ಸದ್ಗುರು ವಾಣಿ

ಪ್ರಶ್ನೆ: ನಿಮ್ಮಿಂದ ದೀಕ್ಷೆ ಪಡೆದವರಿಗೆ, ನಮ್ಮ ತಿಳುವಳಿಕೆಗೂ ಮೀರಿದ ರೀತಿಯಲ್ಲಿ ವಿಷಯ ಗಳು ನಡೆಯುತ್ತಿವೆ. ನನಗೆ ಈಗಲೂ ಆಶ್ಚರ್ಯವಾಗುತ್ತದೆ, ನಿಜವಾಗಿಯೂ ನೀವು ಯಾರು? ಮತ್ತು ನೀವು ಗುರುವಾಗಿ ಹೇಗೆಲ್ಲಾ ಕಾರ್ಯನಿರ್ವಹಿಸುತ್ತೀರಿ?

Sadhgಸದ್ಗುರು: ಒಬ್ಬ ವ್ಯಕ್ತಿಯಾಗಿ ನಾನು ಸಾಕಷ್ಟು ಭಯಾನಕ. ಗುರುವಾಗಿ ನಾನು ಸಂಪೂರ್ಣವಾಗಿ ಶೂನ್ಯ. ನನ್ನ ಜ್ಞಾನದ ಕಾರಣ ನಾನು ಗುರು ಆಗಿಲ್ಲ. ಬದಲಾಗಿ ನನ್ನೊಳಗೆ ಅಜ್ಞಾನವು ಅಮಿತತೆಯನ್ನು (ಮಿತಿಯನ್ನು ಮೀರುವುದು) ಹೊಂದಿದ್ದ ರಿಂದ ಗುರುವಾಗಿದ್ದೇನೆ. ನಿಮ್ಮೊಳಗೆ ಏನಾದರೂ ಅಮಿತವಾಗಿದ್ದರೆ – ಅದು ಏನೇ ಇರಲಿ – ಅದು ಕಾರ್ಯವಹಿಸುತ್ತದೆ. ನಿಮ್ಮಲ್ಲಿ ಅಮಿತವಾದ ಅಜ್ಞಾನವಿದ್ದರೆ, ಅದು ಕೆಲಸ ಮಾಡುತ್ತದೆ. ನಿಮ್ಮಲ್ಲಿ ಅಮಿತವಾದ ಪ್ರೀತಿಯಿದ್ದರೆ, ಅದು ಕೆಲಸ ಮಾಡುತ್ತದೆ. ನಿಮ್ಮಲ್ಲಿ ಅಮಿತವಾದ ಕೋಪವಿದ್ದರೆ ಅದು ಕೆಲಸ ಮಾಡುತ್ತದೆ. ನೀವು ಯಾವುದರಲ್ಲಾದರೂ ಸರಿ, ಅಮಿತ ವಾಗಿದ್ದರೆ, ಅದು ಕೆಲಸ ಮಾಡುತ್ತದೆ. ನಾನೊಂದು ಶೂನ್ಯ ಪ್ರದೇಶದಂತೆ ಆಗಿರುವು ದರಿಂದ, ಆದಿಯೋಗಿಯು ನನ್ನ ಮೂಲಕ ಕಾರ್ಯನಿರ್ವಹಿಸಲು ನಾನು ದ್ವಾರದಂತಾ ಗಿದ್ದೇನೆ.

