ಬೆಲ್ ಓ ಸೀಲ್ ವಾಲ್ವ್ಸ್ ಕಲ್ಪಕ್ಕಂನ ಐಜಿಸಿಎಆರ್ ಗೆ ವಿಷೇಶವಾದ ಪರಮಾಣು ವಾಲ್ವ್ಸ್ ಗಳನ್ನು ತಯಾರಿಸುತ್ತಿದೆ.

ಬೆಲ್ ಒ ಸೀಲ್ ವಾಲ್ವ್ಸ್, ಉಡುಪಿ ಮೇಕ್ ಇನ್ ಇಂಡಿಯಾ ಅಭಿಯಾನದ ಅಡಿಯಲ್ಲಿ “ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿರ‍್ಚ್” (ಐಜಿಸಿಎಆರ್) ಗೆ ವಿಶೇಷ ಪರಮಾಣು ವಾಲ್ವ್ಸ್ ಗಳನ್ನು ಪೂರೈಸುವ ಸವಾಲನ್ನು ಯಶಸ್ವಿ ಯಾಗಿ ಕೈಗೆತ್ತಿಕೊಂಡಿದೆ. ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚಿನ ಮಿತಿಗಳು ಮತ್ತು ಸವಾಲುಗಳೊಂದಿಗೆ ಈ ವಿಶೇಷ ಪರಮಾಣು ವಾಲ್ವ್ಸ್ ಗಳನ್ನು ತಯಾರಿಸುವ ಸವಾಲನ್ನು ಬೆಲ್ ಒ ಸೀಲ್ ವಾಲ್ವ್ಸ್ ವ್ಯವಸ್ಥಾಪಕ ನರ‍್ದೇಶಕ ರಾಜೇಶ್ ಕೆ ಸಾಲಿನ್ಸ್ರವ ನೇತೃತ್ವದ ಸರ‍್ಪಿತ ತಂಡವು ವಹಿಸಿಕೊಂಡಿದೆ.
ಬೆಲ್ ಒ ಸೀಲ್ ವಾಲ್ವ್ಸ್ ಈ ವಾಲ್ವ್ ಗಳನ್ನು ಅಭಿವೃದ್ಧಿ ಪಡಿಸುವ ಆದೇಶವನ್ನು ಮೇಕ್ ಇನ್ ಇಂಡಿಯಾ ಕಾರ‍್ಯಕ್ರಮ ದಡಿಯಲ್ಲಿ ಸ್ರ‍್ಧಾತ್ಮಕ ಮನೋಭಾವದಿಂದ ಸ್ವೀಕರಿಸಿದೆ. ಪರಮಾಣು ಇಂಧನ ಇಲಾಖೆ ಬೆಲ್ ಒ ಸೀಲ್‌ನ ತಾಂತ್ರಿಕತೆ ಮತ್ತು ಗುಣಮಟ್ಟವನ್ನು ಅನೇಕ ಹಂತಗಳಲ್ಲಿ ಮೌಲ್ಯಮಾಪನ ಮಾಡಿದೆ. ಆತ್ಮನರ‍್ಭಾರ ಭಾರತ್ ಭಾಗವಾಗಿ, ಈ ವಿಶಿಷ್ಟ ವಾಲ್ವ್ ಗಳನ್ನು “ದಿ ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿರ‍್ಚ್ (ಐಜಿಸಿಎಆರ್)” ವಿಜ್ಞಾನಿಗಳೊಂದಿಗೆ ಅತ್ಯಂತ ಸೂಕ್ಷ್ಮ ಮತ್ತು ಅಧಿಕ ತಾಪಮಾನದ ದ್ರವ ಸೋಡಿಯಂ ಸೇವೆಗಾಗಿ ಅಭಿವೃದ್ಧಿಪಡಿಸಲಾಗಿದೆ.
ಬೆಲ್ ಒ ಸೀಲ್ ತಂಡವು ಈ ವಿಶೇಷ ಫ಼್ರೋಸನ್ ಸೀಲ್ ಪ್ರಕಾರದ ವಾಲ್ವ್ಸ್ ಗಳನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿ ತಯಾರಿಸಿದೆ. ಈ ದೊಡ್ಡ ಗಾತ್ರದ ಫ಼್ರೋಸನ್ ಸೀಲ್ ವಾಲ್ವ್ಸ್ ಗಳನ್ನು ಭಾರತದಲ್ಲಿ ಮೊದಲ ಬಾರಿಗೆ ಸಂಪರ‍್ಣವಾಗಿ ತಯಾರಿಸಲಾಗಿದ್ದು, ಇದರಿಂದಾಗಿ ವಿದೇಶಿ ವಿನಿಮಯವು ಉಳಿತಾಯವಾಗಲಿದೆ ಎಂದು ರಾಜೇಶ್ ಕೆ ಸಾಲಿನ್ಸ್ ರವರು ಹೇಳಿದರು. ಈ ವಾಲ್ವ್ಸ್ ಗಳ ಅಭಿವೃದ್ಧಿ ಗಾಗಿ ಒಂದು ರ‍್ಷವನ್ನು ತೆಗೆದುಕೊಂಡಿದ್ದು ಈ ಯೋಜನೆಯನ್ನು ಯಶಸ್ವಿಯಾಗಿ ಪರ‍್ಣಗೊಳಿಸಿದ ನಂತರ ಬೆಲ್ ಒ ಸೀಲ್ ಬಗ್ಗೆ  ಉನ್ನತ ಆಡಳಿತ ಮಂಡಳಿಯು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಶೇಷ ಪ್ರಕಾರದ ಫ಼್ರೋಸನ್ ಸೀಲ್ ವಾಲ್ವ್ಸ್ ಗಳನ್ನು ವೇಗದ ಬ್ರೀಡರ್ ರಿಯಾಕ್ಟರ್‌ಗಳಲ್ಲಿ ಬಳಸಲಾಗುತ್ತದೆ, ಇದು ನಮ್ಮ ದೇಶದ ಎರಡನೇ ಹಂತದ ಪರಮಾಣು ವಿದ್ಯುತ್ ಕರ‍್ಯಕ್ರಮದ ಭಾಗವಾಗಿದೆ. ವೇಗದ ಬ್ರೀಡರ್ ರಿಯಾಕ್ಟರ್‌ಗಳು ವಿದ್ಯುತ್ ಉತ್ಪಾದನೆಯ ಸಮಯದಲ್ಲಿ ಬಳಸುವುದಕ್ಕಿಂತ ಥೋರಿಯಂ -232 ಮತ್ತು ಯುರೇನಿಯಂ -238 ಅನ್ನು ಪರಿರ‍್ತಿಸುವ ಮೂಲಕ ಹೆಚ್ಚಿನ ಪರಮಾಣು ಇಂಧನವನ್ನು ಉತ್ಪಾದಿಸಬಹುದು. ಭಾರತವು ಥೋರಿಯಂನ ಅತಿ ದೊಡ್ಡ ನಿಕ್ಷೇಪವನ್ನು ಹೊಂದಿದ್ದು ಹಾಗೂ ಈ ವೇಗದ ಬ್ರೀಡರ್ ರಿಯಾಕ್ಟರ್‌ಗಳು ಮುಂದೆ ನಮ್ಮ ದೇಶಕ್ಕೆ ಪರಮಾಣು ಶಕ್ತಿಯ ಆಶಾದಾಯಕ ಬೆಳವಣಿಗೆಗಳಾಗಿದೆ.

