ಮಂದಿರ ಸ್ವಚ್ಚತೆ

ಬಾರಕೂರು ಇದು ಆಳುಪರ ಕಾಲದ ರಾಜಧಾನಿ .ಅನೇಕ ರಾಜ ಮನೆತನ ಆಳ್ವಿಕೆ ನಡೆಸಿದ ಪುಣ್ಯದ ಸ್ಥಳ.ಅನೇಕ ಬಸದಿ,ಸುಮಾರು ಮುನ್ನೂರಕ್ಕೂ ಅಧಿಕ ದೇವಾಲಯ ಇಲ್ಲಿಯ ವೈಭವವನ್ನು ಮತ್ತೆ ನೆನಪು ಮಾಡುವಂತಿದೆ.

ಕ್ರಿ.ಶ ೧೧ ನೇ ಶತಮಾನದ್ದೆಂದು ಹೇಳಲಾಗುತ್ತಿರುವ ಶ್ರೀ ಗೌರೀಶ್ವರ ದೇಗುಲ ಹಿಂದೆ ವೈಭವದಿಂದ ಮೆರೆದ ದೇಗುಲವಾಗಿದೆ.ಇಲ್ಲಿಯ ಮಿಥುನ ನಾಗ ಶಿಲ್ಪ,ಅವಳೀ ನಾಗ ಶಿಲ್ಪ, ಬಿಳಿಯ ಶಿಲೆಯಿಂದ ಶ್ರೀ ಗೌರೀಶ್ವರ ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತಿದೆ.

ಶೈವ ಹಾಗೂ ವೈಷ್ಣವ ದೇವಾಲಯ ಇರುವ ಅಪರೂಪದ ಸಂಗಮ ಸ್ಥಳದಂತಿದೆ ಈ ದೇಗುಲ.

ಶಾಸನ ಉಲ್ಲೇಖದಂತೆ ಬಾರಕನ್ಯಾಪುರವೆಂದು ಕರೆಯಲ್ಪಡುವ ಈ ಊರು ಪ್ರವಾಸಿಗರ ನೆಚ್ಚಿನ ಕೇಂದ್ರದ ಸ್ಥಳದಂತೆ ಕಾಣಲ್ಪಟ್ಟಿದೆ.

ಪ್ರವಾಸಿ ಸ್ಥಳದ ಪ್ರವಾಸಿಗರ ತನ್ನತ್ತ ಬರ ಸೆಳೆಯಲು ಯುವಾ ಬ್ರಿಗೇಡ್ ಕುಂದಾಪುರ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಇತಿಹಾಸ ಪ್ರಸಿದ್ಧ ಚೌಳಿ ಕೆರೆಯ ಸಮೀಪದ
ಶ್ರೀ ಗೌರೀಶ್ವರ ದೇವಸ್ಥಾನ ಸ್ವಚ್ಚತಾ ಕಾಯ೯ ಭಾನುವಾರ ನಡೆಯಿತು.

ಈ ಸಂದಭ೯ದಲ್ಲಿ ಯುವಾ ಬ್ರಿಗೇಡ್ ನ ನಿರಂಜನ್ ಶೆಟ್ಟಿ ತಲ್ಲೂರು, ಪ್ರಮೋದ್ , ಪ್ರದೀಪ, ಶಶಿ ,ಸುಬ್ರಹ್ಮಣ್ಯ ,ಇತಿಹಾಸ ಉಪನ್ಯಾಸಕರು ಆಗಿರುವ ಅರುಣ್ ಕುಮಾರ್, ಸತೀಶ್ ಗುಂಡ್ಮಿ,ಭರತ್ ಗುಡಿಗಾರ್,ಪ್ರಶಾಂತ್ ಖಾವಿ೯ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply