ಉಡುಪಿಯಲ್ಲಿ 77 ಮಂದಿ ಬಿಡುಗಡೆ

ಉಡುಪಿ: ಜಿಲ್ಲೆಯ ಕೊರೊನಾ ಸೋಂಕಿತರ ಪೈಕಿ ಶುಕ್ರವಾರ77 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 2,522 ತಲುಪಿದೆ. ಪ್ರಸ್ತುತ 1,805 ಮಂದಿ ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರಚಂದ್ರ ಸೂಡ ತಿಳಿಸಿದ್ದಾರೆ.

ಇಂದು 213 ಹೊಸ ಪ್ರಕರಣ ಪತ್ತೆಯಾಗಿದೆ. ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 4356 ತಲುಪಿದೆ. ಇಂದು 9ಮಂದಿ ಕೊರೊನಾ ಶಂಕಿತರೂ ಸೇರಿದಂತೆ 40 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ26 ಮಂದಿ ಗಂಡಸರು ಮತ್ತು 14 ಮಂದಿ ಹೆಂಗಸರು. 42ಮಂದಿ ವಾರ್ಡಿನಿಂದ ಬಿಡುಗಡೆ ಗೊಂಡಿದ್ದಾರೆ. ಲಭ್ಯ ವೈದ್ಯಕೀಯ ವರದಿ ಪೈಕಿ 621 ನೆಗೆಟಿವ್ ಬಂದಿದೆ. ಇನ್ನೂ 562 ಮಂದಿಯ ವರದಿ ಬಾಕಿ ಇದೆ ಎಂದು ಡಾ. ಸೂಡ ತಿಳಿಸಿದ್ದಾರೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply