Janardhan Kodavoor/ Team KaravaliXpress
27.6 C
Udupi
Saturday, July 2, 2022
Sathyanatha Stores Brahmavara

ಮಣಿಪಾಲದ ಕೆನರಾ ಬ್ಯಾಂಕ್ ಪ್ರಬಂಧನ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಮಣಿಪಾಲದ ಕೆನರಾ ಬ್ಯಾಂಕ್ ಪ್ರಬಂಧನ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಜೂನ್ 21 ರಂದು ಸಾಮೂಹಿಕವಾಗಿ ಯೋಗಾಭ್ಯಾಸವನ್ನು ಮಾಡಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಯೋಗ ಶಿಕ್ಷಕಿಯರಾದ ಶ್ರೀಮತಿ ರೂಪ ಬಲ್ಲಾಳ್ ಮತ್ತು ಶ್ರೀಮತಿ ಕಾತ್ಯಾಯಿನಿಯವರು ಯೋಗ ಪ್ರಾತ್ಯಕ್ಷಿಕೆ ನೀಡಿದರು. ಯೋಗದಿಂದ ಧೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಲು ಸಾಧ್ಯ ಎಂದು ಸಂಸ್ಥೆಯ ಮಹಾ ಪ್ರಬಂಧಕರಾದ ಶ್ರೀ ಬಿ. ಯೋಗೀಶ್ ಆಚಾರ್ಯ ಹೇಳಿದರು. ಪ್ರತಿದಿನ ಯೋಗ ಮಾಡಿ ಔಷಧಿ ರಹಿತ ಜೀವನವನ್ನು ಅಳವಡಿಸಿಕೊಳ್ಳಿ ಎಂದು ಮುಖ್ಯ ಶಿಕ್ಷಣಾಧಿಕಾರಿ ಹಾಗೂ ಉಪ ಮಹಾ ಪ್ರಬಂಧಕರಾದ ಶ್ರೀ ಗಂಗಾಧರ ಹೆಚ್.ಕೆ ರವರು ಕರೆ ನೀಡಿದರು. ಸಂಸ್ಥೆಯ ಶಿಕ್ಷಕ ವರ್ಗ ಹಾಗೂ ಸಿಬಂದಿ ವರ್ಗದವರು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!