳವು ಮಾಡಿಕೊಂಡು ಹೋಗಿದ್ದ HONDA DEO ಸ್ಕೂಟಿಯನ್ನು ಸ್ವಾಧಿನ ಪಡಿಸಿ ಕೊಳ್ಳಲಾಗಿದೆ. 

       ಬಂದಿತ ಆರೋಪಿ ಮೇಲೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 41/2022 ಕಲಂ: 379 ಐಪಿಸಿ ರಂತೆ ಪ್ರಕರಣ ದಾಖಲಾಗಿರುವ ಬಗ್ಗೆ ವಿಚಾರಣೆ ವೇಳೆ ತಿಳಿದು ಬಂದಿರುತ್ತದೆ.

 
 
 
 
 
 
 
 
 
 
 

Leave a Reply