Janardhan Kodavoor/ Team KaravaliXpress
25.6 C
Udupi
Wednesday, August 17, 2022
Sathyanatha Stores Brahmavara

ಅಲೆವೂರು: ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ

ಉಡುಪಿ ಎ.4: ಅಲೆವೂರಿನ ಶುಭೋದಿನೀ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನಿನ್ನೆ ಅಲೆವೂರಿನ ದಿ. ಅಚ್ಚಣ ಶೆಟ್ಟಿ ಸ್ಮಾರಕ ರಂಗಮಂಟಪದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ರಾಘವ ನಾಯ್ಕ, ಸಾಂಬ್ರಾಯ ಆಚಾರಿ ಕೆ. ಅವರನ್ನು ಸನ್ಮಾನಿಸಲಾಯಿತು. ಹಾಗೂ

ಸಿಎ ಪರೀಕ್ಷೆಯಲ್ಲಿ ಪ್ರಥಮ ಬಾರಿಗೆ ತೇರ್ಗಡೆಗೊಂಡ ಶಾಲೆಯ ಹಳೆ ವಿದ್ಯಾರ್ಥಿ ದಿನೇಶ ಪ್ರಭು ಅವರನ್ನು ಅಭಿನಂದಿಸಲಾಯಿತು. 

ಈ ವೇಳೆ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಾಲಾ ಸಂಚಾಲಕ ಡಾ. ಯುಂ ರವಿರಾಜ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ಸಂದರ್ಭ ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಕುದಿ ವಸಂತ ಶೆಟ್ಟಿ, ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪ ಅಂಚನ್, ಉಡುಪಿ ವಕೀಲ ಅಲೆವೂರು ಮಾಧವ ಆಚಾರ್ಯ, ಉಡುಪಿ ಉದ್ಯಮಿ ಗಣಪತಿ ನಾಯಕ್ ಗರ್ನೆಬೆಟ್ಟು, ಅಲೆವೂರು ಉದ್ಯಮಿ ಕಾರ್ತಿಕ್ ಶೆಟ್ಟಿ, ಕಿರಣ್ ಕುಮಾರ್ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!