ಉಡುಪಿ ಗಾಂಧಿ ಆಸ್ಪತ್ರೆ 28 ವರ್ಷಕ್ಕೆ ಪಾದಾರ್ಪಣೆ  – ಬೃಹತ್ ರಕ್ತದಾನ ಶಿಬಿರ

ಉಡುಪಿಯ ಹೃದಯ ಭಾಗದಲ್ಲಿರುವ ಶುಶ್ರೂಷೆಗೆ ಹೆಸರು ವಾಸಿಯಾದ ಗಾಂಧಿ ಆಸ್ಪತ್ರೆೆಯು ಯಶಸ್ವಿ 28ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದ್ದು, ಪಂಚಮಿ ಟ್ರಸ್ಟ್, ಪಂಚಲಹರಿ ಫೌಂಡೇಶನ್ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ “ಬೃಹತ್ ರಕ್ತದಾನ ಶಿಬಿರ”ವು ಮೇ 5ರಂದು ಗಾಂಧಿ ಆಸ್ಪತ್ರೆಯಲ್ಲಿ ನಡೆಯಿತು.

ಗಾಂಧಿ ಆಸ್ಪತ್ರೆಯ ಲಹರಿ ಸಭಾಂಗಣದಲ್ಲಿ ನಡೆದ ರಕ್ತದಾನ ಶೀಬಿರವನ್ನು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ನವೀನ್ ಭಟ್ ವೈ. ರವರು ಉದ್ಘಾಟಿಸಿ ಗಾಂಧಿ ಆಸ್ಪತ್ರೆಯು 27 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ, 28 ವರ್ಷಕ್ಕೆ ಪಾದಾರ್ಪಣೆ ಮಾಡುವುದರೊಂದಿಗೆ ಸಮಾಜಮುಖಿಯಾಗಿಯೂ ತೊಡಗಿಸಿಕೊಂಡಿರುವುದು ಅತ್ಯಂತ ಶ್ಲಾಘನೀಯ ಸಾಧನೆ ಎಂದರು.

ಉಡುಪಿ ನಗರಸಭೆಯ ಪೌರಾಯುಕ್ತರಾದ ಡಾ. ಉದಯ ಶೆಟ್ಟಿಯವರು ಮಾತನಾಡಿ ೨೮ನೇ ವರ್ಷ ಎನ್ನುವುದು ಪರಿವರ್ತನೆಯ ಸಮಯ, ಹಾಗೆಯೇ, ಆಸ್ಪತ್ರೆಯು ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜಮುಖಿಯಾಗಿ ಪರಿವರ್ತನೆಯಾಗಲಿ ಎಂದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಪ್ರಾದೇಶಿಕ ಕಛೇರಿ ಮಣಿಪಾಲದ ಪ್ರಾದೇಶಿಕ ಅಧಿಕಾರಿ ಡಾ. ಲಕ್ಷ್ಮೀ ಕಾಂತ್‌ರವರು, ರಕ್ತದಾನಿಗಳಿಗೆ ಶುಭ ಹಾರೈಸುತ್ತಾ ರಕ್ತದೊಂದಿಗೆ ಪರಿಸರದ ಮಣ್ಣು, ನೀರು, ಗಾಳಿಯ ಸಂಬAಧದ ಬಗ್ಗೆ ತಿಳಿಸಿದರು.

ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕು. ಕ ಅಧಿಕಾರಿ ಡಾ. ನಾಗಭೂಷಣ ಉಡುಪ ಹೆಚ್. ಆಸ್ಪತ್ರೆಯ ೨೮ನೇ ವರ್ಷದ ಪಾದಾರ್ಪಣೆಯ ಬಗ್ಗೆ ಶುಭ ಹಾರೈಸಿದರು.

ಐ. ಎಂ. ಎ ಉಡುಪಿ-ಕರಾವಳಿ ಶಾಖೆಯ ಅಧ್ಯಕ್ಷರಾದ ಡಾ. ಕೆ. ವಿನಾಯಕ ಶೆಣೈರವರು ಗಾಂಧಿ ಆಸ್ಪತ್ರೆಯವರು ಪ್ರತಿ ವರ್ಷ ತಮ್ಮ ಸ್ಥಾಪನ ದಿನದಂದು ಮಾಡುವ ರಕ್ತದಾನ ಶಿಬಿರ ಮತ್ತು ಸಾಮಾಜಿಕ ಜವಾಬ್ದಾರಿಯ ಸ್ವಚ್ಛತಾ ಕಾರ್ಯಕ್ರಮ ಎಲ್ಲವೂ ವೈಶಿಷ್ಟ್ಯ  ಪೂರ್ಣವಾಗಿದೆ ಎಂದರು.

ಉಡುಪಿ ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ವೀಣಾ ಕುಮಾರಿಯವರು ರಕ್ತದಾನ ಮಹತ್ವದ ಬಗ್ಗೆ ವಿವರಿಸಿದರು.

ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಎಂ. ಹರಿಶ್ಚಂದ್ರ ಮಾತನಾಡುತ್ತಾ, ಆಸ್ಪತ್ರೆಯೂ ಯಶಸ್ವಿ 27ನೇ ವರ್ಷದ ಸೇವೆಯಲ್ಲಿ ವೈದ್ಯರು ಮತ್ತು ಸಂಸ್ಥೆಯ ಎಲ್ಲಾ ಸ್ತರದ ಸಿಬ್ಬಂದಿಗಳ ಪ್ರೀತಿ ಪೂರ್ವಕ ಸೇವೆಯೇ ರೋಗಿಗಳಿಗೆ ಪ್ರಾಮುಖ್ಯವಾಗಿದ್ದು ಸಂಸ್ಥೆಯ ಹಿಂದಿನ-ಇoದಿನ ಎಲ್ಲಾ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಅಂತೆಯೇ ಆರೋಗ್ಯ ಸೇವೆಯೊಂದಿಗೆ ರಕ್ತದಾನ, ಸ್ವಚ್ಛತಾ ಆಂದೋಲನದAತಹ ಬೃಹತ್ ಸಾಮಾಜಿಕ ಚಟುವಟಿಕೆಗಳು ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರ ಸಹಕಾರದಿಂದ ಮಾಡಲಾಗುತ್ತಿದೆ ಎಂದರು.

ಶಿಬಿರದಲ್ಲಿ ೧೨೧ ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ ಎ. ಪ್ರಸ್ತಾವಿಸಿ ಸ್ವಾಗತಿಸಿದರು. ಡಾ. ವಿದ್ಯಾ ತಂತ್ರಿರವರು ವಂದನಾರ್ಪಣೆಗೈದರು. ಶ್ರೀಮತಿ ಶ್ವೇತಾರವರು ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply