ಉಡುಪಿ ಜಿಲ್ಲೆಯಲ್ಲಿ 660 ಮಂದಿಗೆ ಪಾಸಿಟಿವ್ – ಇಬ್ಬರು ಬಲಿ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19ರ ಎರಡನೇ ಅಲೆ ನಿಯಂತ್ರಣಕ್ಕೆ ಸಿಗದೆ ಹಬ್ಬುತ್ತಿದ್ದು, ಶುಕ್ರವಾರ ಒಂದೇ ದಿನದಲ್ಲಿ ಇಬ್ಬರು ಕೋವಿಡ್ಗೆ ಬಲಿಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು 660 ಮಂದಿ ಪಾಸಿಟಿವ್.

 ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ನಿಂದ ಮೃತರಾದವರು ಸಂಖ್ಯೆ 198ಕ್ಕೇರಿದೆ. ಶುಕ್ರವಾರ 419 ಮಂದಿ ಸೋಂಕಿನಿಂದ ಗುಣಮುಖ ರಾಗಿದ್ದು, ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆಯೂ ಇದೀಗ 2596 ಕ್ಕೇರಿದೆ.

ಶುಕ್ರವಾರ ಪಾಸಿಟಿವ್ ಬಂದ 660 ಮಂದಿಯಲ್ಲಿ 407 ಮಂದಿ ಪುರುಷರು 253 ಮಂದಿ ಮಹಿಳೆಯರು. ಇವರಲ್ಲಿ 346 ಮಂದಿ ಉಡುಪಿ ತಾಲೂಕಿ ನವರು.  217 ಮಂದಿ ಕುಂದಾಪುರ ಹಾಗೂ 93 ಮಂದಿ ಕಾರ್ಕಳ ತಾಲೂಕಿನವರು.

ಹೊರಜಿಲ್ಲೆಗಳಿಂದ ವಿವಿಧ ಕಾರಣಗಳಿಗಾಗಿ ಆಗಮಿಸಿದ 4 ಮಂದಿ ಸಹ ಕೋವಿಡ್ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ

 
 
 
 
 
 
 
 
 
 
 

Leave a Reply