ಭೂಮಿಗೀತ ಪಟ್ಲ ತಂಡದವರು ಅಭಿನಯಿಸಿದ ನಾಟಕ “ಈದಿ~ ಶಿಲ್ಪಾ ಜೋಶಿ

ತುಳು ಕೂಟ ಉಡುಪಿ ಯವರು ಏರ್ಪಡಿಸಿದ ನಾಟಕ ಸ್ಪರ್ಧೆಯಲ್ಲಿ
ಭೂಮಿಗೀತ ಪಟ್ಲ ತಂಡದವರು ಅಭಿನಯಿಸಿದ ನಾಟಕ “ಈದಿ”

ಅವರೇ ಹೇಳಿರುವಂತೆ ಕಾರ್ಪೊರೇಟ್ ಭಯೋತ್ಪಾದನೆ… ಎಲ್ಲರೂ ಇಲ್ಲಿ ಪಗಡೆಯ ದಾಳಗಳೇ.. ಪಾತ್ರಧಾರಿಗಳು ಅನಿವಾರ್ಯವಾಗಿ ವ್ಯವಸ್ಥಿತವಾದ ಈ ವಿಷವರ್ತುಲದೊಳಗೆ ಸಿಲುಕುವುದು , ದ್ವೇಷದ ಗಾಳಿಯನ್ನು ಉಸಿರಾಡುತ್ತ ಇರುವಲ್ಲಿ .. ಮಾನವೀಯತೆಯು ಗೆಲ್ಲಬೇಕಾದ ಕಾಲ ..ಮೊದಲು ಮಾನವನಾಗಿ.. ಜಾತಿ ,ಪಂಗಡ ವ್ಯವಸ್ಥೆಯನ್ನು ಮೀರಿದ ಅರಿವು ಮನುಷ್ಯನಲ್ಲಿ, ಸಮಾಜದಲ್ಲಿ ಇರಬೇಕು ಎಂಬುದನ್ನು ಹೇಳುವ ನಾಟಕ ಈದಿ .
ಈದಿ ಅಂದರೆ ಹಬ್ಬದ ಉಡುಗೊರೆ , ಮಾರ್ಮಿಕವಾಗಿ ಬಳಕೆ ಆಗಿದೆ.

ಭಯೋತ್ಪದಕರಿಗೆ ಬಲಿಯಾದ ತನ್ನ ಮಗಳನ್ನು, ತಂದೆಯನ್ನು ಹುಡುಕುತ್ತಾ ಬಂದ ರೋಶನಿಯಲ್ಲಿ ಕಾಣುವ ರಜಿಯಾ, ತನ್ನ ಮನೆಗೆ ಹಿಂದೂ ಹೆಣ್ಣು ಮಗಳು ಬಂದಾಗ ಅವಳಿಗೆ ಆಶ್ರಯವಿತ್ತು ತನ್ನವರಿಂದಲೇ ಅವಳನ್ನು ರಕ್ಷಿಸಲು ಪಡುವ ಶ್ರಮ .. ರಜಿಯಾನ ಪಾತ್ರದಲ್ಲಿ ಸಹನಾ, ರೋಶನಿ ಯಾಗಿ ಭಾರ್ಗವಿ ,ರಜಿಯಾನ ಸಾಕುಮಗ ನ ಪಾತ್ರಧಾರಿಗಳು ಪಾತ್ರಕ್ಕೆ ಜೀವ ತುಂಬಿದ್ದಾರೆ.

ಸುಂದರವಾದ ಪೇಂಟಿಂಗ್ , ಚಂದದ ಕಲ್ಪನೆ ಕಟ್ಟಿ ಕೊಡುತ್ತದೆ ಪೂರಕವಾದ ಸಂಗೀತ, ಬೆಳಕು ನಾಟಕ ಗೆಲ್ಲಿಸುವಲ್ಲಿ ಸಹಕಾರಿ. ಒಳ್ಳೆಯ ಯುವ ತಂಡ , ರಂಗದ ಭರವಸೆಯ ಬೆಳವಣಿಗೆ .
ಸಾಂಕೇತಿಕವಾಗಿ ಬಳಸಿದ ಹುಲಿ ವೇಷ .. ಕ್ರೌರ್ಯವನ್ನು ಕಟ್ಟುವಲ್ಲಿ ಸಹಕಾರಿಯಾಗಿದೆ .
ಮುಖ್ಯಕಥೆಗೆ ಪೂರಕವಾದ ಕಥೆ ಸ್ವಲ್ಪ ಗೊಂದಲ ಉಂಟು ಮಾಡುತಿತ್ತು .ಕೆಲವು ಪಾತ್ರಗಳ ಪಿಸು ಮಾತುಗಳು ತುಂಬಾ ಬಲವಂತ ವಾಗಿ ಬೊಬ್ಬೆಯ ಹಾಗಿತ್ತು . ಅನಾವಶ್ಯಕ ಉದ್ವೇಗ- ಮಾತುಗಳನ್ನು ಪ್ರೇಕ್ಷಕರಿಗೆ ಮುಟ್ಟಿಸಲು ತಡೆಯಾಗಿತ್ತು . ಉತ್ತಮ ಪ್ರದರ್ಶನ

ಸುಂದರವಾದ ಸಂದೇಶದೊಂದಿಗೆ ಕೊನೆ ಗೊಳ್ಳುವ ನಾಟಕ .
“ದಡದ ಆ ಕಡೆ ಈ ಕಡೆ ನಿಂತು
ಕಲೆಯುವುದೆಂತು…
ಒಂದೇ ದ್ವೇಷದ ನದಿ ಬತ್ತಬೇಕು
ಇಲ್ಲಾ ಪ್ರೀತಿಯ ಸೇತು ಕಟ್ಟಬೇಕು…

– ಶಿಲ್ಪಾ ಜೋಶಿ

 
 
 
 
 
 
 
 
 
 
 

Leave a Reply