ಅಮ್ಮಾ……~ ಪೂರ್ಣಿಮಾ ಜನಾರ್ದನ್

ಅತ್ಯಗತ್ಯ ಆತ್ಮವಿಶ್ವಾಸವ ನಮ್ಮಲ್ಲಿ ತುಂಬಿ..
ಅಮಿತ ಭಾವಗಳ ಉದ್ದೀಪನಗೊಳಿಸಿ..
ಅಮೂರ್ತ ಭಾವನೆಗಳನ್ನು ಪ್ರೇರೇಪಿಸಿ..
ಅನನ್ಯ ಸುಖ ಸಂತಸ ನೀಡುತ್ತಾ..
ಅಗಣಿತ ಹರುಷದ ಹೊನಲಾಗಿ..
ಅಪರಿಮಿತ ಆನಂದದ‌ ಆಗರವಾಗಿ‌..
ಅಸಾದೃಶ್ಯ ಬಾಂಧವ್ಯದ ಸೆಲೆಯಾಗಿ..
ಅಗಣಿತ ವಾತ್ಸಲ್ಯದ ಮೂರ್ತಿಯಾಗಿ.. 
ಅದ್ವಿತೀಯ ಮಮತೆಯೊಂದಿಗೆ..
ಅನಾದಿ ಕಾಲದಿಂದಲೂ ನಮ್ಮ ಅಮೂಲ್ಯ ಆಸ್ತಿಯೆಂದು ಆದರಿಸುವ ಅಮ್ಮನಿಗೆ ಅಭಿವಾದನೆ…
ಅಮ್ಮಾ ನಿನ್ನ ಪ್ರೀತಿ ವಾತ್ಸಲ್ಯಕ್ಕೆ ಎಣೆ ಇಲ್ಲ..

‘ಅಮ್ಮಾ ‘ ಈ ಪದದ ವ್ಯಾಖ್ಯಾನಕ್ಕೆ ಮಿತಿ‌ ಇಲ್ಲ.

 
 
 
 
 
 
 
 
 
 
 

Leave a Reply