Janardhan Kodavoor/ Team KaravaliXpress
29.6 C
Udupi
Sunday, August 1, 2021

ವಯೋನಿವೃತ್ತ ಕಾರ್ಯ ನಿರ್ವಾಹಕ ಇಂಜಿನಿಯರ್ ಟಿ ಮ್ ಮಂಜೇಗೌಡರಿಗೆ ಸನ್ಮಾನ

ಉಡುಪಿ :ಮೂಲ ಸೌಲಭ್ಯ ಅಭಿವೃದ್ಧಿ ,ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಉಡುಪಿಯಿಂದ ಶ್ಯಾಮಿಲಿ ಸಂಭಾಂಗಣದ ಎರಡನೇ ಮಳಿಗೆಯ ಕಛೇರಿಯಲ್ಲಿ ಶುಕ್ರವಾರ ಸುಮಾರು 34 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಬೆಂಗಳೂರು, ಮಂಡ್ಯ, ಮಂಗಳೂರು , ಕಾರ್ಯ ನಿರ್ವಾಹಕ ಇಂಜಿನಿಯರ್ ರಾಗಿ ಕಾರವಾರ ,ಉಡುಪಿಯಲ್ಲಿ ಸೇವೆ ಸಲ್ಲಿಸಿ ಇಂದು ವಯೋನಿವೃತ್ತರಾದ ಟಿ ಮ್ ಮಂಜೇಗೌಡ ರವರನ್ನು ಮುಖ್ಯ ಅತಿಥಿ ಯಾದ ಮೂಲ ಸೌಲಭ್ಯ ಅಭಿವೃದ್ಧಿ ,ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಕಾರವಾರ ಇದರ ಅಧೀಕ್ಷಕ ಇಂಜಿನಿಯರ್ ಚಂದ್ರಶೇಖರ್ ಶಾಲು ಹೊದಿಸಿ , ಫಲಪುಷ್ಪ ,ಸ್ಮರಣಿಕೆ ನೀಡಿ ಗೌರವಿಸಿದರು.

ಈ ನಿಟ್ಟಿನಲ್ಲಿ ಹಂತ ಹಂತವಾಗಿ ಬೆಳೆದು ಕಾರ್ಯ ನಿರ್ವಾಹಕ ಇಂಜಿನಿಯರ್ ರಾಗಿ ಸೇವೆ ಸಲ್ಲಿಸಿದ ಮಂಜೇಗೌಡರನ್ನು ಸಂಸ್ಥೆ ಪರವಾಗಿ ಗೌರವಿಸಲಾಯಿತು. ಗೌರವ ಸ್ವೀಕರಿಸಿದ ಮಂಜೇಗೌಡರು ಮಾತನಾಡಿ ಪ್ರಾಮಾಣಿಕತೆ ,ಹಾಗೂ ಮಾನಸಾಕ್ಷಿ ಪೂರ್ವಕ ದುಡಿದಲ್ಲಿ ಅಧಿಕಾರ ನಮ್ಮನರಸಿ ಬರುತ್ತದೆ ಎಂದರು.

 ಮೂಲ ಸೌಲಭ್ಯ ಅಭಿವೃದ್ಧಿ , ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಕಾರವಾರದ ಇಂಜಿನಿಯರ್ ಟಿ ಟಿ ಎಸ್ ಪಾಯದೆ ಸ್ವಾಗತಿಸಿದರು . ಕಾರ್ಯ ನಿರ್ವಾಹಕ ಇಂಜಿನಿಯರ್ ಅಶೋಕ್ ಲೋಕೋಪಯೋಗಿ ವಿಭಾಗ ಉಡುಪಿ,ಹಿರಿಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ರಾಮದಾಸ್ ಆಚಾರ್ಯ , ಮಾಧವ ಕಾರಂತ್ , ರಮಾನಾಥ್ ಭಟ್, ವೀರಣ್ಣ ಸಾಹುಕಾರ್, ಭಾನುಪ್ರಕಾಶ್ ಅತ್ತಾವರ್ ಸಹಾಯಕ ಇಂಜಿನಿಯರ್, ಗುತ್ತಿಗೆದಾರರು ಪೀಲಿಪ್ ದ್. ಕೋಸ್ಟಾ ಕುಂದಾಪುರ, ಹಾಗೂ ಅಧಿಕಾರಿಗಳು ಹಾಗೂ ನೌಕರರು ಉಪಸ್ಥಿತರಿದ್ದರು.ವಿಜಯ ಶೆಟ್ಟಿ, ಕಾರ್ಯಕ್ರಮ ನಿರೂಪಿಸಿ, ಸಹಾಯಕ ಇಂಜಿನಿಯರ್ ಟಿ.ರ್. ಮುಲುಹಲ್ಲಿ ವಂದಿಸಿದರು.                

- Advertisement -

ಸಂಬಂಧಿತ ಸುದ್ದಿ

Leave a Reply

ಸುಪ್ರಭಾತ

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!