ಕಾರು ಮತ್ತು ಬೈಕ್ ಮೇಲೆ ಬಿದ್ದ ಭಾರೀ ಗಾತ್ರದ ಮರ

ಉಡುಪಿ: ನಗರದ ಬ್ರಹ್ಮಗಿರಿಯಲ್ಲಿ ಕಾರು ಮತ್ತು ಬೈಕ್ ಮೇಲೆ ಭಾರೀ ಗಾತ್ರದ ಮರ ಉರಳಿ ಬಿದ್ದಿದ್ದು ಕೂದಲೆಳೆಯಲ್ಲಿ ಕಾರು ಮತ್ತು ಬೈಕ್ ಸವಾರರು ಪ್ರಾಣಾಪಾಯದಿಂದ ಪಾರಾದ ಘಟನೆ ಸಂಭವಿಸಿದೆ.

ಬ್ರಹ್ಮಗಿರಿ ಅಂಬಲಪಾಡಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಘಟನೆಯಿಂದ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಆಗಮಿಸಿರುವ ಟ್ರಾಫಿಕ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

 
 
 
 
 
 
 
 
 
 
 

Leave a Reply