ಉಡುಪಿ: 783 ಮಂದಿ ಗುಣಮುಖ, 977 ಮಂದಿಗೆ ಸೋಂಕು; 6 ಸಾವು

ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ 977 ಮಂದಿಗೆ ಸೋಂಕು ದೃಢಪಟ್ಟಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ.ಒಟ್ಟು 5,249 ಸಕ್ರಿಯ ಪ್ರಕರಣಗಳಿದ್ದು, ಇಂದು 783 ಮಂದಿ ಗುಣಮುಖರಾಗಿದ್ದಾರೆ.

 2,653 ಮಂದಿಯನ್ನು ಇಂದು ಪರೀಕ್ಷೆಗೊಳಪಡಿಸಲಾಗಿದೆ. ಒಟ್ಟು ಸೋಂಕಿತರ ಪೈಕಿ 948 ಮಂದಿ ಮನೆ ಆರೈಕೆಗೆ ಹಾಗೂ 29 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಡುಪಿ ತಾಲೂಕಿನ 383, ಕುಂದಾಪುರ 280, ಕಾರ್ಕಳ 310 ಮತ್ತು ಹೊರ ಜಿಲ್ಲೆಗಳ 4 ಮಂದಿ ಸೋಂಕಿತರ ಪೈಕಿ ಸೇರಿದ್ದಾರೆ ಎಂದು ಡಿಎಚ್.ಓ ಡಾ. ಸುಧೀರಚಂದ್ರ ಸೂಡ ತಿಳಿಸಿದ್ದಾರೆ

 
 
 
 
 
 
 
 
 
 
 

Leave a Reply