ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಕವಿಗೋಷ್ಠಿ – ಕಾವ್ಯೋತ್ಸವ ಉದ್ಘಾಟನೆ.

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಶೈಕ್ಷಣಿಕ ಸಂಯೋಜಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿ ಗಳಿಗಾಗಿ ಆಯೋಜಿಸಿದ ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾವ್ಯೋತ್ಸವದ ಉದ್ಘಾಟನೆ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ಕಂಬದಕೋಣೆಯಲ್ಲಿ ನಡೆದಿದೆ. ಸಂಸ್ಥೆಯ ಮುಖ್ಯೋಪಾಧ್ಯಾಯರು ಶ್ರೀ ವಿಶ್ವೇಶ್ವರ ಅಡಿಗ ಕಾವ್ಯೋತ್ಸವ ವನ್ನು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶ್ರೀ ಪಾಂಡುರಂಗ ಪೈ ಸಿದ್ಧಾಪುರ ಅಧ್ಯಕ್ಷರು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಮಾತನಾಡಿ ಶಿಕ್ಷಕ ಕವಿಗಳು ಮತ್ತು ವಿದ್ಯಾರ್ಥಿ ಕವಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿರುವುದು ಸಂತೋಷ ತಂದಿದೆ.
ವಿದ್ಯಾಭಾರತಿ ಕರ್ನಾಟಕ ಹಲವಾರು ಶೈಕ್ಷಣಿಕ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ.ಶಿಕ್ಷಕರ ವ್ಯಕ್ತಿತ್ವದ ಬೆಳವಣಿಗೆಗೆ ಕಾರಣವಾಗುವ ಕಾರ್ಯಾಗಾರ ವನ್ನು ಮುಂದಿನ ದಿನಗಳಲ್ಲಿ ಯೋಜಿಸಲಿದ್ದೇವೆ ಎಂದರು.

ಕವಿಗೋಷ್ಠಿಯ ಉದ್ಘಾಟನೆ ಮಾಡಿ ಮಾತನಾಡಿದ ಶ್ರೀ ವಿಶ್ವೇಶ್ವರ ಅಡಿಗ ಮುಖ್ಯೋಪಾಧ್ಯಾಯರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ಕಂಬದಕೋಣೆ ಸಾಹಿತ್ಯ ಅನುಬಂಧವಿಲ್ಲದ ಮನುಷ್ಯನ ಜೀವನ ವ್ಯರ್ಥ, ಸಾಹಿತ್ಯ ಬರೆಹವು ನಮಗೆ ಸಂತೋಷವನ್ನು ತಂದುಕೊಡುತ್ತದೆ ಎಂದರು.

ಸಂಸ್ಕೃತಿ ಜ್ಞಾನ ಪರಿಚಯ ಯೋಜನೆ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಪ್ರಮುಖ್ ಶ್ರೀ ನಾಗೇಂದ್ರ ದೊಡ್ಡಮನಿ ಧಾರವಾಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಮ್ಮ ಸ್ವರಚಿತ ಕವನವನ್ನು ವಾಚಿಸಿ ಯುವ ಕವಿಗಳಿಗೆ ಶುಭ ಹಾರೈಸಿದರು.

ಭಾಗವಹಿಸಿದ ವಿದ್ಯಾರ್ಥಿ ಕವಿಗಳು: ಸಾನ್ವಿ , ಕಾವ್ಯ , ಅನನ್ಯ ಸಿ ಕೆ ಅಮೃತ ಭಾರತಿ ವಿದ್ಯಾಲಯ ಹೆಬ್ರಿ,
ಪ್ರಾಕ್ಷಿ ಸರಸ್ವತಿ ವಿದ್ಯಾಲಯ ಸಿದ್ಧಾಪುರ , ಶ್ರಾವ್ಯ , ಸಂಕಲ್ಪ , ಭಾರ್ಗವಿ ಸೇವಾಸಂಗಮ ವಿದ್ಯಾಕೇಂದ್ರ ತೆಕ್ಕಟ್ಟೆ , ಪ್ರಮಥ್.ಅನನ್ಯ , ಶ್ರೇಯಾ ಅರ್ ನಾಯ್ಕ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ಕಂಬದಕೋಣೆ , ಶರಣ್ ಗೌಡ , ರಾಗಿಣಿ ಹೆಬ್ಬಾರ್ ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆ ಅರೆಶಿರೂರು .

