Janardhan Kodavoor/ Team KaravaliXpress
26.6 C
Udupi
Monday, June 27, 2022
Sathyanatha Stores Brahmavara

ರಫೆಲ್ ಯುದ್ಧ ವಿಮಾನ ಖರೀದಿಗೆ ಹರ್ಷ-ಜಿಲೇಬಿ ಹಂಚಿ ಸಂಭ್ರಮಾಚರಣೆ

                                            

ಉಡುಪಿ: ಕೇಂದ್ರ ಸರಕಾರ ರಫೆಲ್ ಯುದ್ಧ ವಿಮಾನ ಖರೀದಿಸಿದ ಪ್ರಯುಕ್ತ ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ಸಂಭ್ರಮಾಚರಣೆ ನಗರದ ಮಾರುತಿ ವೀಥಿಕಾದಲ್ಲಿ ಗುರುವಾರ ನಡೆಯಿತು.

20 ×14 ಅಡಿ ಸುತ್ತಳತೆಯ ಬೃಹತ್ ರಾಷ್ಟಧ್ವಜ ಪ್ರದರ್ಶಿಸುವ ಮೂಲಕ ದೇಶದ ಸಾಧನೆಗೆ ಗೌರವ ಸಮರ್ಪಿಸಲಾಯಿತು.
ಕಲ್ಸಂಕದ ಉಡುಪಿ ಸ್ವಿಟ್ಸ್ ನ ಖಾದ್ಯ ತಯಾರಕರ ತಂಡ ಸ್ಥಳದಲ್ಲೇ ತಯಾರಿಸಿದ ಬಿಸಿ ಬಿಸಿ ಜಿಲೇಬಿಯನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

ದೇಶವನ್ನು ಇನ್ನಷ್ಡು ಬಲಿಷ್ಠಗೊಳಿಸಲು ಭಾರತ ಸರಕಾರ, ಅತ್ಯಾಧುನಿಕ ತಂತ್ರಜ್ಞಾನದ ರಫೆಲ್ ಯುದ್ಧ ವಿಮಾನ ಖರೀದಿ ಪ್ರಕ್ರಿಯೆ ನಡೆಸಿದ್ದು ಹೆಮ್ಮೆಯ ವಿಚಾರ. ದೇಶದ ಸೇನಾ ವ್ಯವಸ್ಥೆ ಮತ್ತಷ್ಟು ಬಲ ಪಡೆದುಕೊಂಡಿದೆ. ದೇಶ ವಾಸಿಗಳು ಸಂಭ್ರಮಿಸಬೇಕಾದ ಕ್ಷಣ ಇದು ಎಂದು ನಾಗರಿಕ ಸಮಿತಿ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನಾಗರಿಕ ಸಮಿತಿಯ ಪದಾಧಿಕಾರಿಗಳಾದ ಕೆ. ಬಾಲಗಂಗಾಧರ ರಾವ್, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಾಯ, ತಾರಾನಾಥ ಮೇಸ್ತ ಶಿರೂರು, ಮಹಮ್ಮದ್, ಸುಧಾಕರ ಶೆಟ್ಟಿ, ರಾಜೇಶ್ ಕಲ್ಮಾಡಿ ಮೊದಲಾದವರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!