ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವರ್ಗಾವಣೆ!

ಬೆಂಗಳೂರು : ರಾಜ್ಯದ ಮೂವರು ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ದಿಡೀರ್ ಆದೇಶಿಸಿದೆ.

ಪ್ರಸ್ತುರ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್ ರಾವ್ ಅವರನ್ನ ಎಡಿಜಿಪಿ ಆಂತರಿಕ ಭದ್ರತಾ ವಲಯಕ್ಕೆ ವರ್ಗಾವಣೆ ಮಾಡಿದ್ದು,  ಗುಪ್ತಚರ ಇಲಾಖೆಯಲ್ಲಿ ಎಡಿಜಿಪಿಯಾಗಿದ್ದ ಕಮಲ್ ಪಂತ್ ಅವರನ್ನ ಸರ್ಕಾರ ತಕ್ಷಣ ಜಾರಿ ಬರುವಂತೆ ಬೆಂಗಳೂರು ಪೊಲೀಸ್ ಆಯುಕ್ತರನ್ನಾಗಿ ನೇಮಿಸಿದೆ.ಇನ್ನು ಸಿಐಡಿ ವಿಭಾಗದಲ್ಲಿ ಎಡಜಿಪಿಯಾಗಿದ್ದ ಬಿ. ದಯಾನಂದ ಅವರನ್ನ ಗುಪ್ತಚರ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

Leave a Reply