ಉದ್ಯಮ ಶೀಲತಾ ಪ್ರೇರಣಾ ಕಾರ್ಯಕ್ರಮ

ಉಡುಪಿ ಜು.9 : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕರ್ನಾಟಕ ಸರಕಾರ ಬೆಂಗಳೂರು , ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ಉಡುಪಿ ಹಾಗೂ ಶ್ರೀ ಮಾಲ್ತಿದೇವಿ ಪರಿಶಿಷ್ಟ ಜಾತಿ ಮೀನುಗಾರರ ಸಹಕಾರ ಸಂಘ ತೊಟ್ಟಂ ಮಲ್ಪೆ ಇವರ ಸಂಯುಕ್ತ ಆಶ್ರಯದಲ್ಲಿ ಸ್ವ ಉದ್ಯೋಗವನ್ನು ಸ್ಥಾಪಿಸಲು ಇಚ್ಚಿಸುವ ಪುರುಷರು ಹಾಗೂ ಮಹಿಳೆಯರಿಗೆ ಒಂದು ದಿನದ ಉದ್ಯಮ ಶೀಲತಾ ಪ್ರೇರಣಾ ಕಾರ್ಯಕ್ರಮವು ಇಂದು ಆದಿ ಉಡುಪಿಯ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಇಂದು ನಡೆಯಿತು.ಕಾರ್ಯಕ್ರಮವನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಜಂಟಿ ನಿರ್ದೇಶಕ ಅರವಿಂದ ಡಿ. ಬಾಳೇರಿ ಅವರು ಉದ್ಘಾಟಿಸಿದರು. ಶ್ರೀ ಮಾಲ್ತಿದೇವಿ ಪರಿಶಿಷ್ಟ ಜಾತಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ದಿನಕ ಬಾಬು ಅವರು ವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈ ಸಮಾರಂಭದಲ್ಲಿ ಎಸ್ ಸಿ/ಎಸ್ ಟಿ ಸೇವಾ ಅಧ್ಯಯನ ಕೇಂದ್ರದ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ, ಸಹಕಾರ ಸಂಘದ ಮುಖ್ಯ ಸಲಹೆಗಾರ ಚಂದ್ರ ಟಿ. ಸುವರ್ಣ, ಪೂರ್ಣ ಪ್ರಜ್ಞ ಕಾಲೇಜಿನ ವಿಭಾಗ ಮುಖ್ಯಸ್ಥ ಜೈ ಕಿಶನ್ ಭಟ್, ಸಿಡಾಕ್ ಮಂಗಳೂರು ಸಂಸ್ಥೆಯ ತರಬೇತಿದಾರರಾದ ಪ್ರವೀಶ್ಯಾ, ಸಿಡಾಕ್ ಉಡುಪಿ ಕೇಂದ್ರ ವ್ಯವಸ್ಥಾಪಕ ಪ್ರಥ್ವೀರಾಜ್ ಇವರು ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply