ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರ ಕಾರು ಅಪಘಾತ!

ಕುಂದಾಪುರ ಜಾಲಾಡಿ ಸಮೀಪದ ರಾ.ಹೆದ್ದಾರಿ 66 ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರ ಕಾರು ಅಪಘಾತಕ್ಕೀಡಾಗಿದೆ.

ಸೋಮವಾರ ಬೆಳಿಗ್ಗೆ ಪತ್ನಿಯೊಂದಿಗೆ ಕೋಟೇಶ್ವರ ದೇವಸ್ಥಾನಕ್ಕೆ ತೆರಳಿ ಮನೆಗೆ ವಾಪಾಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಜಾಲಾಡಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಿರುದ್ದ ಧಿಕ್ಕಿನಿಂದ ಏಕಾಏಕಿ ಅಡ್ಡಲಾಗಿ ಬಂದ ಬೈಕ್ ಕಾರಿಗೆ ಢಿಕ್ಕಿ ಹೊಡೆದಿದೆ. ಕಾರು ಚಾಲಕನ‌ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾದ ದುರಂತ ಸ್ವಲ್ಪದರಲ್ಲೇ ತಪ್ಪಿ ಹೋಗಿದೆ‌.

ಘಟನೆಗೆ ಬೈಕ್ ಸವಾರನ ನಿರ್ಲಕ್ಷದ ಚಾಲನೆಯೇ ಕಾರಣ ಎಂದು ತಿಳಿದುಬಂದಿದೆ. ಬೈಕ್ ಸವಾರನ ಮುಖಭಾಗಕ್ಕೆ ಗಾಯಗಳಾಗಿದ್ದು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ. ಉಳಿದಂತೆ ಕಾರಿನ ಚಾಲಕ, ಕಾರಿನಲ್ಲಿದ್ದ ಕೃಷ್ಣಮೂರ್ತಿ ಮಂಜ ಮತ್ತವರ ಪತ್ನಿ ಅಪಾಯದಿಂದ ಪಾರಾಗಿದ್ದಾರೆ.

ಅಪಘಾತದ ತೀವ್ರತೆಗೆ ಕಾರಿನ ಮುಂಬದಿಯ ಎರಡೂ ಏರ್ ಬಲೂನ್ಸ್ ಹೊರಗಡೆ ಬಂದಿದ್ದು, ಬೈಕ್ ರಸ್ತೆ ವಿಭಾಜಕವೇರಿದೆ‌.

ಸ್ಥಳದಲ್ಲಿದ್ದ ಹೈವೇ ಪ್ಯಾಟ್ರೋಲ್ ನ ಎಎಸ್ಐ ಹರೀಶ್ ಹಾಗೂ ಸಿಬ್ಬಂದಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.

 
 
 
 
 
 
 

Leave a Reply