ಆಲ್ ಇಂಡಿಯಾ ಮೊಬೈಲ್ ರೆಟೈಲರ್ಸ್ ಅಸೋಸಿಯೇಷನ್ ಸಪ್ತಮ ವರ್ಷಾಚರಣೆ

ಆಲ್ ಇಂಡಿಯಾ ಮೊಬೈಲ್ ರೆಟೈಲರ್ಸ್ ಅಸೋಸಿಯೇಷನ್ ಇದರ 7ನೇ ವರ್ಷದ ವಾರ್ಷಿ ಕೋತ್ಸವದ ಆಚರಣೆ ಪ್ರಯುಕ್ತ ವನಮಹೋತ್ಸವ, ರಕ್ತದಾನ ಶಿಬಿರ, ಬಡವರಿಗೆ ಸಹಾಯ ಮಾಡುವ ಸಮಾಜಿಕ ಕಾರ್ಯಕ್ರಮಗಳನ್ನು ದೇಶದಾದ್ಯಂತ ಆಯೋಜಿಸಿದೆ. 
ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಲಯನ್ಸ್ ಸೇವಾಶ್ರಮದಲ್ಲಿ ಲಯನ್ಸ್ ಕ್ಲಬ್ ಮತ್ತು ಐಂರ ಜಂಟಿಯಾಗಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ರಕ್ತದಾನ ಶಿಬಿರವನ್ನು ಲಯನ್ ವಸಂತಿ ಕುಮಾರ್ ಶೆಟ್ಟಿ ಡಿಸ್ಟ್ರಿಕ್ಟ್ ಗವರ್ನರ್ 317 Dಉದ್ಘಾಟಿಸಿದರು. 
ಮುಖ್ಯ ಅತಿಥಿಯಾಗಿ ಐಂರದಿಂದ ಸುಹಾಸ್ ಕಿಣಿ ಐಂರ ಕರ್ನಾಟಕ ಮುಖ್ಯ ಕಾಯದರ್ಶಿ, ವಿಶೇಷ ಅತಿಥಿಗಳಾಗಿ ಲಯನ್ ವಿಜಯ ವಿಷ್ಣು ಮಯ್ಯ ರೀಜನ ಚೇರ್ ಪರ್ಸನ್ ಲಯನ್ ಡಿಸ್ಟ್ರಿಕ್ಟ್ , ಡಾ ದೀಪಾ ಅಡಿಗ ಯಸ್ಎ  ಎಂ ಡಿ  ಪ್ಯಾಥೊಲೋಜಿ ನಿರ್ದೇಶಕರು ಬ್ಲಡ್ ಬ್ಯಾಂಕ್ ಕೆಎಂಸಿ ಆಸ್ಪತ್ರೆ ಮಂಗಳೂರು, ಶೇಖರ್ ಪೂಜಾರಿ ಝೋನ್ ಚೇರ್ ಪರ್ಸನ್, ರಕ್ತದಾನ ಶಿಬಿರ ಆಯೋಜನೆಗೆ ಹೆಚ್ಚಿನ ಮುತುವರ್ಜಿ ವಹಿಸಿದ ಐಂರಾದ ವಿಶೇಷ ಪ್ರತಿನಿಧಿಗಳಾಗಿ ಗುರುದತ್ ಕಾಮತ್ ಅಧ್ಯಕ್ಷರು ಐಂರ ದಕ್ಷಿಣಕನ್ನಡ ಉಡುಪಿ, ಮೊಹಮ್ಮದ್ ಅಝರುದ್ದೀನ ಐಂರ ವಲಯ ಉಪಾಧ್ಯಕ್ಷರು ಅಬ್ದುಲ್ ಸಲೀಂ ಅಧ್ಯಕ್ಷರು DKUMRA ಮೊಹಮ್ಮದ್ ಮುನೀರ್ ಮುಖ್ಯ ಕಾರ್ಯದರ್ಶಿ DKUMRA ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುಮಾರು ನೂರಕ್ಕಿಂತಲೂ ಹೆಚ್ಚು ರಕ್ತದಾನಿಗಳು ಭಾಗವಹಿಸಿದ್ದರು ಅದೇ ದಿನ ಬೆಳ್ತಂಗಡಿ ತಾಲೂಕು ಅಸೋಸಿಯೇಷನ್ ವತಿಯಿಂದ ಆನುಗ್ರಹ ಚಾರಿಟೇಬಲ್ ವೃದ್ದಾಶ್ರಮಕ್ಕೆ ದಿನ ಬಳಕೆಯ ಕಿಟ್ ಕೊಡುವ ಕಾರ್ಯಕ್ರಮವನ್ನು ಬಹಳ ಅರ್ಥ ಪೂರ್ಣ ರೀತಿಯಲ್ಲಿ ಆಚರಣೆ ಮಾಡಿತು. 