ಅಜ್ಞಾನದಲ್ಲಿ ಅಮಿತವಾಗಿರುವುದು ಸುಲಭ ವಾದ ಮಾರ್ಗವೆಂದು ನಾನು ಕಂಡು ಕೊಂಡಿದ್ದೇನೆ. ‘ನನಗೆ ಏನೂ ತಿಳಿದಿಲ್ಲ’ ಎಂದು ನಾನು ಅರಿತುಕೊಂಡ ನಂತರವೇ ನನ್ನ ಆಧ್ಯಾತ್ಮಿಕ ಪ್ರಕ್ರಿಯೆಯು ಆರಂಭ ವಾಯಿತು. ಇದು ಸಣ್ಣ ವಿಷಯವಲ್ಲ. ಯಾವುದು ಮಿತಿಯನ್ನು ಮೀರಿರುವುದೋ ಅದು ಸಣ್ಣದಾಗಿರುವುದಿಲ್ಲ. ನೀವು ಜ್ಞಾನ ದಲ್ಲಿ ಅಮಿತರಾಗಲು ಪ್ರಯತ್ನಿಸಿದರೆ, ನೀವು ಎಷ್ಟನ್ನು ತಿಳಿಯುವ ಸಾಧ್ಯತೆಯಿದೆ? ನೀವು ಎಷ್ಟೇ ತಿಳಿದುಕೊಂಡರೂ, ಅದು ಇನ್ನೂ ಸೀಮಿತವಾಗಿಯೇ ಉಳಿಯುತ್ತದೆ. ಅಸ್ತಿತ್ವದ ಈ ಕೌಶಲ್ಯವನ್ನು ನಾನು ಅರಿತುಕೊಂಡೆ – ಜ್ಞಾನ ಎಂದು ಗುರುತಿಸಿಕೊಂಡ ಎಲ್ಲವೂ ಅಜ್ಞಾನ ಅಥವಾ ಮೌಢ್ಯ; ಮೌಢ್ಯ ಎಂದು ಗುರುತಿಸಿಕೊಂಡಿರುವಂತದ್ದೇ ನಿಜವಾದ ಜ್ಞಾನ.

ನಾನೊಂದು ಶೂನ್ಯ ಪ್ರದೇಶದಂತೆ ಆಗಿರುವು ದರಿಂದ, ಆದಿಯೋಗಿಯು ನನ್ನ ಮೂಲಕ ಕಾರ್ಯನಿರ್ವಹಿಸಲು ನಾನು ದ್ವಾರದಂತಾ ಗಿದ್ದೇನೆ. ನೀವು ನನ್ನನ್ನು ಬೀದಿಯಲ್ಲಿ ಭೇಟಿಯಾದರೆ, ನನ್ನ ತಲೆ ಖಾಲಿಯಾಗಿಯೇ ಇರುತ್ತದೆ. ನನ್ನ ವ್ಯಕ್ತಿತ್ವವನ್ನು ಪಕ್ಕಕ್ಕೆ ಸರಿಸಿ ನೋಡಿದರೆ, ನಿಮಗೆ ಏನೂ ಕಾಣಿಸುವುದಿಲ್ಲ. ಮತ್ತು ನಾನೊಬ್ಬ ವ್ಯಕ್ತಿಯಾಗಿದ್ದಾಗ, ನಾನು ಪ್ರತಿ ಕೆಲವು ವರ್ಷಗಳಿಗೊಮ್ಮೆ ಅದನ್ನು ಬದಲಾಯಿಸುತ್ತಿರುತ್ತೇನೆ. ಆ ಬಗ್ಗೆ ಜನರು ಗೊಂದಲ ಹಾಗು ಗಲಿಬಿಲಿಗೊಂಡಿದ್ದಾರೆ. ನನ್ನ ವ್ಯಕ್ತಿತ್ವವನ್ನು ನಾನು ಬದಲಾಯಿಸ ಲಿದ್ದೇನೆ ಎಂದು ನನ್ನ ಸುತ್ತಲಿನ ಜನರಿಗೆ ಯಾವಾಗಲೂ ಎಚ್ಚರಿಕೆ ನೀಡುತ್ತಿರುತ್ತೇನೆ, ಆದರೆ ಅದರ ಹೊರತಾಗಿಯೂ, ಅವರಲ್ಲಿ ಹಲವರು ಆಘಾತಕ್ಕೊಳಗಾಗುತ್ತಾರೆ – ಕೆಲವರು ಜೊತೆ ನಿಲ್ಲುವರು, ಕೆಲವರು ಬಿಟ್ಟು ಹೋಗುವರು..

