ಪ್ಯಾಕೆಜ್ ಗಿಂತ ಬ್ಯಾಂಕಿನ ಇ ಎಂ.ಐ ಸರ್ಕಾರ ಮನ್ನಾ ಮಾಡಲಿ- ರಾಘವೇಂದ್ರ ಪ್ರಭು,ಕರ್ವಾಲು

ಕರೋನಾ ವಿರುದ್ದ ಹೋರಾಟದಲ್ಲಿ ನಾವೆಲ್ಲರೂ ನಿರತರಾಗಿದ್ದೇವೆ. ಈಗಾಗಲೇ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದೆ. ಎಲ್ಲರೂ ಮನೆಯಲ್ಲಿದ್ದಾರೆ. ಸಣ್ಣ ಸಣ್ಣ ಅಂಗಡಿಗಳನ್ನು ಇಟ್ಟು ವ್ಯಾಪಾರ ಮಾಡಿ ಬದುಕಿನ ಬಂಡಿ ಸಾಗಿಸುವವರಿಗೆ, ಬಡವರಿಗೆ ಅದೇ ರೀತಿ ಮಧ್ಯಮ ವಗ೯ದವರಿಗೆ ಬಹಳಷ್ಟು ತೊಂದರೆಯಾಗಿದೆ.ಇನ್ನೆ ನೋ ಕರೋನಾ ಹಾವಳಿ ಮುಗಿಯಿತು ನಾವೆಲ್ಲರೂ ಮತ್ತೊಮ್ಮೆ ಎದ್ದು ನಿಲ್ಲುತ್ತಿದ್ದೇವೆ ಎಂದೆಣಿಸುತ್ತಿದ್ದವರಿಗೆ ಈ ಕರೋನಾ 2 ನೇ ಅಲೆ ಬರಸಿಡಿಲಿನಂತೆ ಎರಗಿದೆ.

ಸರ್ಕಾರ ಇ.ಎಂ.ಐ ಮನ್ನಾ ಮಾಡಲಿ- ಬ್ಯಾಂಕಿನಿಂದ ಸಾಲ ಪಡೆದು ಉದ್ಯಮ ಮಾಡಿರುವ ಅದೇ ರೀತಿ ಮನೆ ನಿಮಾ೯ಣ ಕೃಷಿ ಮುಂತಾದ ಉದ್ದೇಶಗಳಿಗೆ ಸಾಲ ಪಡೆದಿರುವ ಕೋಟ್ಯಾಂತರ ಬಡ ಮಧ್ಯಮ ವಗ೯ದ ಜನರು ವ್ಯಾಪಾರ , ಸರಿಯಾದ ಉದ್ಯೋಗವಿಲ್ಲದೆ ಬ್ಯಾಂಕಿನ ಸಾಲದ ಕಂತು ಕಟ್ಟಲು ಆಗದ ಪರಿಸ್ಥಿತಿ ನಿಮಾ೯ಣ ವಾಗಿದೆ.ಮನೆ ಖಚ೯ ನ್ನು ಸರಿತೂಗಿಸಲು ಹರಸಾಹಸ ಪಡುವ ಈ ಸಂದರ್ಭ ಬ್ಯಾಂಕಿನ ಸಾಲ ಪೆಡಂಭೂತವಾಗಿ ಪರಿಣಮಿಸಿದೆ.

ಆದರೆ ಬ್ಯಾಂಕಿನವರು ತಮ್ಮ ತಿಂಗಳ ಇ.ಎಂ.ಐ ಬಂದಿಲ್ಲ ಎಂದು ನೋಟಿಸ್ ಕೊಡುತ್ತಿದ್ದಾರೆ.ಇದರಿಂದ ಜನರು ಮಾನಸಿಕ ಒತ್ತಡದಿಂದ ಖಿನ್ನತೆ ಒಳಗಾಗಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಸರ್ಕಾರ ಈ ಪ್ಯಾಕೆಜ್ ಘೋಷಣೆ ಬಿಟ್ಟು ಕನಿಷ್ಟ 3 ತಿಂಗಳ ಇ.ಎಂ.ಐ ಮನ್ನಾ ಮಾಡಲಿ ಕಳೆದ ವಷ೯ ಸಾಲ ಕಟ್ಟುವ ಅವಧಿ ವಿಸ್ತರಣೆ ಮಾತ್ರ ಮಾಡಿದ ಪರಿಣಾಮ ಗ್ರಾಹಕರು ಬಡ್ಡಿ ಜೊತೆಗೆ ಚಕ್ರ ಬಡ್ಡಿ ಸೇರಿ ಕಟ್ಟಿದ್ದಾರೆ.ಈ ವಷ೯ ಸಕಾ೯ರ ಈ 3 ತಿಂಗಳ ಇ.ಎಂ.ಐ ಮನ್ನಾ ಮಾಡುವ ನಿಧಾ೯ರ ತೆಗೆದುಕೊಳ್ಳಲಿ.ಇಲ್ಲವಾದಲ್ಲಿ ಕರೋನಾ ಸಾವಿಗಿಂತ ಸಾಲದ ಕಂತು ಕಟ್ಟಲಾಗದೆ ಆತ್ಮಹತ್ಯೆ ಮಾಡುವವರ ಸಂಖ್ಯೆ ಹೆಚ್ಚಾಗಬಹುದು .
ಲಾಕ್ ಡೌನ್ ಮಾಡುವ ಬದಲು ಆರೋಗ್ಯ ಸೇವೆಗಳ ಬಲವಧ೯ನೆ ಅದೇ ರೀತಿ ಕರೋನಾ ವ್ಯಾಕ್ಸಿನ್ ಎಲ್ಲರಿಗೂ ಸಿಗುವಂತೆ ಮಾಡಲಿ.ಜನರು ಈವರೆಗೆ ಸಕಾ೯ರ ಹೇಳಿದಂತೆ ಕೇಳಿದ್ದಾರೆ.ಈಗ ಜನರ ಕಷ್ಟ ಪರಿಹರಿಸಲು ಸರ್ಕಾರ ಮುಂದಾಗಬೇಕು.

ಜನರು ಕೂಡ ಕರೋನಾ ನಿಯಮಗಳನ್ನು ಸರಿಯಾಗಿ ಪಾಲಿಸಿ ಈ ಸಾಂಕ್ರಾಮಿಕ ದೂರವಾಗಲು ಶ್ರಮಿಸಬೇಕು.ರಾಜಕೀಯದವರು, ಯುವ ಜನಾಂಗ, ಉದ್ಯಮಿಗಳು ಒಂದಾಗಿ ಈ ಯುದ್ಧದಲ್ಲಿ ಹೋರಾಡಬೇಕು.

 

 
 
 
 
 
 
 
 
 
 
 

Leave a Reply