ತಮ್ಮ ಸುಂದರ ಬದುಕಿನ ಕಡೆಯ ದಿನಗಳನ್ನು ತಮ್ಮ ಮಕ್ಕಳ ಒಳ್ಳೆಯ ಜೀವನ ಕ್ಕೆ ಹಾರೈಸುತ್ತ ಯಾರೋ ನಡೆಸುತ್ತಿರುವ ವೃದ್ದಾಶ್ರಮ ದಲ್ಲಿ ನೋವನ್ನು ನುಂಗಿಕೊಂಡು ಬದುಕುವ ಆ ಹಿರಿಯ ಜೀವಿ ಗಳೊಂದಿಗೆ ನಮ್ಮ AIMRA ದ  ವಾರ್ಷಿಕೋತ್ಸವನ್ನು ಆಚರಿಸಿ ಅವರಿಗೆ ಸ್ವಲ್ಪ ಮಟ್ಟಿನ ದಿನ ಬಳಕೆಯ ವಸ್ತು ಗಳನ್ನು ಕೊಟ್ಟು ಅವರೊಂದಿಗೆ ಸ್ವಲ್ಪ ಹೊತ್ತು ಇದ್ದದ್ದು ನಮ್ಮ ಸಂಘದ ಎಲ್ಲಾ ಸದಸ್ಯರಿಗೆ ತುಂಬಾ ಖುಷಿ ಕೊಟ್ಟ ವಿಚಾರವಾಗಿತ್ತು.
AIMRA ದ. ಕ ಜಿಲ್ಲಾ ಉಪಾಧ್ಯಕ್ಷ ಶ್ರೀ ಉಮೇಶ್ ಸ್ವಾಗತಿಸಿ ಬೆಳ್ತಂಗಡಿ ಮೊಬೈಲ್ ಅಸೋಸಿಯೇಷನ್ ಕಾರ್ಯದರ್ಶಿ ಶ್ರೀ ಚಿದಾನಂದ ಶೆಟ್ಟಿ ಪ್ರಸ್ತಾಪ ದೊಂದಿಗೆ ಕಾರ್ಯಕ್ರಮ ಅಚ್ಚು ಕಟ್ಟಾಗಿ ನಡೆಯಿತು. ಅನುಗ್ರಹ ಚಾರಿಟೇಬಲ್ ಟ್ರಸ್ಟ್ ನ ಸಿಸ್ಟೆರ್ ಅಲ್ಪೊನ್ಸ  ಆಶ್ರಮದ ವ್ಯವಸ್ಥೆಯ ಬಗ್ಗೆ ವಿವರ ನೀಡಿದರು.
ಜೊತೆ ಕಾರ್ಯದರ್ಶಿ ಶ್ರೀ ಹರೀಶ್, ನಿರ್ದೇಶಕರಾದ ಹರ್ಷದ್, ಅಬೂಸಾಲಿ ಬೆಳ್ತಂಗಡಿ, ರಾಜೇಶ್ ಮಡಂತ್ಯಾರು ಶ್ರೀ ವಿಶ್ವನಾಥ ಉಜಿರೆ, ಶ್ರೀ ಹರಿಯಂತ್ ಬೆಳ್ತಂಗಡಿ ಶ್ರೀ ಗೋಪಾಲಕೃಷ್ಣ ಬೆಳ್ತಂಗಡಿ, ಸಚಿನ್ ಧರ್ಮಸ್ಥಳ, ಅರವಿಂದ ಮಡಂತ್ಯಾರು  ಸಹಕರಿಸಿದರು. 
