ಅಜ್ಜರಕಾಡು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು: ಎರಡು ದಿನದ ಕೌಶಲಾಭಿವೃದ್ಧಿ ಕಾರ್ಯಾಗಾರ ಉಡುಪಿ

ಅಜ್ಜರಕಾಡು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿ.ಕಾಂ ಮತ್ತು ಬಿಬಿಎ ವಿದ್ಯಾರ್ಥಿನಿಯರಿಗೆ ರಾಮಕೃಷ್ಣ ಹೆಗ್ಡೆ, ಕೌಶಲ್ಯ ಕೇಂದ್ರ, ಉಡುಪಿ ಪ್ರಾಯೋಜಿತ ಉದ್ಯೋಗಾಧಾರಿತ ತರಬೇತಿ ಜರುಗಿತು. ತರಬೇತುದಾರರ ಶ್ರೀ ಚಂದನ್‌ ರಾವ್‌ ಉದ್ಘಾಟಿಸಿ, ಸಂರ‍್ಶನವನ್ನು ಎದುರಿಸುವ ಮತ್ತು ಬಯೋಡೆಟಾ ಬರೆಯುವ ಬಗ್ಗೆ ತರಬೇತಿ ನಡೆಸಿಕೊಟ್ಟರು. ಪ್ರಾಂಶುಪಾಲ ಡಾ. ಭಾಸ್ಕರ ಶೆಟ್ಟಿ ಎಸ್. ಅಧ್ಯಕ್ಷತೆ ವಹಿಸಿದ್ದರು. ಕೊಂಕಣ ರೈಲ್ವೆ ವಿಭಾಗದ ಅಧಿಕಾರಿ ಶ್ರೀ ಪ್ರಶಾಂತ್ ಶೆಟ್ಟಿ ವಾಣಿಜ್ಯಶಾಸ್ತç ವಿಭಾಗದ ಮುಖ್ಯಸ್ಥೆ ಶ್ರೀಮತಿ ಗೌರಿ ಎಸ್. ಭಟ್, ಐಕ್ಯೂಎಸಿ ಸಂಚಾಲಕ ಶ್ರೀ ಸೋಜನ್ ಕೆ.ಜಿ ಉಪಸ್ಥಿತರಿದ್ದು, ಕಾರ್ಯಕ್ರಮದ ಸಂಯೋಜಕರಾದ ಡಾ ಉಮೇಶ ಮಯ್ಯ ಪ್ರಾಸ್ತಾವಿಕ ನುಡಿದು ವಿದ್ಯರ‍್ಥಿನಿಯರಾದ ಕು.ಪ್ರತಿಮಾ ಪರ‍್ಥನೆಗೈದು, ಕು. ಸುಮನಾ ಸ್ವಾಗತಿಸಿ. ಕು. ಫರೀನ್‌ ಕಾರ್ಯಕ್ರಮ ನಿರ್ವಹಿಸಿ, ಕು. ಗೌರಿ ಧನ್ಯವಾದ ನೀಡಿದರು. ಒಟ್ಟು 137 ವಿದ್ಯಾರ್ಥಿನಿಯರು ಈ ತರಬೇತಿಯ ಪ್ರಯೋಜನ ಪಡೆದರು.

 
 
 
 
 
 
 
 
 
 
 

Leave a Reply