ಅಂತಿಮವಾಗಿ, ಈ ವಾಲ್ವ್ಸ್ ಗಳ ಕಠಿಣ ಪರೀಕ್ಷೆಯನ್ನು ಇತ್ತೀಚೆಗೆ ಬೆಲ್ ಒ ಸೀಲ್ ಉಡುಪಿ ಸ್ಥಾವರದಲ್ಲಿ ಯಶಸ್ವಿಯಾಗಿ ಪರ‍್ಣಗೊಳಿಸಲಾಯಿತು ಮತ್ತು ಈ ವಾಲ್ವ್ಸ್ ಗಳನ್ನು ಈ ತಿಂಗಳ ಆರಂಭದಲ್ಲಿ ಕಲ್ಪಕ್ಕಂನ ಐಜಿಸಿಎಆರ್ ಗೆ ಒದಗಿಸಲಾಗಿದೆ ಎಂದು ರಾಜೇಶ್ ಕೆ ಸಾಲಿನ್ಸ್ ರವರು ತಿಳಿಸಿದರು. ಕಂಪನಿಯು ಕಳೆದ ಜುಲೈನಲ್ಲಿ ಜಿರೋ ಲೀಕೆಜ್ ವಾಲ್ವ್ ಗಳನ್ನು ಪೂರೈಸಿದ್ದು, ಇದು ನ್ಯೂಕ್ಲಿಯರ್ ಪವರ್ ಕರ‍್ಪೊರೇಶನ್ ಆಫ್ ಇಂಡಿಯಾದ ನರ‍್ದೆಶನದಂತೆ ಪೂರೈಸಿತು, ಇದು ಗುಜರಾತ್‌ನ ಕಾಕ್ರಪರ್ ಪರಮಾಣು ವಿದ್ಯುತ್ ಸ್ಥಾವರ ದಲ್ಲಿ ತನ್ನ ಪಾತ್ರವನ್ನು ಯಶಸ್ವಿಯಾಗಿ ಪೊರೈಸುತ್ತಿದೆ.

 
 
 
 
 
 
 
 
 
 
 

Leave a Reply