ಭೂಮಿಯನ್ನು ಹಡಿಲು ಬಿಡುವುದು ರಾಷ್ಟ್ರದ್ರೋಹ : ಸಚಿವ ಪಾಟೀಲ್

ಉಡುಪಿ: ರಾಜ್ಯದಲ್ಲಿ ಸುಮಾರು 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಡಿಲು ಭೂಮಿ ಇದೆ ಎಂದು ಅಂದಾಜಿಸಲಾಗಿದ್ದು, ಇದರಿಂದಾಗಿ ಆಹಾರೋತ್ಪಾದನೆ ಕುಂಠಿತವಾಗಲಿದೆ. ಸರಕಾರಕ್ಕೆ ಆದಾಯವು ಕಡಿಮೆಯಾಗಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕೇದಾರೋತ್ಥಾನ ಟ್ರಸ್ಟ್ ಮೂಲಕ 2000 ಎಕರೆ ಪ್ರದೇಶದಲ್ಲಿ ನಡೆಯುತ್ತಿರುವ ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ಕೆ ಶನಿವಾರ ಕಡೆಕಾರ್ ಗ್ರಾಮದಲ್ಲಿ ಚಾಲನೆ ನೀಡಿ ಮಾತನಾಡಿದರು.

ಭೂಮಿಯನ್ನು ಹಡಿಲು ಬಿಡುವುದು ರಾಷ್ಟ್ರದ್ರೋಹ.ಭೂಮಿತಾಯಿ ಬಂಜೆ ಮಾಡಿದ ಪಾಪ ಕಾರ್ಯಕ್ಕೆ ಗುರಿಯಾಗುತ್ತೇವೆ. ದೇಶದಲ್ಲಿ ಶೇಕಡ 60 ರಷ್ಟು ಉದ್ಯೋಗ ಕೃಷಿ ಕೃಷಿಯಿಂದ ಲಭಿಸುತ್ತಿದ್ದು ಶೇಕಡ 20ರಷ್ಟು ಜಿಎಸ್ಟಿ ಆದಾಯ ಸರ್ಕಾರಕ್ಕೆ ಬರುತ್ತದೆ. ಕಳೆದ ವರ್ಷ ರಾಜ್ಯದಲ್ಲಿ 153 ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಮಾಡಲಾಗಿದ್ದು, ಶೇಕಡ ಹತ್ತರಷ್ಟು ಉತ್ಪಾದನೆ ಹೆಚ್ಚಳವಾಗಿದೆ.ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಎಂಟು ಸಾವಿರ ಎಕರೆ ಹಡಿಲು ಭೂಮಿ ಇದೆ.ಈ ಪ್ರದೇಶದಲ್ಲಿ ಕೃಷಿ ಮಾಡಿದರೆ ಸುಮಾರು 15 ಸಾವಿರ ಕ್ವಿಂಟಲ್ ಅಕ್ಕಿ ಉತ್ಪಾದಿಸಬಹುದು ಎಂದರು.

ಶಾಸಕ ರಘುಪತಿ ಭಟ್,ಆರೆಸ್ಸೆಸ್ ಹಿರಿಯ ಪ್ರಚಾರಕ ದಾ. ಮಾ. ರವೀಂದ್ರ,ಉದ್ಯಮಿ ಭುವನೆಂದ್ರ ಕಿದಿಯೂರ್,ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ,ಸಹಾಯಕ ನಿರ್ದೇಶಕ ಮೋಹನ್ ರಾಜ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply