ಮಾತಿನ ಬದಲು ಕೃತಿಯ ಮೂಲಕ‌ ಪ್ರಶಂಸೆ

 

ಉಡುಪಿ: ಕೊರೊನಾ ವಾರಿಯರ್ ಗಳನ್ನು ಕೇವಲ ಬಾಯಿ ಮಾತಿನ ಹೊಗಳಿ ಅವರ ಕಾರ್ಯವನ್ನು ಮೆಚ್ಚುವವರು ಹಲವರು. ಆದರೆ ಕೃತಿಯ ಮೂಲಕ ಮೆಚ್ಚುಗೆ ವ್ಯಕ್ತಪಡಿಸುವವರು ವಿರಳ. ಅಂಥವರಲ್ಲಿ ಉಡುಪಿ ದಸ್ತಾವೇಜು ಬರಹಗಾರ, ಸೋದೆ ಮಠ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ರತ್ನಕುಮಾರ್ ಎದ್ದುಕಾಣುತ್ತಾರೆ.
ತಮ್ಮ ಷಷ್ಠಬ್ದಿಪೂರ್ತಿ ಸಮಾರಂಭವನ್ನು ಕೋವಿಡ್ ಸೈನಿಕರಿಗೆ ನೆರವಾಗುವ ಮೂಲಕ ಆಚರಿಸಿದರು. ಕೊರೊನಾ ವಾರಿಯರ್ಸ್ ಗೆ ಶುಕ್ರವಾರ ಸೀರೆ ವಿತರಿಸುವ ಮೂಲಕ ವರಮಹಾಲಕ್ಷ್ಮಿ ಪೂಜೆಯ ಸಂಭ್ರಮವನ್ನು ಆಶಾ ಕಾರ್ಯಕರ್ತೆಯರ ಮೊಗದಲ್ಲಿ ಮೂಡಿದ ಹರ್ಷದ ಮೂಲಕ‌ ಆಚರಿಸಿದರು.


ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ತನ್ನ 60ನೇ ಹುಟ್ಟುಹಬ್ಬ ಅಂಗವಾಗಿ ರತ್ನಕುಮಾರ್ ಉಡುಪಿ ಜಿಲ್ಲೆಯ ಎಲ್ಲ 1,026 ಆಶಾ ಕಾರ್ಯಕರ್ತೆಯರಿಗೆ ವಿತರಿಸಲು ಸೀರೆಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು. ಶಾಸಕ ಕೆ. ರಘುಪತಿ ಭಟ್ ಇದ್ದರು.

ಜಿಲ್ಲಾಧಿಕಾರಿ ಜಿ. ಜಗದೀಶ್, ಕೊರೊನಾ ವಾರಿಯರ್ ಗಳನ್ನು ಬಾಯಿ ಮಾತಿನಲ್ಲಿ ಹೊಗಳುವುದಕ್ಕಿಂತ ಕಾರ್ಯರೂಪದಲ್ಲಿ ಹೊಗಳುವುದು ಮುಖ್ಯ. ಇಂಥ ಆದರ್ಶಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಳ್ಳುವುದು ಅಗತ್ಯ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಸುಧೀರ ಚಂದ್ರ ಸೂಡ, ಜಿಲ್ಲಾ ಕೊರೊನಾ ನೋಡಲ್ ಅಧಿಕಾರಿ ಡಾ. ಪ್ರಶಾಂತ ಭಟ್, ವೈದ್ಯಾಧಿಕಾರಿ ಡಾ. ಪ್ರೇಮಾನಂದ ಮೊದಲಾದವರಿದ್ದರು. ನಿವೃತ್ತ ಸರ್ಕಾರಿ ಅಧಿಕಾರಿ ಹರಿಕೃಷ್ಣ ಶಿವತ್ತಾಯ ನಿರೂಪಿಸಿದರು. ದಾನಿ ರತ್ನಕುಮಾರ್, ಪತ್ನಿ ಸುಜಾತಾ, ಅವನಿ, ಶಶಾಂಕ ಶಿವಾತ್ತಯ ಇದ್ದರು.

Leave a Reply