ನಿರಂತರ ಸ್ಟೀಮ್ ತೆಗೆದುಕೊಳ್ತಿದ್ದೀರಾ…? ಕಾಡಬಹುದು ಬ್ಲ್ಯಾಕ್ ಫಂಗಸ್

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಬೆನ್ನಲ್ಲೇ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಆದ್ರೆ ನೀವೇನಾದ್ರೂ ಕೊರೊನಾ ಸೋಂಕು, ಶೀತ, ಜ್ವರ ಹಿನ್ನೆಲೆಯಲ್ಲಿ ಸ್ಟೀಮ್ ತೆಗೆದುಕೊಳ್ಳುತ್ತಿದ್ರೆ, ನಿಮಗೂ ಬ್ಲ್ಯಾಕ್ ಫಂಗಸ್ ಸೋಂಕು ಕಾಡಬಹುದು ಅನ್ನುತ್ತಿದ್ದಾರೆ ತಜ್ಞರು.

ಹೌದು, ಸಾಮಾನ್ಯವಾಗಿ ಕೊರೊನಾ ಸೋಂಕಿತರು ಸ್ಟೀಮ್ ತೆಗೆದುಕೊಳ್ಳುತ್ತಿದ್ದಾರೆ. ಅದ್ರಲ್ಲೂ ದಿನಕ್ಕೆ 8 ರಿಂದ 10 ಬಾರಿ ಸ್ಟೀಮ್ ತೆಗೆದುಕೊಳ್ಳುತ್ತಿದ್ರೆ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದಾಗಿ ಗಾಳಿಯಲ್ಲಿ ರುವ ಕಪ್ಪು ಶಿಲೀಂದ್ರ ಮೂಗಿನ ಮೂಲಕ ದೇಹವನ್ನು ಸೇರುತ್ತಿದೆ.

ಕೊರೊನಾ ಸೋಂಕಿಗೆ ಒಳಗಾಗಿ ಮನೆಯಲ್ಲಿಯೇ ಗುಣಮುಖರಾದವರಲ್ಲಿ ಹೆಚ್ಚಾಗಿ ಬ್ಲ್ಯಾಕ್ ಫಂಗಸ್ ಸಮಸ್ಯೆ ಕಾಡುತ್ತಿದೆ. ಆದರೆ ಕೊರೊನಾ ಎರಡು ಡೋಸ್ ಲಸಿಕೆ ಪಡೆದವರಲ್ಲಿ ಬ್ಲ್ಯಾಕ್ ಫಂಗಸ್ ಸಮಸ್ಯೆ ಅಷ್ಟಾಗಿ ಕಾಡುವುದಿಲ್ಲ ಎನ್ನುತ್ತಾರೆ ಖ್ಯಾತ ವೈದ್ಯರಾದ ಡಾ. ದೀಪಕ್ ಹಲ್ದೀಪುರ್.

ಕೊರೊನಾ ವೈರಸ್ ಸೋಂಕಿಗೆ ತುತ್ತಾದವರಲ್ಲಿ ಹೆಚ್ಚಾಗಿ ಬ್ಲ್ಯಾಕ್ ಫಂಗಸ್ ಸೊಂಕು ಕೂಡ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅನಾರೋಗ್ಯ ಕಾಣಿಸಿಕೊಂಡ್ರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ವೈದ್ಯರ ಸಲಹೆಯ ಮೇರೆಗೆ ಔಷದೋಪಚಾರವನ್ನು ಮಾಡುವುದು ಒಳಿತು.

 
 
 
 
 
 
 
 
 
 
 

Leave a Reply