Janardhan Kodavoor/ Team KaravaliXpress
32.6 C
Udupi
Sunday, February 5, 2023
Sathyanatha Stores Brahmavara

ಪ್ರತಿಕೂಲ ವಾತಾವರಣಗಳಲ್ಲೂ ಅವಕಾಶಗಳನ್ನು ಕಂಡುಕೊಳ್ಳುವ ರೋಟರಿ

   

ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯು ಜಗತ್ತಿಗೆ ಮಾರಕವಾದ ಪ್ರತಿಕೂಲ ಸಂದರ್ಭದಲ್ಲೂ ಧನಾತ್ಮಕವಾಗಿ ಸ್ಪಂದಿಸಿ ತನ್ನ ದ್ಯೇಯೋದ್ದೇಶಗಳಿಗೆ ತಕ್ಕಂತೆ ಅವಕಾಶಗಳನ್ನು ಸ್ರಷ್ಟಿಸಿ ಕೊಂಡಿದೆ. ಇಂದು ಕೋವಿಡ್- 19 ಸೋಂಕು ಜಗತ್ತಿಗೆ ಸವಾಲಾಗಿದ್ದು ಭಾರತದಲ್ಲೂ ಜನ ಜೀವನದ ದಿಕ್ಕನ್ನೇ ಬದಲಿಸಿದೆ. ಆದರೆ ರೋಟರಿ ಸಂಸ್ಥೆಯು ತನ್ನ ಯೋಜನೆಗಳನ್ನು ಸಮಯೋಚಿತವಾಗಿ ಮಾರ್ಪಾಡು ಮಾಡಿ ಕೊಂಡು ಈ ಪ್ರತಿಕೂಲ ವಾತಾವರಣವನ್ನು ಎದುರಿಸಲು ಸರಕಾರಗಳ ಜೊತೆ ಕೈ ಜೋಡಿಸಿದೆ.

ಪ್ರಧಾನ ಮಂತ್ರಿಗಳ ಪರಿಹಾರ ನಿಧಿ ಸೇರಿ ಸುಮಾರು 105 ಕೋಟಿ ರೂಪಾಯಿಗಳ ಪರಿಹಾರವನ್ನು ಈಗಾಗಲೇ ರೋಟರಿ ಸಂಸ್ಥೆ ಭಾರತ ಸರಕಾರಕ್ಕೆ ಈಗಾಗಲೇ ನೀಡಿದೆ. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ರೋಟರಿ ಚಟುವಟಿಕೆಗಳು ಸ್ತಬ್ದವಾದ ಸಂದರ್ಭದಲ್ಲೂ ಕೂಡ ಲಾಕ್ ಡೌನ್ ಸಂತ್ರಸ್ತರನ್ನು ಗುರುತಿಸಿ ಅವರಿಗೆ ಅಗತ್ಯ ಸೇವೆಗಳನ್ನು ಪೂರೈಸುವಲ್ಲಿ ರೋಟರಿ ಕ್ಲಬ್ಬುಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ರೋಟರಿ 3182 ಜಿಲ್ಲಾ ಗವರ್ನರ್ MPHF ಬಿ. ರಾಜಾರಾಮ್ ಭಟ್ ತಿಳಿಸಿದರು. ಅವರು ಉಡುಪಿ ಪ್ರಸಾದ್ ನೇತ್ರಾಲಯ ಆಸ್ಪತ್ರೆಯ ಸಭಾಂಗಣದಲ್ಲಿ ರೋಟರಿ ಕ್ಲಬ್ ಉಡುಪಿ ರಾಯಲ್ ನ ಪದಪ್ರಧಾನ ಸಮಾರಂಭದಲ್ಲಿಪದಪ್ರಧಾನ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿದರು

ಮುಖ್ಯ ಅತಿಥಿ  ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕ ಡಾ. ಕೃಷ್ಣಪ್ರಸಾದ್ ರೋಟರಿ ಸಂಸ್ಥೆಗಳು ಕೋವಿಡ್ 19 ವಾತಾವರಣದಲ್ಲಿ ಮಾಡುತ್ತಿರುವ ಸೇವೆಗೆ ಪೂರಕವಾಗಿ ಸೋಂಕಿತರಿಗೆ ಸಿಗುವ ಸೇವಾ ಸೌಲಭ್ಯತೆಗಳ ಬಗ್ಗೆ ಮಾಹಿತಿಗಳನ್ನು ನೀಡುವ ಯೋಜನೆಗಳನ್ನು ಹಾಕಿ ಕೊಳ್ಳಬೇಕು, ಈ ಮೂಲಕ ಕರೋನಾ ಜನಜಾಗ್ರತಿಯನ್ನು ಪ್ರತೀ ಮನೆ ಮನೆಗೂ ತಲುಪಿಸ ಬೇಕು ಎಂದು ಸಲಹೆ ನೀಡಿದರು.

ನೂತನ ಅಧ್ಯಕ್ಷ ಮಂಜುನಾಥ್ ಮಣಿಪಾಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಗವರ್ನರ್ ಆನಂದ್ ಉದ್ಯಾವರ್ ವಾರ್ಷಿಕ ವಾರ್ತಾ ಸಂಚಿಕೆಯನ್ನು ಬಿಡುಗಡೆ ಗೊಳಿಸಿದರು. ವಲಯ ಸೇನಾನಿ ಕಟಪಾಡಿ ಶಂಕರ್ ಪೂಜಾರಿ, ಮಾಜಿ ಸಹಾಯಕ ಗವರ್ನರ್ ಗಳಾದ ಕೆ.ಎಸ್ ಜೈವಿಠಲ್, ದಿನೇಶ್ ಹೆಗ್ಡೆ ಅತ್ರಾಡಿ, ಬಾಲಕೃಷ್ಣ ಮದ್ದೋಡಿ, ರೋಟರಿ ಪ್ರಮುಖರಾದ ಡಾ. ಸುರೇಶ ಶೆಣೈ, ತೇಜೇಶ್ವರ್ ರಾವ್, ಕೆ.ಟಿ ನಾಯ್ಕ್, ಉಪಸ್ಥಿತರಿದ್ದರು. ಸ್ಥಾಪಕ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ಸ್ವಾಗತಿಸಿದರು. ಕಾರ್ಯದರ್ಶಿ ಗುರುಪ್ರಸಾದ್ ಪಾಲನ್  ವಂದಿಸಿದರು. ಅಲ್ವಿನ್ ಅಂದ್ರಾದೆ ನಿರೂಪಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!