ಉಡುಪಿ ಎಪಿಎಂಸಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ~ವಿಜಯ ಕೊಡವೂರು ಆರೋಪ

ಉಡುಪಿ ಎಪಿಎಂಸಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಇದಕ್ಕೆ ಉದಾಹರಣೆ ಎಂದರೆ ಮರಣ ಹೊಂದಿದ ಜಮಾಲ್ ಅವರು ಮೂರು ವರ್ಷ ಒಂದು ತಿಂಗಳು ಆದರೂ ಅವರ ಹೆಸರಿನಲ್ಲಿ ಬಾಡಿಗೆಯನ್ನು ಕಟ್ಟುತ್ತ ಬರುತ್ತಿದ್ದು, ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿ ಬಾಡಿಗೆ ಸಂಗ್ರಹಿಸುತ್ತಿರುವಂತಹ ವಿಚಾರ ಕೂಡ ಎಪಿಎಂಸಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಆದಿಉಡುಪಿ ಎಪಿಎಂಸಿಯ ಅಧಿಕಾರಿಗಳು ಇತ್ತೀಚೆಗೆ ನಡೆದ ಎಡಿಸಿಯವರ ಕುಂದು ಕೊರತೆ ಸಭೆಯಲ್ಲಿ ಬಹಿರಂಗವಾದ ನಂತರ ದಿನಾಂಕ 20.11.2023 ರಂದು ಖಾಸಗಿ ದಿನಪತ್ರಿಕೆಯಲ್ಲಿ ಮೂರು ವರ್ಷದ ಬಳಿಕ ಜಮಾಲ್ ರವರ ಗೋದಾಮು ಅನ್ನು ಅವರ ಪತ್ನಿಯ ಹೆಸರಿಗೆ ವರ್ಗಾಯಿಸುವಂತೆ ವಿಷಯವನ್ನು ಪ್ರಕಟಿಸಿರುತ್ತಾರೆ.

ಆದ್ದರಿಂದ ನಾನು ಎಪಿಎಂಸಿಯ ಅಧಿಕಾರಿಗಳು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಎಡಿಸಿ ಅವರಿಗೆ ನನ್ನ ಪ್ರಶ್ನೆ ಮೂರು ವರ್ಷ ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿ ಬಾಡಿಗೆಯನ್ನು ಪಡೆಯುತ್ತಿರುವುದು ನಡೆದು ಬಂದಿರುತ್ತದೆ ಮೂರು ವರ್ಷ ಒಂದು ತಿಂಗಳ ಬಳಿಕ ದಿನಪತ್ರಿಕೆಯಲ್ಲಿ ಪ್ರಕಟಿಸಿ ಅವರ ಪತ್ನಿಯ ಹೆಸರಿನಲ್ಲಿ ವರ್ಗಾಯಿಸುತ್ತೇವೆ ಅನ್ನುವಂತಹ ಅವಶ್ಯಕತೆ ಏನಿತ್ತು. ಒಂದು ವೇಳೆ ಈ ರೀತಿ ಕೊಡುವುದೇ ಸರಿ ಅಂತ ಆದರೆ ಮರಣ ಹೊಂದಿ ಮೂರು ವರ್ಷ ಒಂದು ತಿಂಗಳಾದರೂ ಇದುವರೆಗೂ ಯಾಕೆ ತಾವುಗಳು ಅವರ ಪತ್ನಿಯ ಹೆಸರಿಗೆ ವರ್ಗಾವಣೆ ಮಾಡಲಿಲ್ಲ.

ಆದ್ದರಿಂದ ಇದರಲ್ಲಿ ಭ್ರಷ್ಟಾಚಾರ ನಡೆದಿರುವುದು ಹೌದು ಎಂದು ಎಪಿಎಂಸಿ ಅಧಿಕಾರಿಗಳು ಒಪ್ಪುವ ಸ್ಥಿತಿ ಎದುರಾಗಿದೆ. ಈಗಾಗಲೇ ಎಪಿಎಂಸಿ ಅಧಿಕಾರಿಗಳು ದಿನ ನಿತ್ಯದ ಪತ್ರಿಕೆಗಳಲ್ಲಿ ಪ್ರಕಟಿಸಿರುವುದು ಸಮಂಜಸವಲ್ಲ ಇದಕ್ಕೆ ಮತ್ತೊಮ್ಮೆ ಕುಳಿತು ಯೋಚನೆ ಮಾಡುವಂತದ್ದು ಆಗಬೇಕಾಗಿದೆ. ಈ ಪ್ರಕರಣ ಬೆಳಕಾಗಿ ಬರುವ ಸಂದರ್ಭದಲ್ಲಿ ಅಧಿಕಾರಿಗಳು ಸಾರ್ವಜನಿಕನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದರ ಒಳಗೆ ಇನ್ನು ಅನೇಕ ಭ್ರಷ್ಟಾಚಾರ ಆಗುತ್ತಿದೆ. ಹಾಗೂ ಪತ್ರಿಕೆಯಲ್ಲಿ ಪ್ರಕಟಣೆ ಮಾಡಿರುವುದರ ಬಗ್ಗೆ ನಮ್ಮ ವಿರೋಧವಿದೆ.

ಹೊಂದಿದ ವ್ಯಕ್ತಿಯ ಹೆಸರಿನಲ್ಲಿ ತಾವುಗಳು ಮೂರು ವರ್ಷದಿಂದ ಬಾಡಿಗೆಯನ್ನು ಪಡೆಯುತ್ತಿದ್ದೀರಿ ಅಂತ ಆದರೆ ಇನ್ನೂ ಅನೇಕ ಭ್ರಷ್ಟಾಚಾರಗಳು ಇದರೊಳಗೆ ಇದೆ ಎನ್ನುವಂತಹ ಸಂದೇಹ ನಮ್ಮಲ್ಲಿದೆ . ಕ್ಯಾನ್ಸರ್ ಪೀಡಿತ ವ್ಯಕ್ತಿಯಿಂದ 250 ಲೈಸೆನ್ಸ್ ಗೆ 40,000 ಪಡೆದಿರುವುದು ಮತ್ತು ಎಪಿಎಂಸಿ ಆವರಣದೊಳಗಿನ ಜಾಗವನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದು ಈಗಾಗಲೇ ಸಾರ್ವಜನಿಕರ ಗಮನಕ್ಕೆ ಬಂದಿದೆ.

ಬುದ್ಧಿವಂತರ ಜಿಲ್ಲೆಯಲ್ಲಿ ಈ ರೀತಿಯ ಭ್ರಷ್ಟಾಚಾರ ವಾಗುತ್ತಿರುವುದನ್ನು ನಾವು ಒಪ್ಪುವುದಿಲ್ಲ ನಮ್ಮ ವಿರೋಧವಿದೆ ಎಂದು ಎಪಿಎಂಸಿ ಅಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಯವರಿಗೆ, ಮತ್ತು ಅಪರ ಜಿಲ್ಲಾಧಿಕಾರಿಯವರ ಗಮನ ಕ್ಕೆ ಈಗಾಗಲೇ ತಂದಿದ್ದೇವೆ. ಈ ಬಗ್ಗೆ ಈವರೆಗೆ ಯಾವುದೇ ಶಿಸ್ತು ಕ್ರಮವನ್ನು ಜಿಲ್ಲಾಡಳಿತ ಕೈಗೊಂಡಿರುವುದಿಲ್ಲ. ಈ ವಿಚಾರವಾಗಿ ಈಗಾಗಲೇ ಕಾನೂನು ತಜ್ಞರಿಂದ ಸಲಹೆ ಪಡೆದು ಲೋಕಾಯುಕ್ತಕ್ಕೆ ದೂರು ನೀಡಲು ತೀರ್ಮಾನಿಸಲಾಗಿದೆ. ಅದರಿಂದ ಇದೇ ತಿಂಗಳು 29ನೇ ತಾರೀಖಿನಿಂದ ಅಹೋರಾತ್ರಿ ಧರಣೀ ಸತ್ಯಾಗ್ರಹ ಕೈಗೊಳ್ಳಲಿದ್ದೇವೆ.

 
 
 
 
 
 
 
 
 
 
 

Leave a Reply