ಮಣಿಪಾಲ ಕ್ಯಾಂಪಸ್ ನಲ್ಲಿ ದಿನೇದಿನೇ ಪಾಸಿಟಿವಿಟಿ ರೇಟ್ ಹೆಚ್ಚಾಗುತ್ತಿದೆ~ಸಚಿವ ಸುಧಾಕರ್

 
ಉಡುಪಿ: ದಿನೇದಿನೇ ಪಾಸಿಟಿವಿಟಿ ರೇಟ್ ಹೆಚ್ಚಾಗುತ್ತಿದೆ​​. ಒಂದೇ ಸಂಸ್ಥೆಯಲ್ಲಿ 950 ಕ್ಕಿಂತಲೂ ಹೆಚ್ಚು ಪ್ರಕರಣ ದಾಖಲಾಗಿದೆ.​ ಮಣಿಪಾಲ ಕ್ಯಾಂಪಸ್ ನಲ್ಲಿ 11 ಸಾವಿರಕ್ಕೂ ಹೆಚ್ಚು ಜನ ಇದ್ದಾರೆ.
ನಿರ್ದಿಷ್ಟ ಕ್ರಮಕ್ಕೆ ಡಿಸಿಗೆ ಸೂಚಿಸಲಾಗಿದೆ ಎಂದು ಮಣಿಪಾಲದಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಸುಧಾಕರ್, ಕ್ಯಾಂಪಸ್ ನಲ್ಲಿ 9000 ಕ್ಕೂ ಹೆಚ್ವು ಟೆಸ್ಟ್ ಆಗಿದೆ. ವಿದ್ಯಾರ್ಥಿಗಳಿಗೆ ಸೋಂಕಿನ ಲಕ್ಷಣ ಇಲ್ಲ ಎಂಬುದು ಸಮಾಧಾನಕರ ವಿಷಯ.​ ​
ವಿದ್ಯಾರ್ಥಿಗಳು ಕೊರೋನಾ ಪಸರಿಸುವ ವಾಹಕ ಆಗುತ್ತಾರೆ​. ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಮುಗಿದ ಮೇಲೆ ಮನೆಗೆ ಕಳುಹಿಸಲಾಗುವುದು. ಮಾಹೆ ವಿವಿಗೂ ಸೂಕ್ತ ಮುಂಜಾಗೃತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಮಣಿಪಾಲದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಇರೋದ್ರಿಂದ ಕೊರೋನಾ ಪಸರಿಸಿದೆ. ಕೊರೋನಾ ನಿಯಮ ಪಾಲಿಸದಿರುವುದರಿಂದ ಸೋಂಕು ಹಬ್ಬಿದೆ ಎಂದ ಅವರು, ಎಕ್ಸಾಮಿನೇಶನ್ ನಂತರ ಪಾರ್ಟಿ ಮಾಡಿರೋದ್ರಿಂದ ಕೊರೋನಾ ಹಬ್ಬಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

​​

 
 
 
 
 
 
 
 
 
 
 

Leave a Reply