ಬೋಟ್ ದುರಂತ: ಕಣ್ಮರೆಯಾಗಿದ್ದ ಎಲ್ಲಾ ಮೀನುಗಾರರ ಮೃತದೇಹ ಪತ್ತೆ

ಮಂಗಳೂರಿನಲ್ಲಿ ಮಂಗಳೂರಿನಲ್ಲಿ ನಡೆದ ಮತ್ತೊಂದು ದೋಣಿ ದುರಂತದಲ್ಲಿ ಮುಳುಗಿದ್ದವರಿಗಾಗಿ ಸತತ ಶೋಧ ಕಾರ್ಯದ ಬಳಿಕ ದುರಂತದಲ್ಲಿ ಮಡಿದ ಎಲ್ಲಾ ಆರು ಮಂದಿ ಮೀನುಗಾರರ ಮೃತದೇಹವನ್ನು ಮುಳುಗುತಜ್ಞರು ಪತ್ತೆ ಹಚ್ಚಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ನಾ.30 ರಂದು ತಡ ರಾತ್ರಿ ಶ್ರೀ ರಕ್ಷಾ ಹೆಸರಿನ ಪರ್ಸೀನ್ ಬೋಟ್ ಉಳ್ಳಾಲ ಅಳಿವೆ ಬಾಗಿಲು ಬಳಿ ಮುಳುಗಡೆಯಾಗಿತ್ತು. ಇದರಲ್ಲಿದ್ದ ಒಟ್ಟು 25 ಮೀನುಗಾರರ ಪೈಕಿ ಆರು ಮಂದಿ ಕಣ್ಮರೆಯಾಗಿದ್ದುರು ಇಬ್ಬರ ಮೃತದೇಹ ಮಾತ್ರ ಡಿ.1ರಂದು ಪತ್ತೆಯಾಗಿತ್ತು. ಇನ್ನ ಉಳಿದ ನಾಲ್ಕು ಮಂದಿಯ ಮೃತದೇಹವೂ ಇಂದು ಪತ್ತೆಯಾಗಿದೆ.

ಪಾಂಡುರಂಗ ಮತ್ತು ಪ್ರೀತಂ ಶವ ಮಂಗಳವಾರವೇ ಪತ್ತೆಯಾಗಿತ್ತು. ಕಸಬಾ ಬೆಂಗರೆ ನಿವಾಸಿ ಹಸೈನಾರ್, ಚಿಂತನ್, ಜಿಯಾವುಲ್ಲಾ ಮತ್ತು ಅನ್ಸಾರ್ ಇಂದು ಪತ್ತೆಯಾದವರು. ಈ ನಾಲ್ವರ ಶವ ಬೋಟು ಮುಳುಗಿದ ಸಮೀಪವೇ ಪತ್ತೆಯಾಗಿದೆ. ಇವರ ಶವ ಮೀನಿನ ಬಲೆಗೆ ಸಿಲುಕಿದ್ದು, ಇವರು ಬಲೆಯಿಂದ ಹೊರಬರಲಾಗದೆ ಮೃತಪಟ್ಟಿರುವ ಸಾಧ್ಯತೆಗಳಿವೆ. ಶೋಧ ಕಾರ್ಯಾಚರಣೆಯನ್ನು ಕೋಸ್ಟ್‌ಗಾರ್ಡ್ ಹಾಗೂ ತಣ್ಣೀರುಬಾವಿ ಮುಳುಗು ತಜ್ಞರ ತಂಡ ಶವಗಳನ್ನು ಹುಡುಕಿದ್ದಾರೆ.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಈ ಮೃತ ಮೀನುಗಾರರ ಕುಟುಂಬಕ್ಕೆ ತಲಾ ಆರು ಲಕ್ಷ ರೂ ಪರಿಹಾರಧನ ಘೋಷಿಸಿದ್ದು, ಈ ಕುರಿತು ಟ್ವೀಟ್ ಮಾಡಿದ್ದಾರೆ. ಇದೀಗ ಆರು ಲಕ್ಷ ಪರಿಹಾರ ನೀಡಲಾಗಿದ್ದು ಇನ್ನಷ್ಟು ಸಹಾಯ ಮಾಡುವ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.

 
 
 
 
 
 
 
 
 
 
 

Leave a Reply