ವಚನಕಾರರಿಂದ ಸಮಾಜ ತಿದ್ದುವ ಕೆಲಸ: ಎಡಿಸಿ ವೀಣಾ ಬಿ.ಎನ್

ಉಡುಪಿ: ಹನ್ನೆರಡನೇ ಶತಮಾನದ ವಚನಕಾರರು ತಮ್ಮ ವಚನಗಳ ಮೂಲಕ ಸಮಾಜದ ಓರೆ ಕೋರೆ ತಿದ್ದುವ ಕೆಲಸ ಮಾಡಿದ್ದು, ವಚನಕಾರರು ಸಮಾಜದಲ್ಲಿನ ಅವಮಾನಗಳನ್ನು ಸಹಿಸಿ ತಮ್ಮ ಆತ್ಮಸ್ಥೈರ್ಯದ ವೃದ್ದಿಯಿಂದ ಸಾಧನೆ ಮಾಡಿ ಶ್ರೇಷ್ಠತೆ ಹೊಂದಿದ್ದರು ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ ಎನ್ ಹೇಳಿದರು.
ಅವರು ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಶರಣರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ತಮ್ಮ ವೃತ್ತಿಯನ್ನು ನಿಷ್ಠೆಯಿಂದ ಕಾಯಕವೇ ಕೈಲಾಸ ಎಂಬ0ತೆ ಮಾಡಿ, ತಮ್ಮಂತೆ ಶೋಷಣೆಗೊಳಗಾದವರ ಬಗ್ಗೆ ಚಿಂತಿಸಿ ಸಮಾಜ ತಿದ್ದುವ ಕೆಲಸವನ್ನು ವಚನ ಕಾರರು ಮಾಡಿದ್ದಾರೆ ಎಂದರು.
ಕೆ.ಡಿ.ಪಿ ನಾಮನಿರ್ದೇಶಿತ ಸದಸ್ಯ ವಾಸು ಬನ್ನಂಜೆ, ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ವಂದಿಸಿದರು.
 
 
 
 
 
 
 
 
 
 
 

Leave a Reply