Janardhan Kodavoor/ Team KaravaliXpress
30.6 C
Udupi
Sunday, October 2, 2022
Sathyanatha Stores Brahmavara

ಶ್ರೀಮಠ ಬಾಳೆಕುದ್ರು ನೃಸಿಂಹಾಶ್ರಮ ಶ್ರೀಗಳ ಚಾತುರ್ಮಾಸ್ಯ

ಕೋಟ: ಶ್ರೀಶುಭಕೃತ್ ನಾಮ ಸಂವತ್ಸರದ ಆಷಾಢ ಪೂರ್ಣಿಮಾ,ಬುಧವಾರ ಜು.13ರಂದು ಶ್ರೀಮಠ ಬಾಳೆಕುದ್ರು ನೃಸಿಂಹಾಶ್ರಮ ಶ್ರೀಗಳ ಪಟ್ಟದ ದೇವರಾದ ಶ್ರೀ  ಲಕ್ಷ್ಮೀನೃಸಿಂಹ ದೇವರ ಸನ್ನಿಧಿಯಲ್ಲಿ “ವ್ಯಾಸಪೂಜಾ ಚಾತುರ್ಮಾಸ್ಯ” ಸಂಕಲ್ಪಾದಿ ಧರ್ಮಗಳನ್ನು ಯಥಾವಿಧಿ ನಡೆಸಿ, ವಿಶೇಷಾನುಷ್ಠಾನದ ಜೊತೆಗೆ ಶ್ರೀಮಠದ ಶಿಷ್ಯರ, ಭಕ್ತರ, ಕ್ಷೇಮಾಭಿವೃದ್ಧಿಗಾಗಿ,ಲೋಕಕಲ್ಯಾಣಕ್ಕಾಗಿ, ಪೂಜಾ ಕೈಂಕರ್ಯಗಳನ್ನು ದಿನ ನಿತ್ಯ ಸಾಂಗವಾಗಿ ನೆರವೇರಿಸಿ, ಹಾಗೆಯೇ ಚಾತುರ್ಮಾಸ್ಯ ವೃತದ ಸಂದರ್ಭದಲ್ಲಿ ಪ್ರತೀ ದಿನ ಬೆಳಿಗ್ಗೆ 10.00 ಗಂಟೆಯಿoದ ಮಧ್ಯಾಹ್ನ 1.00 ಗಂಟೆಯವರೆಗೆ ಊರಿನ ಪರವೂರಿನ ವಿವಿಧ ಮಕ್ಕಳು,ಮಹಿಳಾ ಹಾಗೂ ಪುರುಷರ ಭಜನಾ ತಂಡಗಳಿoದ ಭಜನಾ ಕಾರ್ಯಕ್ರಮವು ಜರುಗಲಿರುವುದು. ಚಾತುರ್ಮಾಸ್ಯದ ಈ ವಿಶೇಷ ದಿನಗಳಲ್ಲಿ ತಾವುಗಳು ಶ್ರೀ ದೇವರ- ಶ್ರೀಗುರುಗಳ, ಸೇವೆ ಮಾಡಿ, ಶ್ರೀ ದೇವರ ಪ್ರಸಾದ ಮತ್ತು ವ್ಯಾಸಾಕ್ಷತೆಯನ್ನು ಪಡೆಯಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಈ ಸಂದರ್ಭದಲ್ಲಿ ವಿಶೇಷ ಸೇವೆ ಮಾಡಿಸಲು ಅವಕಾಶವಿರುತ್ತದೆ. ಶ್ರೀಮಠದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಜೀರ್ಣೋದ್ಧಾರ ಕಾರ್ಯಕ್ಕೆಕೈ ಜೋಡಿಸಿ ಸಹಕರಿಸಬಹುದು. ತಾವುಗಳು ಅಪೇಕ್ಷೆ ಪಟ್ಟಲ್ಲಿ ತಮಗೆ ಶ್ರೀಮಠಕ್ಕೆ ಬರಲು ಸಮಯಾವಕಾಶ ಆಗದೇ ಇದ್ದಲ್ಲಿ, ತಮ್ಮ ಹೆಸರಿನಲ್ಲಿ ಸಂಕಲ್ಪಿಸಿ, ಸೇವಾ ಪ್ರಸಾದವನ್ನು ಅಂಚೆಯ ಮುಖಾಂತರ ಕಳುಹಿಸಿಕೊಡಲಾಗುವುದು ಹೆಚ್ಚಿನ ವಿವರಗಳಿಗೆ ಶ್ರೀ ಮಠವನ್ನು ಸಂಪರ್ಕಿಸಬಹುದು- ೦೮೨೦-೨೫೮೪೩೭೮, ೮೪೯೫೮೩೯೪೭೪, ೯೧೪೮೫೯೨೧೦೭, ೭೮೯೯೪೭೪೨೯೮.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!