ಮಡಿಕೇರಿ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದನೆ 

ಮಡಿಕೇರಿ: ತನ್ನ ಭದ್ರಕೋಟೆಯಾಗಿ ಕಾಂಗ್ರೆಸ್ ಸತತವಾಗಿ ಅಧಿಕಾರ ನಡೆಸಿಕೊಂಡು ಬಂದಿದ್ದ ಮಡಿಕೇರಿ ನಗರಸಭೆಯಲ್ಲಿ ಈ ಬಾರಿ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ.

16 ಕ್ಷೇತ್ರಗಳನ್ನು ಗೆದ್ದು ಬಿಜೆಪಿ ಬಹುಮತವನ್ನು ಪಡೆದು ಕೊಂಡಿದ್ದು, 1 ಕ್ಷೇತ್ರ ಗೆದ್ದ ಕಾಂಗ್ರೆಸ್ ಇತಿಹಾಸ ಸೃಷ್ಟಿ ಮಾಡಿದೆ.ಜೆಡಿಎಸ್ 1 ಹಾಗೂ 5 ಕ್ಷೇತ್ರಗಳನ್ನು ಗೆದ ಎಸ್ ಡಿಪಿಐ ಕೂಡ ಉತ್ತಮ ಸಾಧನೆ ಮಾಡಿದೆ. ಆದರೆ ಕಾಂಗ್ರೆಸ್ ಸಂಪೂರ್ಣವಾಗಿ ನೆಲಕಚ್ಚಿದೆ. ಜಿಲ್ಲಾ ಕಾಂಗ್ರೆಸ್ ಯಾವುದೇ ಪೂರ್ವ ತಯಾರಿಯನ್ನು ಚುನಾವಣೆಗೆ ಮಾಡಿಲ್ಲ ಎನ್ನುತ್ತಿದ್ದಾರೆ ಕಾರ್ಯಕರ್ತರು.

ಜಿಲ್ಲಾ ಕಾಂಗ್ರೆಸ್ ಸಂಪೂರ್ಣವಾಗಿ ಚುನಾವಣೆಯನ್ನು ನಿರ್ಲಕ್ಷಿಸಿತ್ತು. ಅಭ್ಯರ್ಥಿಗಳು ಅವರ ಸ್ವ ಸಾಮರ್ಥ್ಯಕ್ಕೆ ಅನುಗುಣವಾಗಿ ಚುನಾವಣೆ ಗಳನ್ನು ಎದುರಿಸಿದ್ದರು ಹೊರತು ಬೇರೇನೂ ಅಲ್ಲ ಎಂಬ ಆರೋಪವಿದೆ.ಮಡಿಕೇರಿ ನಗರಸಭೆಯ ಕಾಂಗ್ರೆಸ್ ಅಭ್ಯರ್ಥಿಗಳು ಬಹಳ ಪ್ರಬಲರಾಗಿದ್ದರು. ಆದರೆ ಜಿಲ್ಲಾ ಕಾಂಗ್ರೆಸ್ ಇಡೀ ಚುನಾವಣೆಯನ್ನು ಸರಿಯಾಗಿ ಉಸ್ತುವಾರಿ ನಡೆಸಿಲ್ಲ ಎನ್ನುತ್ತಾರೆ ಕಾರ್ಯಕರ್ತರು

 ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮಾಜಿ ನಗರಸಭೆ ಅಧ್ಯಕ್ಷ ನಂದಕುಮಾರ್, ಜಿಲ್ಲಾ ಕಾಂಗ್ರೆಸ್ ಯಾವುದೇ ರೀತಿಯ ಸಹಕಾರ ನೀಡಿಲ್ಲ. ಅವರಿಗೆ ಕಾಂಗ್ರೆಸ್ ನಗರಸಭೆಯಲ್ಲಿ ಸೋಲಬೇಕೆಂಬ ಆಸೆ ಇತ್ತು ಎಂದಿದ್ದಾರೆ.

 
 
 
 
 
 
 
 
 
 
 

Leave a Reply