ಕೊನೆಗೆ AIMRA ಕೋರ್ ಮೆಂಬರ್ ಶ್ರೀ ಅಶೋಕ್ ಶೆಟ್ಟಿ ಉಜಿರೆ ವಂದಿಸಿದರು. ಕಾರ್ಕಳ ವತಿಯಿಂದ ಸುರಕ್ಷಾ ಸೇವಾಶ್ರಮ ಜರಿಗುಡ್ಡೆಯಲ್ಲಿ ಪ್ರಶಾಂತ್ ಬಾಲಾಜಿ ಮೊಬೈಲ್ ಇವರು ಕುಟುಂಬ ಸದಸ್ಯರೊಂದಿಗೆ ಆಶ್ರಮಕ್ಕೆ ಭೇಟಿ ನೀಡಿ ದಿನ ಬಳಕೆಯ ವಸ್ತುಗಳನ್ನು ಕೊಟ್ಟು ಅವರೊಂದಿಗೆ ಐಂರಾದ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿದರು.    
ಸುಳ್ಯ ಮೊಬೈಲ್ ರೀಟೇಲರ್ ಅಸೋಸಿಯೇಷನ್ ಜಂಟಿಯಾಗಿ ಸುಳ್ಯದ ಹೋಟೆಲ್ ದ್ವಾರಕಾ ಸಭಾಭವನದಲ್ಲಿ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಸುಮಾರು 25 ಮೋಬೈಲ್ ರೀಟೇಲರ್  ಹಾಜರಿದ್ದರು. ವಿಶೇಷವಾಗಿ ಈ ಸಭೆಯಲ್ಲಿ AIMRA ಅಸೋಸಿಯೇಷನ್ ಇದರ ಉದ್ದೇಶದಂತೆ  ಕಳೆದ ವಾರ ಸುಳ್ಯದಲ್ಲಿ ಬೆಂಕಿ ಹೊತ್ತಿ ಸಂಪೂರ್ಣ ನಾಶಗೊಂಡ ಮೋಬೈಲ್ ಸಂಸ್ಥೆಯನ್ನು ಪುನರ್ ನಿರ್ಮಿಸುವರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಂಟಿ ಜಿಲ್ಲೆಯ AIMRA ಪದಾಧಿಕಾರಿಗಳ ಸಹಕಾರದೊಂದಿಗೆ ಸಂಗ್ರಹವಾದ ಸುಮಾರು ರೂ.22000/- ಕ್ಕೂ ಮಿಕ್ಕಿ, ಸುಳ್ಯ ಮೊಬೈಲ್ ರೀಟೇಲರ್ ಅಸೋಸಿಯೇಷನ್ ರೂ. 87000/- ರೂಪಾಯಿಯನ್ನು ಸಭೆಯಲ್ಲಿದ್ದ ಸದಸ್ಯರ ಸಮ್ಮುಖದಲ್ಲಿ  ನಾಶಗೊಂಡ ಸಂಸ್ಥೆಯ ಮಾಲಕರಾದ ಸಂಶುದ್ದೀನ್ ಇವರಿಗೆ ಸಹಾಯ ನಿಧಿಯನ್ನು ಹಂಸ್ಥಾಂತರಿಸಲಾಯಿತು. 
ಈ ಸಂದರ್ಭದಲ್ಲಿ AIMRA ಉಭಯ ಜಿಲ್ಲೆಗಳ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಸುಳ್ಯ ಮೊಬೈಲ್ ರೀಟೇಲರ್ ಅಸೋಸಿಯೇಷನ್ ಸಮಿತಿಯ ಅದ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply