ಉಡುಪಿಯಲ್ಲಿ ಮೇ. 24ರ ಸೋಮವಾರ ನೀಡುವ ಲಸಿಕೆ ಬಗ್ಗೆ ಮಾಹಿತಿ

ಉಡುಪಿಯಲ್ಲಿ ನಾಳೆ ನೀಡುವ ಲಸಿಕೆ ಬಗ್ಗೆ ಮಾಹಿತಿಗಳು ಈ ಕೆಳಗಿನಂತಿವೆ.

1. ಉಡುಪಿ ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಪ್ರಥಮ ಡೋಸ್ ಲಭ್ಯವಿರುವುದಿಲ್ಲ.

2. ಉಡುಪಿ ನಗರ ಪ್ರದೇಶದಲ್ಲಿ 1ನೇ ಡೋಸ್ ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದ ಫಲಾನುಭವಿಗಳಿಗೆ, 2ನೇ ಡೋಸ್ ಲಸಿಕೆ ಪಡೆಯಲು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆ ಕಟ್ಟಡ (ಅಲಂಕಾರ್ ಥಿಯೇಟರ್ ಹತ್ತಿರ) (100 ಡೋಸ್) , ಹಾಗೂ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ (ಬಿ.ಆರ್.ಎಸ್), ಉಡುಪಿ (100 ಡೋಸ್) ಇಲ್ಲಿ ದಿನಾಂಕ 24.05.2021ರಂದು ಲಸಿಕಾ ಕೇಂದ್ರ ಏರ್ಪಡಿಸಲಾಗಿದೆ. ಈ ಎಲ್ಲಾ ಫಲಾನುಭವಿಗಳಿಗೆ ರಾಜ್ಯ ಸರಕಾರದಿಂದ ಎಸ್.ಎಂ.ಎಸ್. ಸಂದೇಶ ಕಳುಹಿಸಲಾಗುವುದು ಹಾಗೂ ಎಸ್.ಎಂ.ಎಸ್. ಸಂದೇಶ ಹೊಂದಿರುವ ಫಲಾನುಭವಿಗಳು ಎಸ್. ಎಂ.ಎಸ್. ಸಂದೇಶದಲ್ಲಿ ನಿಗದಿ ಪಡಿಸಿದ ಲಸಿಕಾ ಕೇಂದ್ರಕ್ಕೆ ಆಧಾರ್ ಕಾರ್ಡ್ ನೊಂದಿಗೆ ತೆರಳಿ ಲಸಿಕೆ ಪಡೆಯಲು ಕೋರಿದೆ.

3. ಉಡುಪಿ ನಗರ ಪ್ರದೇಶದಲ್ಲಿ ದಿನಾಂಕ 30.03.2021 ಹಾಗೂ ಅದರ ಮುಂಚಿತವಾಗಿ 1ನೇ ಡೋಸ್ ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದ ಫಲಾನುಭವಿಗಳಿಗೆ, 2ನೇ ಡೋಸ್ ಲಸಿಕೆ ಪಡೆಯಲು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಮಣಿಪಾಲ (ಮಾಧವ ಕೃಪಾ ಶಾಲೆ ಮಣಿಪಾಲ) (40 ಡೋಸ್), ದಲ್ಲಿ ಲಸಿಕಾ ಸತ್ರ ಏರ್ಪಡಿಸಲಾಗಿದೆ. ಈ ಎಲ್ಲಾ ಫಲಾನುಭವಿಗಳಿಗೆ ಜಿಲ್ಲಾಡಳಿತ ಉಡುಪಿಯಿಂದ ಎಸ್.ಎಂ.ಎಸ್. ಸಂದೇಶ ಕಳುಹಿಸಲಾಗಿದೆ. ಎಸ್.ಎಂ.ಎಸ್. ಸಂದೇಶ ಹೊಂದಿರುವ ಫಲಾನುಭವಿಗಳು ಎಸ್. ಎಂ.ಎಸ್. ಸಂದೇಶದಲ್ಲಿ ನಿಗದಿ ಪಡಿಸಿದ ಲಸಿಕಾ ಕೇಂದ್ರಕ್ಕೆ ಆಧಾರ್ ಕಾರ್ಡ್ ನೊಂದಿಗೆ ತೆರಳಿ ಲಸಿಕೆ ಪಡೆಯಲು ಕೋರಿದೆ.