ಭಾಗವಹಿಸಿದ ಶಿಕ್ಷಕ ಕವಿಗಳು : ಶ್ರೀಮತಿ ಸಂಧ್ಯಾ ಭಟ್ ಮತ್ತು ಶ್ರೀಮತಿ ಸಿಂಧೂ ಐತಾಳ್ ಸೇವಾಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆ , ಶ್ರೀ ಮಹೇಶ್ ಹೈಕಾಡಿ , ಶ್ರೀಮತಿ ವಿಮಲ , ಶ್ರೀಮತಿ ಹೇಮ ಅಮೃತ ಭಾರತಿ ವಿದ್ಯಾಲಯ ಹೆಬ್ರಿ. ಶ್ರೀ ಶಿವರಾಜ ಕುಮಾರ್ ಸರಸ್ವತಿ ವಿದ್ಯಾಲಯ ಸಿದ್ಧಾಪುರ , ಕುಮಾರಿ ರಶ್ಮಿ ,ಶ್ರೀ ರಾಮ , ಶ್ರೀ ನಾಗೇಶ್ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ಕಂಬದಕೋಣೆ. ಶ್ರೀಮತಿ ಆಶಾಲತಾ ಶೆಟ್ಟಿ ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ ಅಂಪಾರು. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಶೈಕ್ಷಣಿಕ ಸಂಯೋಜಿತ ಸಂಸ್ಥೆಯ 14 ವಿದ್ಯಾರ್ಥಿ ಕವಿಗಳು , 10ಶಿಕ್ಷಕ ಕವಿಗಳು ಭಾಗವಹಿಸಿದ್ದರು.

ಕವಿಗೋಷ್ಠಿಯ ಸಮನ್ವಯಕಾರರು ಶ್ರೀ ಮಂಜುನಾಥ ಕೆ ಶಿವಪುರ ಹಕ್ಕಿ ಮತ್ತು ವೇದಾಂತ ಕವನಸಂಕಲನ ದ ಕವಿ ಇವರು ಕವಿಗಳ ಕವನ ವಾಚನವನ್ನು ಆಲಿಸಿ , ಕವನ ಭಾವನೆಗಳ ಅಕ್ಷರ ರೂಪ, ನಿರಂತರ ಪುಸ್ತಕದ ಓದು ಸಾಹಿತ್ಯ ಬರೆಹಕ್ಕೆ ಶಕ್ತಿಯನ್ನು ಒದಗಿಸುತ್ತದೆ ಎಂದರು.ವಿದ್ಯಾರ್ಥಿ ಕವಿ ಮತ್ತು ಶಿಕ್ಷಕ ಕವಿಗಳ ಕವನವನ್ನು ವಿಮರ್ಶಿಸಿ ಯುವ ಕವಿಗಳ ಸಾಹಿತ್ಯದ ಬೆಳವಣಿಗೆಗೆ ಬೇಕಾಗುವ ಮಾಹಿತಿಯನ್ನು ನೀಡಿದರು.

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಕಾರ್ಯದರ್ಶಿ ಶ್ರೀ ಮಹೇಶ್ ಹೈಕಾಡಿ ಪ್ರಾಸ್ತಾವಿಕ ಮಾತನಾಡಿದರು, ಶ್ರೀಮತಿ ಪೃಥ್ವಿ ನಿರೂಪಿಸಿದರು ಶ್ರೀಮತಿ ಸಂಧ್ಯಾ ಭಟ್ , ಮಾತಾಜಿ ಸೇವಾಸಂಗಮ ವಿದ್ಯಾಕೇಂದ್ರ ತೆಕ್ಕಟ್ಟೆ ಸ್ವಾಗತಿಸಿ, ಶ್ರೀಮತಿ ಸಿಂಧೂ ಐತಾಳ್ , ಮಾತಾಜಿ ಸೇವಾಸಂಗಮ ವಿದ್ಯಾಕೇಂದ್ರ ತೆಕ್ಕಟ್ಟೆ ವಂದಿಸಿದರು.ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

 
 
 
 
 
 
 
 
 
 
 

Leave a Reply