ನನ್ನ ವ್ಯಕ್ತಿತ್ವವನ್ನು ನನ್ನಿಂದ ಏನೂ ಬಯಸ ದಷ್ಟು ಭಯಾನಕವಾಗಿಯೂ, ಅದೇ ಸಮಯದಲ್ಲಿ ನನ್ನನ್ನು ಬಿಟ್ಟು ಹೋಗಲು ಸಾಧ್ಯವಾಗದಷ್ಟು ಸಿಹಿಯಾದ ರೀತಿ ಹೆಣಯಲಾಗಿದೆ. ನಾನು ಸ್ವಲ್ಪ ಹೆಚ್ಚು ಭಯಾನಕವಾದರೆ, ಇಲ್ಲಿ ಯಾರೂ ಇರುವು ದಿಲ್ಲ. ಅದೇ ನಾನು ಸ್ವಲ್ಪ ಹೆಚ್ಚು ಸಿಹಿ ಯಾದರೆ, ಯಾರೂ ಒಂದು ಕ್ಷಣವೂ ಬಿಡಲು ಸಾಧ್ಯವಾಗುವುದಿಲ್ಲ. ನನ್ನನ್ನು ತಡೆದು ಕೊಳ್ಳದಿರುವಷ್ಟು, ಹಾಗೆಯೇ ನನ್ನನ್ನು ಬಿಡದಿರುವಷ್ಟು ಇರುವಂತೆ, ನನ್ನನ್ನು ನಾನು ಅಂಚಿನಲ್ಲಿರಿಸಿಕೊಂಡಿದ್ದೇನೆ. ಏಕೆಂದರೆ, ಅವರ ಅಧ್ಯಾತ್ಮ ಅನ್ವೇಷಣೆಗೆ ಇದು ಸಹಾಯಕವಾಗಿರುತ್ತದೆ. ನಾನೊಂದು ಗಮ್ಯವಲ್ಲ, ಕೇವಲ ತೆರೆದ ದ್ವಾರ – ನಾವು ಆದಿಯೋಗಿ(ಶಿವ) ಎಂದು ಕರೆಯುವ ಎಲ್ಲದಕ್ಕೂ ಒಂದು ದ್ವಾರ – ಆದಿಯೋಗಿಯ ಎಲ್ಲ ತಿಳುವಳಿಕೆಗೆ, ಅವನು ಕೊಟ್ಟ ಎಲ್ಲ ಸಾಧ್ಯತೆಗಳಿಗೆ ಒಂದು ದ್ವಾರ.

ಅವರು ನನ್ನನ್ನು ತುಂಬಾ ಸಿಹಿಯಾಗಿ ಭಾವಿಸಿದರೆ, ಅವರು ನನ್ನನ್ನು ಅಧ್ಯಾತ್ಮ ಅನ್ವೇಷಣೆಗಿಂತ ಹೆಚ್ಚಾಗಿ ನೋಡುತ್ತಾರೆ, ಅದು ಒಳ್ಳೆಯದಲ್ಲ. ಅವರು ನನ್ನನ್ನು ತುಂಬಾ ಭಯಾನಕವೆಂದು ಭಾವಿಸಿದರೆ, ಅವರು ತಮ್ಮ ಅನ್ವೇಷಣೆಯನ್ನು ಬಿಟ್ಟು ಬಿಡುತ್ತಾರೆ, ಅದು ಕೂಡ ಒಳ್ಳೆಯದಲ್ಲ. ನಾನು ನನ್ನಲ್ಲಿ ಎರಡೂ ವ್ಯಕ್ತಿತ್ವವನ್ನು ಹೆಣೆದಿದ್ದೇನೆ, ಇದರಿಂದ ಅವರ ಬೇಡಿಕೆ ಎಂದಿಗೂ ಸಾಯುವುದಿಲ್ಲ. ಅವರು ಬೇರೆ ಯಾವುದೇ ಕಾರಣಕ್ಕೂ ಮೀರಿ ನೋಡಿ ದರೂ ನನ್ನಿಂದ ಬೇಸತ್ತಿದ್ದರೂ ಅದು ಕೆಲಸ ಮಾಡುತ್ತದೆ. ಒಬ್ಬ ಗುರು ಒಂದು ಗಮ್ಯವಲ್ಲ. ಗುರು ಎಂದರೆ ಒಂದು ಸಾಧನ. ಒಬ್ಬ ಗುರು ದ್ವಾರದಂತೆ. ನೀವು ದ್ವಾರದ ಮೂಲಕ ಹಾದು ಹೋದರೆ, ನೀವು ವಾಸ್ತವವನ್ನು ಕಂಡು ಕೊಳ್ಳುತ್ತೀರಿ.

ನೀವು ನನ್ನ ಮೂಲಕ ಹಾದು ಹೋಗುವುದು ಒಳ್ಳೆಯದು, ಏಕೆಂದರೆ ನೀವು ಕಂಡುಕೊಳ್ಳ ಬಹುದಾದ ಕೆಲವೇ ಖಾಲಿ ಸ್ಥಳಗಳಲ್ಲಿ ಇದು ಒಂದು. ಎಲ್ಲೆಡೆ, ಇದು ಅಪಾರದರ್ಶಕ ವಾಗಿದೆ – ಜ್ಞಾನದಿಂದ ತುಂಬಿದೆ, ಧರ್ಮ ಗ್ರಂಥಗಳಿಂದ ತುಂಬಿದೆ, ಪೂರ್ವಭಾವಿ ತೀರ್ಮಾನಗಳಿಂದ ತುಂಬಿದೆ. ದ್ವಾರ ಖಾಲಿ ಯಾಗಿರಬೇಕು. ಯಾವುದೇ ಪ್ರಯಾಸ ವಿಲ್ಲದೆ ನೀವು ಸುಲಭವಾಗಿ ಹಾದು ಹೋಗಲು ಸಾಧ್ಯವಾದರೆ ಮಾತ್ರ ಅದು ಉಪಯುಕ್ತವಾಗಿರುತ್ತದೆ. ಆದ್ದರಿಂದ, ಬಾಗಿಲಲ್ಲಿ ಏನನ್ನಾದರೂ ಹುಡುಕಲು ಪ್ರಯತ್ನಿಸಬೇಡಿ. ನೀವು ಬಾಗಿಲ ಬಳಿ ಏನನ್ನಾದರೂ ಕಂಡುಕೊಂಡರೆ, ಅದು ಮುಚ್ಚಿದ ಬಾಗಿಲು ಎಂದರ್ಥ.

ನಾನೊಂದು ಗಮ್ಯವಲ್ಲ, ಕೇವಲ ತೆರೆದ ದ್ವಾರ – ನಾವು ಆದಿಯೋಗಿ(ಶಿವ) ಎಂದು ಕರೆಯುವ ಎಲ್ಲದಕ್ಕೂ ಒಂದು ದ್ವಾರ – ಆದಿಯೋಗಿಯ ಎಲ್ಲ ತಿಳುವಳಿಕೆಗೆ, ಅವನು ಕೊಟ್ಟ ಎಲ್ಲ ಸಾಧ್ಯತೆಗಳಿಗೆ ಒಂದು ದ್ವಾರ. ದ್ವಾರಪಾಲಕನಿಲ್ಲದ ದ್ವಾರ. ನೀವು ಅದರ ಮೂಲಕ ಹೋಗಲು ಸಿದ್ಧರಿದ್ದರೆ, ಯಾರೂ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ.

 
 
 
 
 
 
 
 
 
 
 

Leave a Reply