ಲಾಕ್ ಡೌನ್ ನಿಯಮ ಮೀರಿದ ವಾಹನಕ್ಕೆ ಕಸ ತುಂಬಿಸಿ ಸಾಗಾಟ – ಉಡುಪಿಯಲ್ಲೊಂದು ವಿಭಿನ್ನ ಶಿಕ್ಷೆ

ಉಡುಪಿ: ಲಾಕ್ ಡೌನ್ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಮ ಬಾಹಿರವಾಗಿ ಓಡಾಡುತ್ತಿದ್ದ ವಾಹನವನ್ನು ಇಂದು ತಡೆಹಿಡಿದ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಅದೇ ವಾಹನದಲ್ಲಿ ಕಸ ಸಾಗಿಸಿದರು.ರಾಷ್ಟ್ರೀಯ ಹೆದ್ದಾರಿ 66 ರ ಆಭರಣ ಮೋಟರ್ಸ್ ಎದುರಿನಿಂದ ಕಾಂಚನ ಮೋಟಾರ್ಸ್ ವರೆಗೆ ಹೆದ್ದಾರಿ ಬದಿಯಲ್ಲಿ ಬಿದ್ದಿದ್ದ ಕಸದ ತ್ಯಾಜ್ಯವನ್ನು ಅದೇ ವಾಹನಕ್ಕೆ ತುಂಬಿಸಿ ಅಲೆವೂರಿನ ಡಂಪಿಂಗ್ ಯಾರ್ಡ್ ಗೆ ಸಾಗಿಸಿದರು.  

ಲಾಕ್ ಡೌನ್ ವೇಳೆಯಲ್ಲಿ ಸಾರ್ವಜನಿಕರು ನಿಯಮ ಉಲ್ಲಂಘಿಸಿ ವಾಹನಗಳಲ್ಲಿ ಸಂಚರಿಸದಂತೆ ಈ ಮೊದಲೇ ಸೂಚನೆ ನೀಡಲಾಗಿದ್ದು, ಇದನ್ನು ಮೀರಿದ ವಾಹನವನ್ನು ಲಾಕ್ಡೌನ್ ಮುಗಿಯುವವರೆಗೂ ಕಸ ವಿಲೇವಾರಿ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರು ಎಚ್ಚರಿಕೆ ನೀಡಿದ್ದಾರೆ.

 
 
 
 
 
 
 
 
 
 
 

1 COMMENT

  1. ಜಿಲ್ಲಾಧಿಕಾರಿಗಳಿಗೆ ಅಧಿಕಾರ ಕೊಟ್ಟಿರೋದು ಜನಗಳ‌ಮಟ್ಟಿಗೆ ಶಾಪ ವಾಗಿದೆ.ಇದರಿಂದ ಮುಕ್ತಿ ಹೇಗೋ ಗೊತ್ತಿಲ್ಲ.ಕೊರೊನಾ ಹೋಗಲ್ಲ,ಇವರ ಲಾಕ್ಡೌನ್ ಮುಗಿಯಲ್ಲ. ಹಣ ಮಾಡುವ ಧಂಧೆ ಯಾಗ್ಬಿಟ್ಟಿದೆ ಎಲ್ರಿಗೂ.ಪಾಪದವ ಸತ್ತ!

Leave a Reply