4. ಉಡುಪಿ ನಗರ ಪ್ರದೇಶದಲ್ಲಿ 45ವರ್ಷ ಮೇಲ್ಪಟ್ಟವರಿಗೆ / HCW/FLW( ಕೇ೦ದ್ರ ಸರಕಾರ ಗುರುತಿಸಿರುವ ಮು೦ಚೂಣಿ ಕಾರ್ಯ ಕರ್ತರು) ರಿಗೆ ಕೋವಿಶೀಲ್ಡ್ ಪ್ರಥಮ ಡೋಸ್ ಹಾಗೂ ಕೋವಿಶೀಲ್ಡ್ ಪ್ರಥಮ ಡೋಸ್ ಪಡೆದು 84 ದಿನಗಳು ಪೂರೈಸಿರುವವರಿಗೆ ಕೋವಿಶೀಲ್ಡ್ 2ನೇ ಡೋಸ್‌ ಲಸಿಕೆಯನ್ನು ಮಣಿಪಾಲ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ (ಮಾಧವ ಕೃಪ ಶಾಲೆ, ಮಣಿಪಾಲ (100 ಡೋಸ್), ಜಿಲ್ಲಾ ಆಸ್ಪತ್ರೆ ಅಜ್ಜರಕಾಡು, (ಸೇಂಟ್ ಸಿಸಿಲೀಸ್ ಶಾಲೆ) (250 ಡೋಸ್), ಅನ್ನು ದಿನಾಂಕ 24/05/2021 ರಂದು ನೀಡಲಾಗುವುದು. ಆಸ್ಪತ್ರೆಯನ್ನು ಸಂಪರ್ಕಿಸಿ ಲಸಿಕಾ ಲಭ್ಯತೆಯನ್ನು ಖಚಿತಪಡಿಸಿಕೊಂಡು ಆಸ್ಪತ್ರೆಗೆ ಬಂದು ಲಸಿಕೆ ಪಡೆಯುವುದು.

5. 18 ರಿಂದ 44 ವರ್ಷ ಒಳಗಿನ ರಾಜ್ಯ ಸರಕಾರ ಗುರುತಿಸಿರುವ 22 ವಿಧದ ಮುಂಚೂಣಿ ಕಾರ್ಯಕರ್ತರಿಗೆ ( ಮಾನಸಿಕ ಅಸ್ವಸ್ಥತೆನ್ನು ಒಳಗೊಂಡ ವಿಕಲಚೇತನರು ಸೇರಿ) ಕೋವಿಶೀಲ್ಡ್ ಪ್ರಥಮ ಡೋಸ್‌ ಲಸಿಕೆಯನ್ನು ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ (ಬಿ.ಆರ್.ಎಸ್), ಉಡುಪಿ (250 ಡೋಸ್) ದಿನಾಂಕ 24.05.2021ರಂದು ನೀಡಲಾಗುವುದು. ಮುಂಚೂಣಿ ಕಾರ್ಯಕರ್ತರ ದೃಡೀಕೃತ ದಾಖಲೆ/ ವಿಕಲಚೇತನ ರ ದಾಖಲೆ ಮತ್ತು ಆಧಾರ್ ಕಾರ್ಡ್ ಅನ್ನು ಹಾಜರುಪಡಿಸಬೇಕು.

6. ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ 19 ವ್ಯಾಕ್ಸಿನ್ ಬಗ್ಗೆ ಆಸ್ಪತ್ರೆ/ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕಾ ಲಭ್ಯತೆಯನ್ನು ಖಚಿತಪಡಿಸಿಕೊಂಡು ಆಸ್ಪತ್ರೆಗೆ ತೆರಳಿ ಲಸಿಕೆ ಪಡೆಯುವುದು.

7. ರಾಜ್ಯ ಸರಕಾರ ಗುರುತಿಸಿರುವ 18 ವಿಧದ ಆದ್ಯತಾ ಗುಂಪುಗಳಿಗೆ ಲಸಿಕಾಕರಣದ ದಿನಾಂಕವನ್ನು ಮುಂದೆ ತಿಳಿಸಲಾಗುವುದು.

 
 
 
 
 
 
 
 
 
 
 

Leave a Reply