ರಣಭೀಕರ ಮಳೆಗೆ ಉಡುಪಿ ಜಿಲ್ಲೆ ತತ್ತರ

ಉಡುಪಿ: ಉಡುಪಿಯಲ್ಲಿ ನಿನ್ನೆ ಮಧ್ಯಾಹ್ನ ದಿಂದ ನಿರಂತರವಾಗಿ ಸುರಿಯುತ್ತಿರುವ  ಮಳೆಗೆ ಭಾಗಶ: ಉಡುಪಿ ಜಲಾವೃತ ಗೊಂಡಿದೆ.

ನಗರ ಪ್ರದೇಶ ಸೇರಿದಂತೆ ಇನ್ನೂ ಹಲವು ಕಡೆ ರಸ್ತೆ ಮನೆಗಳು ಜಲಾವೃತಗೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಉಡುಪಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದ ಕಾರಣ ಘೋಷಿಸಲಾಗಿತ್ತು. ಅಂತೆಯೇ ನೆನ್ನೆ ಮಧ್ಯಾಹ್ನದಿಂದ ಎಡಬಿಡದೆ ಸುರಿಯುತ್ತಿದ್ದು,ರಾತ್ರಿ ಸುರಿದ ಭಾರಿ ಮಳೆಗೆ ನಗರದ ನಡುವಿನಲ್ಲಿ ಇಂದ್ರಾಣಿ ನದಿಯು ತುಂಬಿ ಹರಿಯುತ್ತಿದೆ.

ಹೊಳೆ, ನದಿಗಳ ಬಳಿ ಇರುವಂತಹ ಮನೆ ಗಳಿಗೆ ನೀರು ನುಗ್ಗಿದೆ. ಬನ್ನಂಜೆ, ಬೈಲಕೆರೆ, ಮಠದ ಬೆಟ್ಟು, ಕಲ್ಸಂಕ, ಬಡಗುಪೇಟೆ ನಿಟ್ಟೂರು,ಸೇರಿದಂತೆ ಹಲವಾರು ಪ್ರದೇಶದ ಮನೆಗಳಿಗೆ ನೀರು ಪ್ರವೇಶಿಸಿದೆ. ಸದ್ಯ ಉಡುಪಿಯಿಂದ ಮಣಿಪಾಲಕ್ಕೆ ಸಂಚರಿಸುವ ದಾರಿ ಸ್ಥಗಿತಗೊಂಡಿದೆ.

ಇನ್ನು ನಗರದ ಹೊರವಲಯದಲ್ಲಿ ಅಲೆವೂರು ಕೆಮ್ತೂರು ಉದ್ಯಾವರ ಬೋಳ್ಜೆ ಕಲ್ಮಾಡಿ ಯಲ್ಲಿಯೂ ನೂರಾರು ಮನೆಗಳು ಭಾಗಶಃ ಜಲಾವೃತಗೊಂಡಿದೆ.

ಇನ್ನು ನಗರದ ಹೊರವಲಯದಲ್ಲಿ ಅಲೆ ವೂರು ಕೆಮ್ತೂರು ಉದ್ಯಾವರ ಬೋಳ್ಜೆ ಕಲ್ಮಾಡಿ ಯಲ್ಲಿಯೂ ನೂರಾರು ಮನೆಗಳು ಭಾಗಶಃ ಜಲಾವೃತಗೊಂಡಿದೆ.

ಉಡುಪಿಯಲ್ಲಿ 4 ದಶಕಗಳ ಹಿಂದೆ 1983 ರಲ್ಲಿ ಇದೇ ರೀತಿ ಭೀಕರ ಮಳೆ ಸುರಿದು ಮಹಾಪ್ರವಾಹ ಉಂಟಾಗಿತ್ತು. ಅಂದು ಇಂದ್ರಾಣಿ ಹೊಳೆ ಉಕ್ಕಿ ಹರಿದು, ಬಹುಜನರ ಸಾವು ನೋವಿಗೆ ಕಾರಣವಾಗಿತ್ತು. ಮತ್ತೊಮ್ಮೆ ಈ ಬಾರಿ ಅದೇ ರೀತಿಯಾಗಿದ್ದು ಜನರಲ್ಲಿ ಆತಂಕ ಮನೆಮಾಡಿದೆ. ಸದ್ಯ ಜಿಲ್ಲಾಡಳಿತವು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

ಭಾರಿ ಮಳೆಗೆ ಮಲ್ಪೆ ಯಲ್ಲಿ 3 ಬೋಟ್ ಮುಳುಗಡೆ, ಲಕ್ಷಾಂತರ ರೂ ನಷ್ಟ, ಕಲ್ಲು ಬಂಡೆ ಮೇಲೆ ಆಶ್ರಯ ಪಡೆದು, ದಡ ಸೇರಿದ ಮೀನುಗಾರರು ಸುರಕ್ಷಿತ. ಮಂಗ ಳೂರು ಇಂದ ಕೇಂದ್ರ NDRF ￰ಕಳುಹಿ ಸಲು ಮಗಳೂರು DC ಗೆ ಸಚಿವ ಕೋಟ ಸೂಚನೆ . ವಿಶೇಷ ಸುರಕ್ಷತಾ ಉಪಕರಣ ಗಳು ಮತ್ತು ಬೋಟ್ ನೊಂದಿಗೆ ಹೊರಟ NDRF ತಂಡ. ಉಡುಪಿಯಲ್ಲಿ ನೆರೆ ಪೀಡಿತ ಕುಕ್ಕೆಹಳ್ಳಿ ಹಾಗು ಇನ್ನಿತರ ಕಡೆ ಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋಟ ಸೂಚನೆ.

ನೆರೆಪೀಡಿತ ಪ್ರದೇಶಗಳಿಗೆ ಸ್ವತಃ ಜಿಲ್ಲಾಧಿಕಾರಿ ಜಿ. ಜಗದೀಶ್ ಬೇಟಿ ನೀಡಿ ಅಗತ್ಯ ಕ್ರಮ ಕೈ ಗೊಳ್ಳುವಂತೆ ಸೂಚನೆ.

 
 
 
 
 
 
 
 
 
 
 

Leave a Reply